ಕಿಚ್ಚ ಸುದೀಪ್ ಅವರು ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಳ್ಳದೆ, ಬೇರೆ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಿರೂಪಕ, ನಿರ್ಮಾಪಕ-ನಿರ್ದೇಶಕ, ಗಾಯಕ ಉದ್ಯಮಿ ಹೀಗೆ ಹಲವು ಕಡೆ ಕಿಚ್ಚ ಸುದೀಪ್ ಅವರು ಹೆಸರು ಮಾಡಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರು ಈಗ ತಮ್ಮ ವಿಕ್ರಂತ್ ರೋಣ ಪ್ರಮೋಷನ್ ಹಾಗೂ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಗಷ್ಟೇ ಬುರ್ಜ್ ಖಲೀಫಾ ದಲ್ಲಿ ವಿಕ್ರಾಂತ್ ರೋಣದ ಟ್ರೈಲರ್ ಜೊತೆಗೆ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆ ಹಾಗು ಕಿಚ್ಚ ಸುದೀಪ್ ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಕನ್ನಡಪರ ಹೋರಾಟಗಾರರು ಸನ್ಮಾನ ಮಾಡಿದರು.
ಇನ್ನೋವೇಟಿವ್ ಫಿಲಂ ಸಿಟಿ ಯಲ್ಲಿ ಸುದೀಪ್ ಅವರನ್ನು ಸನ್ಮಾನಿಸಿ ಈ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಧರಿಸಿದ್ದ ವಾಚ್ ಇದೀಗ ಸುದ್ದಿಯಾಗಿದೆ. ಇದೀಗ ಎಲ್ಲರ ಗಮನವನ್ನು ಸೆಳೆದಿರುವ ಸುದೀಪ್ ಅಂದು ಧರಿಸಿದ ವಾಚ್ ರಿಚರ್ಡ್ ವಿಲ್ಲೆ ಕಂಪನಿಯದು. ಸ್ವಿಸ್ ಮೂಲದ ಈ ಕಂಪನಿ 2001 ರಲ್ಲಿ ಸ್ಥಾಪನೆಗೊಂಡಿದ್ದು ಐಷಾರಾಮಿ ವಾಚುಗಳನ್ನು ಸಿದ್ಧಪಡಿಸುವುದಕ್ಕೆ ಈಗ ಕಂಪನಿ ಹೆಸರುವಾಸಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆಬೇರೆ ಸೆಲೆಬ್ರಿಟಿಗಳು ಈ ವಾಚುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ.
ಈ ಕಂಪನಿಗಳು ಸಿದ್ಧಪಡಿಸುವ ವಾಚ್ ನ ಕನಿಷ್ಠ ಬೆಲೆಯೇ 1 ಕೋಟಿ ರೂಪಾಯಿಗೂ ಅಧಿಕ ವಾಗಿರುತ್ತದೆ. ಅಂದು ಸುದೀಪ್ ಧರಿಸಿದ್ದ ವಾಜ್ ಬೆಲೆ ಬರೋಬ್ಬರಿ 1.52 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಸುದೀಪ್ ಅವರು ಒಂದೂವರೆ ಕೋಟಿಗೂ ಹೆಚ್ಚು ಬೆಲೆಬಾಳುವಂತಹ ವಾಚನ್ನು ಕಟ್ಟಿಕೊಂಡಿರುವುದನ್ನು ನೋಡಿದ ಫ್ಯಾನ್ಸ್ ಕಿಚ್ಚನ ವಾಚ್ ಕ್ರೇಜ್ ಬಗ್ಗೆ ತಿಳಿದುಕೊಂಡಿದ್ದಾರೆ. ರಿಚರ್ಡ್ ಮಿಲ್ಲೆ RM011 ವಾಚ್ ಇದು ಆಗಿದ್ದು ದುಬಾರಿ ವಾಚ್ ಗಳಲ್ಲಿ ಇದು ಕೂಡ ಒಂದು. ವಿಶೇಷವೇನೆಂದರೆ ಈ ವಾಚ್ ನ ಡಯಲ್ ನಲ್ಲಿ ಡೈಮಂಡ್ ಸ್ಟೋನ್ ಗಳಿವೆ, ಅದಕ್ಕಾಗಿ 1.30 ಕೋಟಿ ಬೆಲೆಯನ್ನು ಹೊಂದಿದೆ…