spot_img
spot_img

ಬಾಹ್ಯಾಕಾಶದಿಂದಲೇ ಸಂದೇಶ ಕಳಿಸಿದ ಸುನೀತಾ ವಿಲಿಯಮ್ಸ್ 

Must Read

- Advertisement -

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಭಾರತೀಯ ಮೂಲದ ಖ್ಯಾತ ಖಗೋಳವಿಜ್ಞಾನಿ ಸುನಿತಾ ವಿಲಯಮ್ಸ್ ಹಾಗೂ ಬುಚ್ ವಿಲ್ಮೋರ್ ಖಗೋಳ ವಿಜ್ಞಾನಿಗಳು ಜೂ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಪೂರ್ವ ಯೋಜನೆಯಂತೆ ಅವರು ಜೂ. 14 ರಂದೇ ಭೂಮಿಗೆ ಹಿಂದಿರುಗಬೇಕಿತ್ತು. ಆದರೆ ಅವರನ್ನು ಹೊತ್ತೊಯ್ದ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರ ವಾಪಸಾತಿಯನ್ನು ಜೂ. 26 ಕ್ಕೆ ಮುಂದೂಡಲಾಗಿತ್ತು. ಆದರೆ ಅಷ್ಟು ದಿನಗಳವರೆಗೂ ತಾಂತ್ರಿಕ ದೋಷಗಳು ಸರಿಹೋಗದ ಕಾರಣ, ಅದರ ಜೊತೆಯಲ್ಲೇ ಮತ್ತಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಪುನಃ ವಾಪಸ್ಸಾತಿ ದಿನಾಂಕವನ್ನು ಮುಂದೂಡಲಾಗಿತ್ತು . ಇದೀಗ ಅಲ್ಲಿಂದಲೇ ತಾವು ವಾಪಸ್ಸಾಗುವ ಕುರಿತು ಸಂದೇಶ ಕಳುಹಿಸಿದ್ದಾರೆ.

ಆತಂಕದಿಂದಿರುವ ಜನರಿಗೆ ಜುಲೈ 10 ರಂದು ಇಬ್ಬರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಲೈವ್ ಕಾನ್ಫರೆನ್ಸ್‌ನಲ್ಲಿ ಸುನೀತಾ ವಿಲಿಯಮ್ಸ್, ಈ ಬಾಹ್ಯಾಕಾಶ ನೌಕೆಯು ನಮ್ಮನ್ನು ಮನೆಗೆ ಕರೆತರುತ್ತದೆ, ಯಾವುದೇ ತೊಂದರೆಯಿಲ್ಲ ಎಂದು ನನ್ನಲ್ಲಿ ಆತ್ಮವಿಶ್ವಾಸವಿದೆ. ಅಷ್ಟೇ ಅಲ್ಲದೆ ಇಂಧನಗಳ ಬಗ್ಗೆ ಹಾಗೂ ಉಳಿದ ನ್ಯೂನತೆಗಳ ಕುರಿತು ನಾವು ಈಗಲೇ ಬೆಳಕು ಹರಿಸುತ್ತಿದ್ದೇವೆ. ರಾಸಾಯನಿಕ ಸೋರಿಕೆ, ಇತರ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಅನೇಕ ವ್ಯಕ್ತಿಗಳನ್ನು ಬಾಹ್ಯಾಕಾಶಕ್ಕೆ ಏಕಕಾಲಕ್ಕೆ ಕೊಂಡೊಯ್ಯುವಂಥ ಆಕಾಶಕಾಯವನ್ನು ಸೃಷ್ಟಿಸಬೇಕಾಗಿದ್ದರಿಂದ ಈ ಬಾರಿ ಬೋಯಿಂಗ್ ನ ಸ್ಟಾರ್ ಲೈನ್ (Boeing’s Star Line) ಆಕಾಶಕಾಯವನ್ನು ಅನೇಕ ಪ್ರಯೋಗಗಳಿಗೆ ಒಡ್ಡಲಾಗಿತ್ತು. ಹಲವಾರು ವೈಫಲ್ಯಗಳು, ಆ ವೈಫಲ್ಯಗಳ ಸರಿಪಡಿಸುವಿಕೆ – ಇವೆಲ್ಲವುಗಳನ್ನು ಮುಗಿಸಿಕೊಂಡು ಆನಂತರ ಅಂತಿಮವಾಗಿ ಸುರಕ್ಷಿತವಾಗಿ ಪ್ರಯಾಣಿಸಬಹುದಾದ ಸ್ಟಾರ್ ಲೈನ್ ಆಕಾಶಕಾಯ ಸಿದ್ಧವಾಯಿತು. ಅದರ ಪ್ರಯೋಗಾರ್ಥವಾಗಿಯೇ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರನ್ನು ಐಎಸ್ಎಸ್ ಗೆ ಕಳುಹಿಸಲಾಗಿದೆ. ರಿಮೋಟ್ ಮೂಲಕ ಮಾಡುವಂಥ ರಿಪೇರಿಗಳನ್ನು ಭೂಮಿಯಿಂದಲೇ ಕೈಗೊಳ್ಳಲಾಗಿದೆ. ಆದರೆ ದುರಾದೃಷ್ಟವಶಾತ್, ಆಕಾಶನೌಕೆಯಲ್ಲಿ ಒಂದು ರಿಪೇರಿ ಮಾಡಿದರೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲಿಯ ಸಮಸ್ಯೆ ಉಲ್ಬಣವಾಗುತ್ತಿದೆ ಎಂಬುದೇ ಆತಂಕಕಾರಿ ವಿಷಯವಾಗಿದೆ.

- Advertisement -

ಅವುಗಳನ್ನು ಬೇಗನೇ ಸರಿಪಡಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಸಲಿಗೆ, ಅದರಲ್ಲಿರುವ ಇಂಧನ 41 ದಿನಗಳಿಗೆ ಸಾಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ ತಾಂತ್ರಿಕ ದೋಷ ಬೇಗನೇ ನಿವಾರಣೆಯಾಗದಿದ್ದರೆ ಇಂಧನ ಖಾಲಿಯಾಗುತ್ತಾ ಹೋಗುತ್ತದೆ. ಇದರಿಂದ ಗಗನಯಾತ್ರಿಗಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ.

ತಾಂತ್ರಿಕ ದೋಷಗಳು ನಿವಾರಣೆಯಾಗುವ ಹೊತ್ತಿಗೆ ಇಂಧನ ಖಾಲಿಯಾದರೆ ಅವರು ಭೂಮಿಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಆದರೆ ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ನಿಟ್ಟಿನಲ್ಲಿ ನಾಸಾ ಹಾಗೂ ಬೋಯಿಂಗ್ ನ ನೂರಾರು ತಂತ್ರಜ್ಞರು ಹಾಗೂ ಸ್ಟಾರ್ ಲೈನ್ (Star Line) ಆಕಾಶಕಾಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಬೋಯಿಂಗ್ ವಿಶೇಷ ಪರಿಣಿತರ ತಂಡ, ಭೂಮಿಯಿಂದಲೆ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಅತಿ ಶೀಘ್ರವಾಗಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ಸಾಗುವ ಕುರಿತು ಭರವಸೆ ನೀಡಿದ್ದಾರೆ.

ಘಟನೆಯಲ್ಲಿ ನಾಸಾ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ನೌಕೆಯಲ್ಲಿದ್ದ ತಾಂತ್ರಿಕ ದೋಷಗಳು ಮೊದಲೇ ತಿಳಿದಿದ್ದವು. ಆದರೆ, ಇದೆಲ್ಲ ದೊಡ್ಡ ಸಮಸ್ಯೆ ಅಲ್ಲ ಎಂದು ನಿರ್ಲಕ್ಷಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ.

- Advertisement -

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೂನ್ 5 ರಂದು ಬಾಹ್ಯಾಕಾಶ ತಲುಪಿದರು. ಮಿಷನ್ ಹೋಗುವಾಗಲೇ ಅನೇಕ ತೊಂದರೆಗಳ ಮೂಲಕ ಹೋಯಿತು. ತಾಂತ್ರಿಕ ದೋಷದಿಂದ ಎರಡು ಬಾರಿ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ಬೋಯಿಂಗ್ ಸ್ಟಾರ್‌ಲೈನರ್ ಪ್ರೋಬ್‌ನಲ್ಲಿ ಹೀಲಿಯಂ ಅನಿಲ ಸೋರಿಕೆಯು ಅಂತಿಮ ಹಂತದಲ್ಲಿ ಪ್ರಯಾಣವನ್ನು ಹೆಚ್ಚು ಕಷ್ಟಕರವಾಗಿಸಿತು. ಇಲ್ಲಿಯವರೆಗೆ ಬಾಹ್ಯಾಕಾಶ ನೌಕೆಯಲ್ಲಿ ಐದು ಬಾರಿ ಹೀಲಿಯಂ ಸೋರಿಕೆಯಾಗಿದೆ.

ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಪ್ರೋಬ್ ಅನ್ನು ಬಳಸಿಕೊಂಡು ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಚರರನ್ನು ಮರಳಿ ಕರೆತರುವ ಸಾಧ್ಯತೆಯನ್ನು ವಿಶ್ವಾದ್ಯಂತ ಚರ್ಚಿಸಲಾಗುತ್ತಿದೆ. ಆದರೆ, ಅವರ ನೌಕೆಯನ್ನು ಯಾಕೆ ಬಳಸಿಕೊಳ್ಳಬೇಕು ಎಂಬ ಅಹಂಕಾರದಿಂದ ನಾಸಾ ಇದು ಅಗತ್ಯವಿಲ್ಲ ಎಂಬ ನಿಲುವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಗಗನಯಾತ್ರಿಗಳು ಸಾಮಾನ್ಯವಾಗಿ 45 ದಿನಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಬಹುದು. ಕೆಲವು ಅಪರೂಪದ ಸಂದರ್ಭಗಳಲ್ಲಿ ಇದು 72 ದಿನಗಳವರೆಗೆ ಮುಂದುವರಿಯಬಹುದು.
ಈ ಸಮಯದೊಳಗೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ತರಬಹುದು ಎಂದು ನಾಸಾ ದೃಢವಾದ ನಂಬಿಕೆಯನ್ನು ಹೊಂದಿದೆ. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯು ಕೂಡ ಈ ವಿಜ್ಞಾನಿಗಳು ಜೀವಭಯವನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಈ ಹಿಂದೆ ರಷ್ಯಾ ಹಾರಿಸಿದ ಉಪಗ್ರಹವೊಂದು ಕೆಲವೇ ದಿನಗಳ ಹಿಂದೆ ಅಂತರಿಕ್ಷದಲ್ಲಿ ನಾಶ ಹೊಂದಿ ನೂರಾರು ಚೂರುಗಳಾಗಿವೆ. ಈ ಚೂರುಗಳು ಅಂತರಿಕ್ಷದಲ್ಲಿಯೇ ಸುತ್ತುತ್ತಿವೆ. ಈ ಚೂರುಗಳು ಯಾವ ಕ್ಷಣದಲ್ಲಿ ಬೇಕಾದರೂ ಸುನೀತಾರವರು ಇರುವ ಆಕಾಶಕಾಯಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಹಾಗೇನಾದರೂ ಡಿಕ್ಕಿ ಹೊಡೆದರೆ ಇವರು ಇರುವ ಬೋಯಿಂಗ್ ಸ್ಟಾರ್ ಲೈನರ್ ಕೂಡ ನಾಶ ಹೊಂದುವ ಪರಿಸ್ಥಿತಿ ಎದುರಾಗಿದೆ.

*ಸುನೀತಾ ವಿಲಿಯಮ್ ರವರ ತಂದೆ ದೀಪಕ್ ಪಾಂಡ್ಯ ಭಾರತದ ಗುಜರಾತ್ ನವರು. ನಂತರದ ದಿನಗಳಲ್ಲಿ ಉದ್ಯೋಗಕ್ಕಾಗಿ ಅಮೆರಿಕಾಗೆ ಹೋಗಿ ನೆಲೆಸಿದರು. ಆದರೆ ಭಾರತದ ಮೇಲಿನ ಪ್ರೀತಿಯಿಂದ ಮಗಳಿಗೆ ಭಾರತೀಯ ಹಿಂದೂ ಹೆಸರಾದ ಸುನೀತಾ ಎಂದು ಹೆಸರಿಟ್ಟಿದ್ದರು. ಇಂದಿಗೂ ಸುನೀತಾ ವಿಲಿಯಮ್ ನಮ್ಮ ಹಿಂದೂ ಧರ್ಮವನ್ನು ಪಾಲಿಸುತ್ತಾರೆ. ಇನ್ನೂ ವಿಶೇಷ ಅಂದ್ರೆ ಈ ಹಿಂದೆ 2012 ರಲ್ಲಿ ಒಮ್ಮೆ ಸುನೀತಾ ವಿಲಿಯಮ್ ಬಾಹ್ಯಾಕಾಶಕ್ಕೆ ಹೋಗಿದ್ದರು. ಆಗ ನಮ್ಮ ಹೆಮ್ಮೆಯ ಭಗವದ್ಗೀತೆ ಮತ್ತು ಉಪನಿಷತ್ ಗಳನ್ನು ತಮ್ಮೊಂದಿಗೆ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೆ ಬಾಹ್ಯಾಕಾಶ ದಲ್ಲಿ “ಓಂ” ಕಾರ ವನ್ನು ಹೇಳಿದ್ದರು ಸುನೀತಾ ವಿಲಿಯಮ್

ಈ ಹಿಂದೆಯೂ ಇಂಥದ್ದೇ ಪರಿಸ್ಥಿತಿಯಲ್ಲಿ ಭಾರತೀಯ ಮೂಲದ ಖ್ಯಾತ ಅಂತರಿಕ್ಷಯಾನಿ ಕಲ್ಪನಾ ಚಾವ್ಲ ರನ್ನು ಕಡೆ ಗಳಿಗೆಯಲ್ಲಿ ಕೆಲವೇ ಕ್ಷಣಗಳ ಅಂತರದಲ್ಲಿ ಕಳೆದು ಕೊಂಡಿದ್ದೇವೆ. ಈ ಬಾರಿ ಹಾಗೆ ಆಗದಿರಲಿ ಎಂಬುದೇ ಸರ್ವ ಭಾರತೀಯರ ಹಾಗೂ ಪ್ರಪಂಚದ ಕೋಟಿ ಕೋಟಿ ಜನರ ಆಶಯವಾಗಿದೆ.

ಅಷ್ಟಕ್ಕೂ ಅಮೆರಿಕದ ನಾಸಾಗೆ ಇಂಥ ಅನ್ವೇಷಣೆಗಳಿಗೆ ನಮ್ಮ ಭಾರತೀಯ ವಿಜ್ಞಾನಿಗಳೇ ಬೇಕು ನೋಡಿ. ಬೇರೆ ಬೇರೆ ದೇಶಗಳ ಖ್ಯಾತ ವಿಜ್ಞಾನಿ ಗಳನ್ನು ತಮ್ಮ ಪ್ರಯೋಗಗಳಿಗೆ ಬಳಸಿಕೊಂಡು ಇಂದು ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿರುವ ಅಮೆರಿಕ ಸುನೀತಾ ವಿಲಿಯಮ್ ಹಾಗೂ ಬುಚ್ ವಿಲ್ಮೋರ್ ರನ್ನು ಜೀವಂತವಾಗಿ ಮರಳಿ ಕರೆತರುವುದೇ ?
ಮರಳಿ ಬರುವರೇ ನಮ್ಮ ಸುನೀತಾ ವಿಲಿಯಮ್ಸ್ ?

ಹೇಮಂತ ಚಿನ್ನು 
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group