ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ – ಬಾಲಚಂದ್ರ ಜಾರಕಿಹೊಳಿ

Must Read

ಮೂಡಲಗಿ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ಶಾಸಕ ಮತ್ತು ಬೆಮ್ಲ್ಯೂಲ್  ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ಮಾಡಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಕಾರ್ಮಿಕರ ಏಳಿಗೆಗಾಗಿ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕಟ್ಟಡಗಳ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ೬೦ ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಸರ್ಕಾರ ಪ್ರತಿ ತಿಂಗಳು ೩ ಸಾವಿರ ರೂ. ವೇತನ ನೀಡುತ್ತಿದೆ. ಕಟ್ಟಡ ಕಾಮಗಾರಿ ನಡೆಯುವ ವೇಳೆ ಕಾರ್ಮಿಕರು ಮೃತಪಟ್ಟರೆ ಅಂತಹವರಿಗೆ ರೂ.೫ಲಕ್ಷ ವರೆಗೆ ವಿಮಾ ಸೌಲಭ್ಯವಿದೆ. ಸುಮಾರು ೨ ಲಕ್ಷ ರೂ.ವರೆಗಿನ ಆರೋಗ್ಯದ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಗುರುತಿನ ಚೀಟಿಗಳನ್ನು ಪಡೆದರೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಪ್ರತಿಯೊಂದು ಸೌಲಭ್ಯ ಪಡೆಯಬೇಕಾದರೆ. ಪ್ರತಿ ವರ್ಷ ನವೀಕರಣ ಮಾಡಿಸಿಕೊಳಬೇಕು. ಎಂದು ಕಾರ್ಮಿಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಮರ್ಥ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಹಣಮಂತ ಗುಡ್ಡಮನಿ, ಅನ್ವರ ನದಾಫ, ಮರೆಪ್ಪ ಮರೆಪ್ಪಗೋಳ,ಈಶ್ವರ ಕಂಕಣವಾಡಿ. ವಕೀಲರಾದ ಲಕ್ಷ್ಮಣ ಅಡಿಹುಡಿ, ವಿವಿದ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಕಾರ್ಮಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು...

More Articles Like This

error: Content is protected !!
Join WhatsApp Group