spot_img
spot_img

“ಪರಿಸರ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ” ಸುಂದರ್ ಲಾಲ್ ಬಹುಗುಣ

Must Read

spot_img
- Advertisement -

ಚಿಪ್ಕೋ ಮತ್ತು ಅಪ್ಪಿಕೋ ಚಳುವಳಿಯ ಹರಿಕಾರ ಎಂದೇ ಗುರ್ತಿಸಲ್ಪಟ್ಟಿರುವ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ ರವರು ತಮ್ಮ ಇಡೀ ಜೀವನವನ್ನೇ ಪರಿಸರದ ರಕ್ಷ ಣೆಗಾಗಿ ಮುಡಿಪಾಗಿಟ್ಟಿದ್ದ ಪರಿಸರ ಪ್ರೇಮಿಯ ಅಗಲುವಿಕೆಯಿಂದ ನಮ್ಮೆಲ್ಲರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಬುದ್ಧನ ಆದರ್ಶ ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ನಿಲುವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಸುಂದರ್ ಲಾಲ್ ಬಹುಗುಣ ಅವರ ಪರಿಸರ ಪ್ರೀತಿ ಪರಿಸರ ಕಾಳಜಿ ಪರಿಸರ ಜಾಗೃತಿ ಅನನ್ಯವಾದುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಎಲ್ಲರಿಗೂ ಚಿರಪರಿಚಿತ ಇರುವ ವ್ಯಕ್ತಿತ್ವ ಬಹುಗುಣರದು.ನಮ್ಮ ಪರಿಸರವನ್ನು ಸಂರಕ್ಷಿಸುವ ಮತ್ತು ನಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ದಿಕ್ಕಿನಲ್ಲಿ ನಾವೆಲ್ಲರೂ ಮಾಡಲೇಬೇಕಾದ ಕರ್ತವ್ಯಗಳನ್ನು ಕುರಿತು ಹೇಳುವ ಬಹುಗುಣರು ಪ್ರತಿಯೊಬ್ಬರು ಮರಗಿಡಗಳನ್ನು ನೆಟ್ಟು ಅದರ ರಕ್ಷಣೆಯನ್ನು ಮಾಡಲೇಬೇಕು ಏಕೆಂದರೆ ಮರಗಳು ಮನುಕುಲಕ್ಕೆ ಪ್ರಾಣವಾಯುವನ್ನು ಕೊಡುವ ಕಾರ್ಖಾನೆಗಳು ಇದ್ದಂತೆ ಅವು ನೀಲಕಂಠನಾದ ಶಿವನಂತೆ ವಿಷವನ್ನು ಕುಡಿದು ಆಮ್ಲಜನಕವನ್ನು ಎಲ್ಲರಿಗೂ ನೀಡುತ್ತವೆ,ಹೆತ್ತ ತಾಯಿಯಂತೆ ನಮ್ಮನ್ನು ಪೊರೆಯುವ ಭೂಮಿಯ ವಿನಾಶವನ್ನು ಭವಿಷ್ಯದಲ್ಲಿ ನಾವೆಲ್ಲರೂ ತಪ್ಪಿಸಬೇಕಾದರೆ ಭೂತಾಯಿಯನ್ನು ಗಿಡಮರಗಳಿಂದ ಕಂಗೊಳಿಸುವಂತೆ ಮಾಡಬೇಕು ಎಂಬುದು ಸುಂದರ್ ಲಾಲ್ ಅವರ ಆಶಯವಾಗಿತ್ತು.ಅವರು ಹಳ್ಳಿ ಹಳ್ಳಿಗೂ ನಡೆಯುತ್ತಾ ಸಾಗಿ ಅಲ್ಲಿಯ ಜನರನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ಎಲ್ಲರ ಜೊತೆಗೆ ಚರ್ಚಿಸಿ ಅವರ ಮನ ಒಲಿಸಿ ಅರಣ್ಯಗಳನ್ನು ಸಂರಕ್ಷಿಸುವ ಅವಶ್ಯಕತೆ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದರು.

ಪರ್ವತಶ್ರೇಣಿಯ ಹಳ್ಳಿ ಹಳ್ಳಿಗಳಿಗೂ ಭೇಟಿ ಮಾಡುವ ಉದ್ದೇಶದಿಂದ ಕಾಶ್ಮೀರದಿಂದ ಕೋಹಿಮಾದ ವರೆಗೆ ಸುಮಾರು 4000 ಕಿಲೋ ಮೀಟರ್ ಗಳ ದೂರವನ್ನು ತಮ್ಮ ಸಹಚರರೊಂದಿಗೆ ಕಾಲ್ನಡಿಗೆ ಮೂಲಕವೇ ಹೋಗಿ ಜನರಲ್ಲಿ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಿದರು.

- Advertisement -

ಪರಿಸರ ಹಾಳು ಮಾಡುವ ಅದೆಷ್ಟೋ ಕಾರ್ಯ ಚಟುವಟಿಕೆಗಳು ನಡೆಯುವ ಸಂದರ್ಭದಲ್ಲಿ ಸುಂದರ್ ಲಾಲ್ ಬಹುಗುಣ ಅವರು ಎಲ್ಲಾ ಜನರನ್ನು ಒಟ್ಟುಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರದ ವಿರುದ್ಧ ನಡೆಯುವ ಕಾರ್ಯಗಳನ್ನು ಸದೆ ಪಡೆಯುವಲ್ಲಿ ಯಶಸ್ವಿಯಾದರು. ನೈರೋಬಿಯಾದಲ್ಲಿ ನೆಡೆದ ‘ವಿಶ್ವ ಶಕ್ತಿ ಮೇಳ’ದಲ್ಲಿ ತಲೆ ಮೇಲೆ ಕಟ್ಟಿಗೆಯ ಹೊರೆಯನ್ನು ಹೊತ್ತು ನಡೆದು ಇಂಧನದ ಸಮಸ್ಯೆ ಬಗ್ಗೆ ವಿಶ್ವದ ಗಮನ ಸೆಳೆದಿದ್ದರು.ಚಿಪ್ಕೋ ಚಳುವಳಿ ಹಿಮಾಲಯ ರಕ್ಷಿಸಿ ಎಂಬ ಜಾಥಾ ತೆಹ್ರಿ ಹೈಡಲ್ ಪ್ರಾಜೆಕ್ಟ್ ಗಂಗಾ ಯೋಜನೆ ವಿರುದ್ಧ ಹೋರಾಟ ಮಾಡುವ ಮೂಲಕ ಪರಿಸರದ ವಿರುದ್ಧ ನಡೆಯುವ ಕಾರ್ಯಚಟುವಟಿಕೆಗಳನ್ನು ಸದೆಬಡಿಯುವಲ್ಲಿ ಶ್ರಮಿಸಿದ್ದಾರೆ.

ಅರಣ್ಯ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ ಸುಂದರ್ ಲಾಲ್ ಬಹುಗುಣ ಅವರು ಚಿಪ್ಕೋ ಚಳುವಳಿಯ ರೂವಾರಿಗಳಾಗಿ ಉತ್ತರಾಖಂಡದಲ್ಲಿ 1970 ರಲ್ಲಿ ಮರಗಿಡಗಳನ್ನು ನಿರ್ದಯವಾಗಿ ಕಡಿಯಲಾಗುತ್ತಿತ್ತು ಅಂತಹ ಸಂದರ್ಭದಲ್ಲಿ ಅಲ್ಲಿಯ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಎಲ್ಲರೊಡಗೂಡಿ ಭಾರೀ ಪ್ರಮಾಣದಲ್ಲಿ ಮರ ಕಡಿಯಲು ಬಂದ ಜನರನ್ನು ತಡೆದು ಅಲ್ಲಿಯ ಜನರು ಮರಗಳನ್ನು ಅಪ್ಪಿ ಮೂಲಕ ಪ್ರತಿಭಟನೆ ನಡೆಸಿದ್ದರು.

ನಂತರ ತೇಹ್ರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಮುನ್ನಡೆದು ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು.ಅಲ್ಲದೆ ಸುಂದರ್ ಲಾಲ್ ಬಹುಗುಣ ಅವರು ಹಿಮಾಲಯ ಪರ್ವತ ಪ್ರದೇಶದ ಬಗ್ಗೆ ಬಹಳಷ್ಟು ಕಾಳಜಿ ಹೊಂದಿ ಅಲ್ಲಿ ನಡೆಯುವ ಪರಿಸರ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಹಿಮಾಲಯದ ರಕ್ಷಣೆ ಮಾಡಿದ್ದರು.

- Advertisement -

ರೈತರು ಮತ್ತು ಬಡ ಕುಟುಂಬಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಬಹುಗುಣರು ಹತ್ತು ಹಲವಾರು ರೀತಿಯ ಪರಿಸರವನ್ನು ಕುರಿತ ಆಂದೋಲನಗಳು ಉಪವಾಸ ಸತ್ಯಾಗ್ರಹಗಳನ್ನು ಮಾಡಿ ದೇಶದಲ್ಲಿ ಪರಿಸರ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಿದಂತೆ ಅರಣ್ಯನಾಶವು ಕೂಡ ಸಂಭವಿಸುತ್ತದೆ ನೀರು ಅರಣ್ಯ ಮಣ್ಣು ಹೀಗೆ ಎಲ್ಲ ರೀತಿಯ ಪರಿಸರ ಸಂಪತ್ತು ಪ್ರತೀ ಮಾನವನ ಭವಿಷ್ಯಕ್ಕೆ ಅನಿವಾರ್ಯವಾಗಿರುತ್ತದೆ ಹಾಗಾಗಿ ಇವೆಲ್ಲವುಗಳನ್ನು ನಾವೇ ನಾಶ ಮಾಡದೆ ಅವೆಲ್ಲವನ್ನೂ ರಕ್ಷಿಸಿಕೊಳ್ಳಲೇಬೇಕಾದ ತುರ್ತು ಅನಿವಾರ್ಯತೆ ಇದೆ ಯುವ ಪೀಳಿಗೆ ಪರಿಸರ ರಕ್ಷಣೆಯಲ್ಲಿ ಜಾಗೃತವಾಗಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವತ್ತ ಪ್ರೇರಣೆಯಾಗಬೇಕು ಅಲ್ಲದೆ ವಿದ್ಯುತ್ ಉತ್ಪಾದನೆಗಾಗಿ ಪರಿಸರಕ್ಕೆ ಮಾರಕವಾಗಿರುವ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ಕೈಬಿಡಬೇಕು ದೇಶದಲ್ಲಿ ಸಮೃದ್ಧವಾಗಿ ಲಭ್ಯವಾಗುವ ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂಬುದು ಸುಂದರ್ ಲಾಲ್ ಬಹುಗುಣ ಅವರ ಆಶಯವಾಗಿತ್ತು.

ಯಾವುದೇ ರೀತಿಯ ಪ್ರಶಸ್ತಿ ಪುರಸ್ಕಾರಗಳನ್ನು ಬಯಸದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಖ್ಯಾತ ಪರಿಸರವಾದಿ ಪರಿಸರ ರಕ್ಷಣೆಯ ಚಿಂತಕ ಇನ್ನಿಲ್ಲ ಎಂಬುದೇ ನಮ್ಮೆಲ್ಲರ ಮನಸ್ಸಿನ ದುಗುಡ. ಅವರಲ್ಲಿದ್ದ ಪರಿಸರ ಪ್ರೀತಿ ಪರಿಸರ ಸಂರಕ್ಷಣೆಯ ಮಾರ್ಗೋಪಾಯಗಳು ನಮ್ಮೆಲ್ಲರ ಜೀವನದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಬೆಳೆಸುವಂತಾಗಲಿ ಮತ್ತು ಅವೆಲ್ಲವೂ ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಇಂತಹ ಮಹಾನುಭಾವಿಗಳ ನಿಸ್ವಾರ್ಥ ಸೇವೆ ಸಾರ್ಥಕವಾಗುತ್ತದೆ.


ಪ್ರೊ ಸುಧಾ ಹುಚ್ಚಣ್ಣವರ
ಉಪನ್ಯಾಸಕರು ಹಾಗೂ ಲೇಖಕರು
ಶಿರಹಟ್ಟಿ ಜಿಲ್ಲೆ ಗದಗ.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group