ಹಳ್ಳೂರ : ಮಾಳಿ ಮಾಲಗಾರ ಸಮಾಜದ ಮುಖಂಡರು ಮುಗಳಖೋಡ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಳಿ ಸಮಾಜದ ನಿಗಮದ ಘೋಷಣೆ ಆಗಿದೆ ಕಾರ್ಯರೂಪಕ್ಕೆ ಬಾರದಿರುವುದಕ್ಕೆ ಡಿಸೆಂಬರ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಸುವರ್ಣಸೌಧದ ಎದುರು ಡಿಸೆಂಬರ್ 9 ರಿಂದ 12 ರವರೆಗೆ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದರು.ಆದರೆ ಈಗ ಹಲವು ಕ್ಷೇತ್ರಗಳ ಶಾಸಕರು ಫೋನ್ ಕರೆಯ ಮೂಲಕ ನಿಮ್ಮ ಹೋರಾಟ ಹಿಂಪಡೆದುಕೊಳ್ಳಿ ನಾವು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿರುವ ಹಿನ್ನೆಲೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶ್ವಾಸನೆಯ ಮೇರೆಗೆ ನಮ್ಮ ಸತ್ಯಾಗ್ರಹವನ್ನ ಹಿಂಪಡೆಯುತ್ತಿದ್ದೇವೆ ಎಂದು ಮಾಳಿ ಮಾಲಗಾರ ಸಮಾಜದ ಯುವ ಮುಖಂಡ ಮಹಾಂತೇಶ ಮಾಳಿ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಚವಿವ ಸಂಘದ ಆವರಣದಲ್ಲಿ ಡಿಸೆಂಬರ 1 ಸೋಮವಾರ ಸಾಯಂಕಾಲ ಪತ್ರಿಕಾ ಸಭೆ ನಡೆಸಿ ಮಾತನಾಡಿ ಮಾಳಿ ಮಾಲಗಾರ ಸಮಾಜ ನಿಗಮದ ಕುರಿತು ಇಲ್ಲಿಯವರೆಗೆ ನಮಗೆ ನೀಡಿದ ಸುಳ್ಳು ಆಶ್ವಾಸನೆಗಳು ನಮಗೆ ಅಸಮಾಧಾನ ತಂದಿವೆ. ಆದರೂ ಇದೊಂದು ಬಾರಿ ನಾವು ತಾಳ್ಮೆಯಿಂದ ಸತ್ಯಾಗ್ರಹ ಹಿಂಪಡೆಯುತ್ತೇವೆ ಎಂದರು.
ರಮೇಶ ಯಡವಣ್ಣವರ ಮಾತನಾಡಿ ಎಲ್ಲ ಕ್ಷೇತ್ರದ ಮಾಳಿ ಮಾಲಗಾರ ಸಮಾಜದ ಜನರು ಆಯಾ ಕ್ಷೇತ್ರದ ಶಾಸಕರನ್ನು ಒತ್ತಾಯಿಸಿ ಸಿ.ಎಂ. ಅವರನ್ನು ಬೆಟ್ಟಿ ಮಾಡಿ ನಿಗಮ ಘೋಷಣೆ ಮಾಡಿ ಕಾರ್ಯರೂಪಕ್ಕೆ ತರುವ ಕುರಿತು ಹೋರಾಡಬೇಕು. ಶಾಸಕರು ಸರಿಯಾಗಿ ಸ್ಪಂದಿಸದಿದ್ದರೆ ಬರುವ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟನ್ನು ನಾವು ತೋರಿಸುತ್ತೆವೆ ಎಂದರು.
ನಿಯೋಗದ ಅಧ್ಯಕ್ಷ ಡಾ. ಸಿ. ಬಿ. ಕುಲಿಗೋಡ ಮಾತನಾಡಿ ನಿಗಮ ಕುರಿತು ಸಮಾಜದ ಜನರ ಸ್ವಯಂ ಪ್ರಯತ್ನ ಬಹಳ ಅವಶ್ಯವಾದದ್ದು ಎಂದರು.
ಈ ಸಂದರ್ಭದಲ್ಲಿ ಬಸಪ್ಪ ಗುಮಟೆ, ಮಹಾದೇವ ಕೋರೆ, ಪಿ.ಎಂ. ಕುಲಿಗೋಡ, ಗುರುಬಸು ತೋಡಕರ, ರಮೇಶ ಯಡವಣ್ಣವರ, ಯಲ್ಲಾಲಿಂಗ ಮುಧೋಳ, ಮಾದೇವ ಹೊಸಟ್ಟಿ, ಮಹದೇವ ಚಮಕೇರಿ, ಮಹದೇವ ತೇರದಾಳ, ನಾಗಪ್ಪ ಬಿಸನಾಳ, ಶಿವಪ್ಪ ಹಳ್ಳೂರ,, ರಮೇಶ ಮೂಡಲಗಿ, ಹನುಮಂತ ತೋಡಕರ, ರಾಜು ಕಿಚಡಿ, ಮುರಗೆಪ್ಪ ಮಾಲಗಾರ, ಮಾಹಾಂತೇಶ ಕುಲಿಗೋಡ, ಶ್ರೀಕಾಂತ ಕೆಂಚ್ಚನ್ನವರ ಸೇರಿದಂತೆ ಮಾಳಿ ಮಾಲಗಾರ ಸಮಾಜದ ಮುಖಂಡರು ಸದಸ್ಯರು ಇದ್ದರು.

