spot_img
spot_img

ನೈಜ ಘಟನೆಯನ್ನಾಧರಿಸಿದ ‘ ಕಾಣದ ದಾರಿ ‘ ಕಾದಂಬರಿ

Must Read

- Advertisement -

ಅನುಮಾನವೆಂಬ ಹುತ್ತದೊಳಗೆ ಸಿಲುಕಿಕೊಂಡು ವಿಷವರ್ತುಲ ಸೃಷ್ಟಿಸಿಕೊಳ್ಳುವ ಧಾವಂತ ಬದುಕಿನ ದಾರುಣ ಕಥೆ ‘ಕಾಣದ ದಾರಿ’ ಕಾದಂಬರಿ ಎಂದು ಕವಯತ್ರಿ, ಪ್ರತಿಮಾ ಹಾಸನ ತಿಳಿಸಿ ದರು.

319ನೇ ಮನೆ ಮನೆ ಕವಿಗೋಷ್ಠಿಯನ್ನು ಹಾಸನದ ಹೇಮಾವತಿ ನಗರದಲ್ಲಿರುವ ಶ್ರೀಮತಿ ಜಯಶ್ರೀ ಬಾಲಕೃಷ್ಣ ಹಾಗು  ಹೆಚ್.ವಿ ಬಾಲಕೃಷ್ಣ ರವರ ನಿವಾಸದಲ್ಲಿ ಯುವಕವಿ ದಯಾನಂದ ಎಸ್ ರವರ ಕಾಣದ ದಾರಿ ಕಾದಂಬರಿ ಕುರಿತು ಮಾತನಾಡಿದರು.

ಕಾಣದ ದಾರಿ ಕಾದಂಬರಿಯು ನೈಜ ಘಟನೆಗಳನ್ನು ಆಧರಿಸಿ ದಂತಹ ವಿವಾಹ ಸಂಬಂಧ ಮುರಿದು ಹೋದಂತಹ ವಿಚಾರವನ್ನು ಒಳಗೊಂಡ ಸಾಮಾಜಿಕ ಕಳಕಳಿಯನ್ನು ಒಳಗೊಂಡಂತಹ ಕಾದಂಬರಿಯಾಗಿದೆ. ಅನುಮಾನ ಎಂಬ ಪೆದ್ದರೋಗ ಬೆಳೆಸಿಕೊಂಡು ತನ್ನ ಸಂಸಾರದ ಜೊತೆಗೆ ಅಕ್ಕನ ಸಂಸಾರವನ್ನು ಹಾಳು ಮಾಡಿದಂತಹ ನಿಂಗಪ್ಪನ ಬಗ್ಗೆ ಮತ್ತು ವಿವಾಹದ ನಂತರ ಡಿವರ್ಸ್ ಎಂದು ಪದ್ಮಾಳನ್ನು ಸಾಂಸಾರಿಕ ಜೀವನದಿಂದ ಹೊರ ಹಾಕಿದ ನಂತರದಲ್ಲಿ ಆತ ಕಾಣದ ದಾರಿಯಲ್ಲಿ ನಿಂತು ಮುಂದೆ ನಾನು ಹೇಗೆ ಬದುಕಿನ ದಾರಿಯಲ್ಲಿ ಸಾಗಬೇಕು ಎಂದು ಮಾಡಿದ್ದು ತಪ್ಪೇ? ಸರಿಯೇ? ಎಂದು ಗೊಂದಲದಲ್ಲಿ ಹೇಗೆ ಸಾಗಲಿ ಎಂದು ಯೋಚಿಸುತ್ತಾನೆ ಎಂಬುದು.

- Advertisement -

ಪದ್ಮ ಳಿಗೆ ಆದ ಅನ್ಯಾಯದ ಕುರಿತು ಯೋಚಿಸಿ ಸಾಮಾಜಿಕ ಕಳಕಳಿಯ ಕಾದಂಬರಿಯಾಗಿದೆ. ಇತರ ಕಾದಂಬರಿಗಳಿಗಿಂತಲೂ ವಿಭಿನ್ನವಾಗಿದ್ದು ಸಾಮಾಜಿಕ ಕಳಕಳಿಯನ್ನು ಒಳಗೊಂಡಿದ್ದು. ಅನುಮಾನದಿಂದ ತನ್ನ ಸಂಸಾರವನ್ನು ಹಾಳು ಮಾಡಿಕೊಂಡಿರುವ ವಿಚಾರವನ್ನು ಹಾಗೂ ಮದುವೆ ಎಂಬ ಪವಿತ್ರ ಬಂಧನವನ್ನು ಪೊಲೀಸ್ ಸ್ಟೇಷನ್ ಕೋರ್ಟ್ ಕಚೇರಿ ಎಂದು ಯಾವ ರೀತಿ ಮುರಿದುಕೊಳ್ಳುತ್ತಾನೆ ಎಂಬ ವಿಚಾರವನ್ನು ಬಹಳ ಸೊಗಸಾಗಿ ಕಾದಂಬರಿಯಲ್ಲಿ ಎಳೆಗಳನ್ನು ಎಳೆದುಕೊಂಡು ಹೋಗಿದ್ದಾರೆ. ಓದುಗರ ಮನಸ್ಸನ್ನು ಭಾವುಕರನ್ನಾಗಿ ಸುವಂತಹ ಕಾದಂಬರಿ ಆಗಿದ್ದು. ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.ಎಂದರು.

ವೇದಿಕೆಯಲ್ಲಿ ಹಿರಿಯರಾದ ಎ.ವಿ ರುದ್ರಾಪ್ಪಾಜಿ, ಸಹಸಂಚಾಲಕರಾದ ಸಮುದ್ರವಳ್ಳಿ ವಾಸು ಉಪಸ್ಥಿತರಿದ್ದರು.

ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಸಾಹಿತ್ಯ ರಚನೆಯಾಗಲಿ-ಮಧುನಾಯ್ಕ ಲಂಬಾಣಿ

- Advertisement -

ನಂತರ ನಡೆದ ಕವಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕವಿ ಹಾಗು ಸಂಘಟಕರಾದ ಮಧು ನಾಯಕ ಲಂಬಾಣಿಯವರು, ಹಾಸನ ಜಿಲ್ಲೆ ಸಾಹಿತ್ಯ ಮತ್ತು ಕಲೆಯ ಆಗರವಾಗಿದೆ. ಮನೆ ಮನೆ ಕವಿಗೋಷ್ಠಿ ಇಂದು 319 ತಿಂಗಳು ನಿರಂತರವಾಗಿ ನಡೆದು ಮನೆ ಮಾತಾಗಿದೆ.
ಕವಿತೆಗಳಲ್ಲಿ ಹೊಸ ಪದಗಳು ಬರಬೇಕಾದರೆ ನಾವು ಬೇರೆಯವರ ಸಾಹಿತ್ಯ ಓದಲೇ ಬೇಕು. ಗೊರೂರು ಅನಂತರಾಜುರವರ ನೇತೃತ್ವದಲ್ಲಿ ಹಾಸನದ ತುಂಬಾ ಸಾಹಿತ್ಯ ಸಿಂಚನವಾಗಿದೆ. ಕವಿತೆಗಳು ಭಾವ್ಯಕ್ಯತೆ ಮೂಡಿಸುವ
ನೋವು ನಲಿವು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಇಂದು ಮನೆ ಮನೆ ಕವಿಗೋಷ್ಠಿಯಲ್ಲಿ ಮೂಡಿಬಂದವು.ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಪದ್ಮ ಅಶ್ವಥ್, ಯಶೋಧಮ್ಮ, ಕೆ.ಎಂ ಲಕ್ಷ್ಮಿ, ಮಂಜುಳ. ಹೇಮಲತಾ,ಜಯಶ್ರೀ ಬಾಲಕೃಷ್ಣ, ಜೆ.ಆರ್ ರವಿಕುಮಾರ, ಲಲಿತ ಎಸ್, ಬಸವರಾಜು ಹೆಚ್.ಎಸ್, ಹೆಚ್.ಬಿ ಚೂಡಾಮಣಿ, ವೇದ ಶಿವಕುಮಾರ್, ಎನ್.ಕೆ ಶ್ರೀನಿವಾಸ ಶೆಟ್ಟಿ, ಆರ್.ವೆಂಕಟೇಶ, ಎ ನಂಜಪ್ಪ, ತಮ್ಮಣ್ಣಯ್ಯ.ಬಿ ಅನಂತಮೂರ್ತಿ, ರುಮಾನ ಜಬೀರ್, ಮಂಜುಳಾ ಉಮೇಶ್, ನಿಶ್ಚಿತ. ಬಿ ನಾಗರಾಜ್ ದೊಡ್ಡಮನಿ ಚಿದಾನಂದ ಕೆ.ಎನ್ ಮುಂತಾದ ಸಹೃಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group