ವಿದ್ಯಾರ್ಥಿನಿಯರು ಜ್ಞಾನದ ದೀವಿಗೆಯಾಗಿ ಹೊರಹೊಮ್ಮಬೇಕು – ಸಂಗಮೇಶ ಬಬಲೇಶ್ವರ

Must Read

ಸಿಂದಗಿ; ಸಿಂದಗಿ ಎಂದರೆ ಜ್ಞಾನದ ತವರೂರು ಅಂತೇಯೇ ಈ ತಾಲೂಕಿನಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಅವುಗಳನ್ನು ಸದುಪಯೋಗ ಪಡೆಸಿಕೊಂಡು ಇಲ್ಲಿ ಕಲಿಯುವ ಬಾಲಕಿಯರು ಜ್ಞಾನದ ದೀವಿಗೆಯಾಗಿ ಹೊರಹೊಮ್ಮಬೇಕು ಎಂದು ದಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಲಹೆ ನೀಡಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದ ಹತ್ತಿರ ಜಿಲ್ಲಾ ಪಂಚಾಯತ ವಿಜಯಪುರ, ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ನಡೆಯುವಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗುಡಿ, ಗುಂಡಾರ, ಮಸೀದಿ, ಚರ್ಚ ಕಟ್ಟಡಗಳಿಗೆ ಹಾಕುವ ಅನುದಾನ ಶಾಲಾ ಕಾಲೇಜುಗಳೀಗೆ ನೀಡಿದ್ದಾದರೆ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಅಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡಿ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, 2020 ರಲ್ಲಿ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು 2 ಕೋಟಿ 43 ಲಕ್ಷ ವೆಚ್ಚದಲ್ಲಿ ವಸತಿ ನಿಲಯಕ್ಕೆ ಅನುದಾನ ಕಲ್ಪಿಸಿ ಶಂಕುಸ್ಥಾಪನೆ ಮಾಡಿದ್ದರು ಇಂದು ಅವರ ಪುತ್ರ ಶಾಸಕನಾಗಿ ಆಯ್ಕೆಯಾಗಿ ಲೋಕಾರ್ಪಣೆಗೊಳಿಸಿದ್ದು ಖುಷಿ ತಂದಿದೆ. ಸರಕಾರಿ ಶಾಲೆಗಳ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಬೇಕಾದರೆ ಹೆಚ್ಚು ಹೆಚ್ಚು ಸರಕಾರದಿಂದ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸಿಕೊಟ್ಟಾಗ ಮಾತ್ರ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಕಾರಣ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ಧತೆಯಿಂದ ಕಲಿತರೆ ಮಾತ್ರ ಸರಕಾರದ ಯೋಜನೆಗೆ ಪ್ರತಿಫಲ ದೊರೆತಂತಾಗುತ್ತದೆ ಅಲ್ಲದೆ ವಸತಿ ನಿಲಯ ಕಂಪೌಂಡ ನಿರ್ಮಿಸಲು ಹಾಗೂ ಮೇಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಜಮೀನು ಮಂಜೂರಿಗೆ ಅನುದಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟಾರಗಸ್ತಿ, ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಸಾಯಬಣ್ಣಾ ಪುರದಾಳ, ಶರಣಪ್ಪ ಸುಲ್ಪಿ, ನಿರ್ಮಿತ ಕೇಂದ್ರದ ಅಭಿಯಂತರ ಸರ್ಪರಾಜ ಜಾಗೀರದಾರ ವೇದಿಕೆ ಮೇಲಿದ್ದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಎ.ಎ.ಮಾಗಿ, ಆರೋಗ್ಯ ಶಿಕ್ಷನಾಧಿಕಾರಿ ಶ್ರೀಧರ ಕುಲಕರ್ಣಿ, ಗಿರೀಶ ಕಂಠಿಗೊಂಡ, ಸೈಪನ್ ಮುಲ್ಲಾ, ಪ್ರಭಾಕರ ಬಿರಾದಾರ, ಸಂಗನಗೌಡ ಪಾಟೀಲ, ಧಶರಥ ರಾಠೋಡ, ನಾನಾಗೌಡ ಸಿದ್ದರಡ್ಡಿ, ಮಹಿಬೂಬ ನಾಯ್ಕೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಸತಿ ನಿಲಯದ ವಿದ್ಯಾರ್ಥಿ ಪಲ್ಲವಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಈರಮ್ಮ ಪಾಟೀಲ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಪ್ಪ ಆಶಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎ.ರಾಠೋಡ ನಿರೂಪಿಸಿದರು. ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತಿರ್ಣಾಧಿಕಾರಿ ರವೀಂದ್ರ ಬಂಥನಾಳ ಸ್ವಾಗತಿಸಿದರು. ನಂದಪ್ಪ ಆನಗೊಂಡ ವಂದಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group