ಸಿಂದಗಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಬೇಡಿಕೆ ಈಡೇರದಿದ್ದರೆ ಬರುವ ದಿನಗಳಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಅಹೋರಾತ್ರಿ ಹೋರಾಟ ಮುಂದುವರೆಸುತ್ತೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತಾಲೂಕು ಘಟಕ ಸಿಂದಗಿ ದೇವರಹಿಪ್ಪರಗಿ ಹಾಗೂ ಆಲಮೇಲ ವತಿಯಿಂದ,ಬೆಳಗಾವಿ ಚಲೋ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅನುದಾನಿತ ನೌಕರರಿಗೆ ಪಿಂಚಣಿ ನೀಡುವಂತೆ ಆಗ್ರಹಿಸಿ ಸರಕಾರದ ಗಮನಸೆಳೆಯುಂತೆ ಸೋಮವಾರ ವಿಜಯಪುರ ಜಿಲ್ಲೆಯಿಂದ ಎರಡು ಸಾವಿರ ಅನುದಾನಿತ ಶಿಕ್ಷಕರು ಬೆಳಗಾವಿ ಸುವರ್ಣ ಸೌಧ ಚಲೋ ಹೋರಾಟಕ್ಕೆ ಹೋಗುತ್ತಿದ್ದಾರೆ. ಅನುದಾನಿತ ನೌಕರರು ಕಳೆದ 80 ದಿನಗಳಿಂದ ಬೆಂಗಳೂರು ಫ್ರೀಡಂ ಪಾರ್ಕ ನಲ್ಲಿ ಅಹೋರಾತ್ರಿ ಹೋರಾಟ ಮಾಡುತ್ತಿದ್ದರು ಸರಕಾರ ನಿರ್ಲಕ್ಷ್ಯ ವಹಿಸಿದೆ ಇದನ್ನು ಖಂಡಿಸಿ ನಾಳೆ ಸೋಮವಾರ 30 ಸಾವಿರ ನೌಕರರನ್ನು ಒಗ್ಗೂಡಿಸಿ ಬೆಳಗಾವಿ ಸುವರ್ಣ ಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬುಳ್ಳಪ್ಪ ಡಿ ಮಾತನಾಡಿ, ತಾಲ್ಲೂಕಿನಿಂದ 500 ಕ್ಕಿಂತ ಹೆಚ್ಚು ನೌಕರರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಪಿಂಚಣಿ ಸಂಘದ ಅದ್ಯಕ್ಷ ಅರುಣ ನಾಯ್ಕೋಡಿ ಹಾಗೂ ಉಪಾಧ್ಯಕ್ಷ ಬಾಬನಗೌಡ ಪಾಟೀಲ ಮಾತನಾಡಿದರು ಪಿಂಚಣಿ ನಮ್ಮ ಹಕ್ಕು ಹಾಗಾಗಿ ಅದನ್ನು ಸುಪ್ರೀಂ ಕೋರ್ಟ್ ಆದೇಶಿಸಿದ್ದರು ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯ ಹಾಗಾಗಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಪಾಲ್ಗೊಳ್ಳಿ ಎಂದು ಒತ್ತಾಯಿಸಿದರು,
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶಿವಲಿಂಗ ಉಮ್ಮರಗಿ, ವ್ಹಿ.ಜಿ.ಕಡಿ,ಮಾಳಪ್ಪ ಹೋಸೂರ, ಎಮ್.ರಂಗಪ್ಪ, ಮುಂತಾದ ನೌಕರರು ಉಪಸ್ಥಿತರಿದ್ದರು.

