ಹುನಗುಂದ: ಸುತ್ತೂರ ರಾಜೇಂದ್ರ ಗುರುಗಳು ಅನ್ನ ದಾಸೋಹ, ಅಕ್ಷರ ದಾಸೋಹ, ನೂರಾರು ಶಿಕ್ಷಣ
ಸಂಸ್ಥೆಗಳನ್ನು ಹುಟ್ಟು ಹಾಕಿ ಬಡ ಮಕ್ಕಳ ಉಚಿತ ಅನ್ನ,ಅಕ್ಷರದ ಕ್ರಾಂತಿಯ ಹರಿಕಾರರಾಗಿ, ಬಡ ಮಕ್ಕಳ
ಎದೆಯಲ್ಲಿ ಅಕ್ಷರದ ಬೀಜಬಿತ್ತಿದ ಗುರುಗಳಾಗಿದ್ದಾರೆ. ಎಂದು ಚಿತ್ತರಗಿ ಹಾಗೂ ಇಲ್ಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಶ್ರೀಗಳು ಹೇಳಿದರು.
ಹುನಗುಂದ ನಗರದಲ್ಲಿ ಶನಿವಾರ ನಡೆದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು , ಕದಳಿ ಮಹಿಳಾ ವೇದಿಕೆ ಹಾಗೂ ಶರಣ ದಂಪತಿಗಳಾದ ಗೀತಾ ಹಾಗೂ ಬಸವರಾಜ ಅಂಗಡಿ ಆವರ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸುತ್ತೂರ ರಾಜೇಂದ್ರ ಶ್ರೀಗಳ
110 ನೇ ಜಯಂತ್ಯುತ್ಸವ , 35 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುತ್ತೂರ ರಾಜೇಂದ್ರ ಶ್ರೀಗಳು ಮೈಸೂರ ಪ್ರಾಂತದಲ್ಲಿ
ಮಾತ್ರ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ವಸತಿ ನಿಲಯ
ಗಳನ್ನು ಮಾತ್ರ ತೆರೆಯದೇ ರಾಷ್ಟ್ರಭಾಷೆ ಅಂತಾರಾಷ್ಟ್ರೀಯ ನಾನಾ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.ಅಷ್ಟೇ ಅಲ್ಲದೇ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಇವರ ಜನ್ಮದಿನವನ್ನು ಸಂಸ್ಥಾಪಕರ ದಿನ ಹಾಗೂ ವಚನ ದಿನವನ್ನಾಗಿ ಆಚರಣಿ ಮಾಡುತ್ತಿರುವ
ಕಾರ್ಯ ನಿಜಕ್ಕೂ ಶ್ಲಾಘನೀಯ. ಎಂದರು.
ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ಡಾ. ಶಿವಗಂಗಾ ರಂಜಣಗಿ ಸುತ್ತೂರ ರಾಜೇಂದ್ರ
ಗುರುಗಳ ತಂದೆ ತಾಯಿಯಂದಿರು ಮಗು 5 ವರ್ಷ ಇದ್ದಾಗಲೇ ಸುತ್ತೂರ ಮಠಕ್ಕೆ ಒಪ್ಪಿಸಿದರು ಮಗು12 ವರ್ಷ ಇದ್ದಾಗ ಸುತ್ತೂರಿನ ಮಠಕ್ಕೆ ಪಟ್ಟಾಭಿಷೇಕ
ಹೊಂದಿ ದೇಶದಲ್ಲಿ ಬ್ರಿಟಿಷರ ಸರ್ಕಾರ ಇದ್ದಾಗ ಬಡ ಮಕ್ಕಳಿಗಾಗಿ ಮಠದ ಶಿಷ್ಯರ ಮೂಲಕ ಶಿಕ್ಷಣ ಸಂಸ್ಥೆಗಳನ್ನು, ವಸತಿ ನಿಲಯ, ಅನ್ನ ದಾಸೋಹ, ಸಂಸ್ಕೃತ ಪಾಠಶಾಲೆ, ಶರಣ ಸಾಹಿತ್ಯ ಪರಿಷತ್ತು ಮೆಡಿಕಲ್, ಎಂಜಿನಿಯರಿಂಗ್, ಆಯುರ್ವೇದ
ಮೊದಲಾದ 400 ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ
ಶ್ರೀ ರಾಜೇಂದ್ರ ಗುರುಗಳಿಗೆ ಸಲ್ಲುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಎಸ್.ಎನ್.ಹಾದಿಮನಿ
ಮಾತನಾಡಿ ಸುತ್ತೂರ ರಾಜೇಂದ್ರ ಗುರುಗಳ ಮಾಡಿದ ಕಾರ್ಯ ಗಳಿಂದ ಬಸವಾದಿ ಶರಣರ ವಚನಗಳನ್ನು ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯಕವಾಗಿದೆ ಎಂದರು.
ಸಭೆಯಲ್ಲಿ ಭಕ್ತಿ ಸೇವೆ ಮಾಡಿದ ಅಂಗಡಿ ಶರಣ ದಂಪತಿಗಳನ್ನು ಪೂಜ್ಯರು ಗೌರವಿಸಿದರು
ಸಭೆಯ ಪ್ರಾರಂಭದಲ್ಲಿ ಕುಮಾರಿ.ಕೃತಿಕಾ ಇದ್ದಲಗಿ
ವಚನ ಪ್ರಾರ್ಥನೆ ಮಾಡಿದರು ತಾಲೂಕಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭು ಮಾಲಗಿತ್ತಿಮಠ
ಸ್ವಾಗತಿಸಿದರು ಸಭೆಯ ಕೊನೆಯಲ್ಲಿ ಶರಣು ಸಮರ್ಪಣೆ
ಮಾಡಿದರು ಪರಿಷತ್ತಿನ ಕಾರ್ಯದರ್ಶಿಯಾದ ಸಂಗಮೇಶ ಹೊದ್ಲೂರ ಕಾರ್ಯಕ್ರಮ ನಿರೂಪಣೆ ಮಾಡಿದರು.