ಅಕ್ಷರದಾಸೋಹ ನೌಕರರ ಧರಣಿಗೆ ಬೆಂಬಲ

Must Read

ಸಿಂದಗಿ: ಮಧ್ಯಾಹ್ನ ಬಿಸಿಊಟ ಯೋಜನೆಯಲ್ಲಿ ದುಡಿಯುವ ಅಕ್ಷರದಾಸೋಹ ನೌಕರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೇ 13-14 ರಂದು ಬೆಂಗಳೂರಿನಲ್ಲಿ ನಡೆಯುವ ಮುಷ್ಕರಕ್ಕೆ ಅಡುಗೆ ಕೆಲಸ ಸ್ಥಗಿತಗೊಳಿಸಿ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅಕ್ಷರದಾಸೋಹ ಪದಾಧಿಕಾರಿಗಳು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಬಿಸ್ಮಿಲ್ಲಾ ಎ. ಇನಾಮದಾರ ಮಾತನಾಡಿ, ಮಧ್ಯಾಹ್ನ ಬಿಸಿಊಟ ನೌಕರರು ಹಲವಾರು ವರ್ಷಗಳಿಂದ ಈ ಯೋಜನೆಯಲ್ಲಿ ದುಡಿಯುತ್ತಿದ್ದಾರೆ ವಂತಿಗೆ ಆಧಾರಿತ ನಿವೃತ್ತಿ ವೇತನವನ್ನು ನಿಗದಿಪಡಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯ ನಡೆಸಿದರೂ ನಿವೃತ್ತಿ ಸೌಲಭ್ಯ ಕೊಡದೇ 6500 ಕ್ಕೂ ಹೆಚ್ಚಿನ ಬಿಸಿಊಟ ನೌಕರರನ್ನು 60ವರ್ಷ ವಯಸ್ಸಾಗಿದೆ ಎಂದು ಕೆಲಸದಿಂದ ವಜಾ ಮಾಡಿರುವ ಕ್ರಮ ಖಂಡಿಸಿ, ಮುಖ್ಯಗುರುಗಳು ಹಾಗೂ  ಮುಖ್ಯ ಅಡುಗೆಯವರಿಗೆ ಅಕ್ಷರದಾಸೋಹ ಜಂಟಿ ಖಾತೆಯಿದ್ದು ಮುಖ್ಯ ಅಡುಗೆಯರನ್ನು ತೆಗೆದು ಸಿ,ಡಿ,ಎಂ,ಸಿ ಅಧ್ಯಕ್ಷರಿಗೆ ಜಂಟಿ ಖಾತೆ ಮತ್ತು ಮುಖ್ಯಗುರುಗಳಿಗೆ ಕೊಟ್ಟಿದ್ದಾರೆ ಇದನ್ನು ಖಂಡಿಸಿ ಬೆಂಗಳೂರದಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಸಿಂದಗಿ ತಾಲೂಕಿನ ಶಾಲೆಯ ಎಲ್ಲ ಅಡುಗೆಯವರು ಎರಡು ದಿವಸ ಬಿಸಿ ಊಟ ಬಂದ ಮಾಡಿ, ಹೋರಾಟದಲ್ಲಿ ಭಾಗವಹಿಸುತ್ತೇವೆ. ಸರ್ಕಾರ ಇವರ ಸಮಸ್ಯೆಗೆ ಪರಿಹಾರ ನೀಡುವವವರೆಗೂ ಹೊರಾಟ ನಿಲ್ಲದು. ಇತೀಚೆಗೆ ಇವರ ಸೇವೆಯನ್ನು ಪರಿಗಣಿಸದೇ 60ವರ್ಷ ವಯಸ್ಸಾಗಿದೆ ಎಂದು ಬರಿಗೈಯಲ್ಲಿ ಮನೆಗೆ ಕಳುಹಿಸುತ್ತಿದೆ. ಇವರ ಕುಟುಂಬ ಹಾಗೂ ಮುಂದಿನ ಜೀವನಕ್ಕೆ ಆಧಾರವಾಗಿ ನಿವೃತಿ ಹೊಂದಿದ ಹೊಂದುತ್ತಿರುವ ಅಡುಗೆ ನೌಕರರಿಗೆ ಇಡಿಗಂಟು(ಪರಿಹಾರ) ರೂ. 1ಲಕ್ಷ ನೀಡಬೇಕೆಂದು ಒತ್ತಾಯಿಸಿ ಇದೇ 13-14 ರಂದು ಪ್ರತಿಭಟನೆ ಸಂಪೂರ್ಣವಾಗಿ ರಾಜ್ಯಾದ್ಯಂತ ಅಡುಗೆ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು. ಈ ಹೋರಾಟದ ಸಂದರ್ಭದಲ್ಲಿ ಯಾವ ಜಿಲ್ಲೆಯಲ್ಲಿಯೂ ಸಹ ಅಡುಗೆಯನ್ನು ಮಾಡುವ ಕೆಲಸಕ್ಕೆ ನಮ್ಮ ನೌಕರರು ಹಾಜರಾಗುವುದಿಲ್ಲ ಎಂಬುದನ್ನು ಈ ಪತ್ರದ ಮೂಲಕ ತಿಳಿಸುತ್ತಿದ್ದೇವೆ. ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸೈನಾಜ ಮುಲ್ಲಾ , ಖಜಾಂಚಿ ರೇಣುಕಾ ಸುಣಗಾರ, ಉಪಾಧ್ಯಕ್ಷೆ ಸುಭಧ್ರಾ ತಿಳಗೂಳ, ಜಯಶ್ರೀ ಪಾರ್ತನಳ್ಳಿ, ಹಸೀನಾ ಆಳಂದ, ಸುಮಿತ್ರಾ ತೆಲಗಬಾಳ, ಭೀಮಬಾಯಿ ಸುಲ್ಪಿ, ಶ್ರೀದೇವಿ ಗಾಣಿಗೇರ ಸೇರಿದಂತೆ ಅನೇಕರಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group