spot_img
spot_img

ಟೇಕ್ವಾಂಡೋ ಕ್ರೀಡಾಪಟು ಲಕ್ಷ್ಮೀಗೆ ಪರ್ಫೆಕ್ಟ ಮಹಿಳಾ ಸಂಘದಿಂದ ಸತ್ಕಾರ

Must Read

spot_img
- Advertisement -

ಮೂಡಲಗಿ: ಲೆಬನಾನ್ ದೇಶದಲ್ಲಿ ಸೆ.8 ರಿಂದ 11 ರವರೆಗೆ ಜರುಗಲಿರುವ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡೇರಟ್ಟಿಯನ್ನು ಪಟ್ಟಣದ ಲಕ್ಷ್ಮೀ ನಗರದ ಪರ್ಫೆಕ್ಟ ಮಹಿಳಾ ಸಂಘದವರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸುಧಾ ಕೊಕಟನೂರ ಮಾತನಾಡಿ, ಲಕ್ಷ್ಮೀ ರಡೇರಟ್ಟಿ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಪದಕಗಳನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುತ್ತಿರುವದರಿಂದ ರಾಜ್ಯ ಮತ್ತು ಜಿಲ್ಲೆಯ  ಹಾಗೂ ಮೂಡಲಗಿ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದರು. 

ಲಕ್ಷ್ಮೀ ರಡೇರಟ್ಟಿಯನ್ನು ಮಹಿಳಾ ಸಂಘದ ಸದಸ್ಯರು ಸತ್ಕರಿಸಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿಯೂ ಸಹ ಜಯಶಾಲಿಯಾಗಲಿ ಎಂದು ಶುಭ ಹಾರೈಸಿದರು. 

- Advertisement -

ಈ ಸಂದರ್ಭದಲ್ಲಿ ಮಾದೇವಿ ಹಿರೇಮಠ, ವಿದ್ಯಾ ಗುಡಗುಡಿ, ರತ್ನಾ ಲಂಕೆಪ್ಪನವರ, ಸುನೀತಾ ಗುಡಗುಡಿ, ರಾಜೇಶ್ವರಿ ಪಾಸಲಕರ, ರೂಪಾ ಕೌಜಲಗಿ, ಮಹಾದೇವಿ ಅಡಿಬಟ್ಟಿ, ಶ್ರೀದೇವಿ ಕೌಜಲಗಿ, ಸವಿತಾ ಪಾಟೀಲ, ರಾಜಶ್ರೀ ಅಡಿಬಟ್ಟಿ, ಸುವರ್ಣಗೌರಿ ಹಿರೇಮಠ, ತೇಜಶ್ವಿನಿ ಹಿರೇಮಠ, ಗೀರಿಜಾ ರಡರಟ್ಟಿ, ಮಲ್ಲಪ್ಪ ರಡರಟ್ಟಿ, ಬಸಯ್ಯಾ ಹಿರೇಮಠ ಮತ್ತಿತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group