spot_img
spot_img

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ

Must Read

spot_img
- Advertisement -

ಬೀದರ: ಬೀದರ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಶೇಟ್ ಮನೆಯ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಈ ದಾಳಿಯ ಉದ್ದೇಶದ ಬಗ್ಗೆ ಹಲವು ಅನುಮಾನಗಳು ಏಳುತ್ತಿವೆ.

ಈ ಮುಂಚೆ ಕಾಂಗ್ರೆಸ್ ಪಕ್ಷದ ಆದೇಶ ಮೇರೆಗೆ ಟಿಕೆಟ್ ಬೇಕಾದರೆ ಎರಡು ಲಕ್ಷ ಡಿಡಿ ಮಾಡಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ತೆಗೆದು ಕಳಿಸಿ ಎಂದು ಹೇಳಿದ ಮೇಲೆ ಬೀದರ ಉತ್ತರ ಕ್ಷೇತ್ರದಿಂದ ಮನ್ನಾನ ಸೇಠ್ ಕೂಡ ಎರಡು ಲಕ್ಷ ಕಟ್ಟಿದರು.

ಉತ್ತರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಆದರೆ  ಮನ್ನಾನ್ ಸೇಠ್ ಬಿರುಸಿನ ಪ್ರಚಾರಕ್ಕೆ ಅಬ್ಬರಕ್ಕೆ ಜಿಲ್ಲಾ ಚುನಾವಣೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ ಎಂದು ಹೇಳಬಹುದು.

- Advertisement -

ಆದರೆ ಹುಮನಬಾದ ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಮಗನ ಹುಟ್ಟು ಹಬ್ಬದ ಸಂದರ್ಭದಲ್ಲಿ ಕುಕ್ಕರ್ ಹಂಚಲು ಸಿದ್ಧತೆ ಮಾಡಿಕೊಂಡ ಸಂದರ್ಭದಲ್ಲಿ ಜನರ ಕಾಲ್ತುಳಿತ ಉಂಟಾಗಿತ್ತು ಅದೆಲ್ಲ ಗೊತ್ತಿದ್ದೂ ಅಲ್ಲಿ ಯಾಕೆ ದಾಳಿ ಆಗಿಲ್ಲ ಎಂಬುದು ಅನುಮಾನ.

ಜಿಲ್ಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಬಹಳ ಜೋರಾಗಿ ನಡೆಯುತ್ತದೆ. ಚುನಾವಣೆ ಅಧಿಕಾರಿಗಳು ಪ್ರತಿವರ್ಷ ಕ್ಷೇತ್ರದ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತಾರೆ. ಮನ್ನಾನ್ ಸೇಠ್ ಮತದಾರರಿಗೆ ಹಂಚಲು ಅಕ್ರಮವಾಗಿ ಸೀರೆ, ಬಳೆ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಅವರ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು (Commercial Tax Officers ) ಹಾಗೂ ಬೀದರ್ (Bidar) ಎಸಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

- Advertisement -

ತಡರಾತ್ರಿ ಅಧಿಕಾರಿಗಳು ದಾಳಿ ಮಾಡಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸೀರೆ, ಬಳೆ ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಸೇಠ್ ವಿರುದ್ಧ ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದೆ.

ಬೀದರ್ ಉತ್ತರ ಕ್ಷೇತ್ರದ ಮತದಾರರಿಗೆ ಹಂಚಲು ಸೀರೆ, ಅರಿಶಿನ-ಕುಂಕುಮ ಕಿಟ್, ಆಟೋ ಡ್ರೈವರ್‌ಗಳ ಸಮವಸ್ತ್ರಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ಮೇಲೆ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಹಾಕಲಾಗಿದೆ. ಮತದಾರರಿಗೆ ಹಂಚಲು ಮನೆಯಲ್ಲಿ ಈ ಎಲ್ಲಾ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಬೀದರ್ ಸಹಾಯಕ ಆಯುಕ್ತ ಹಾಗೂ ವಿಧಾನಸಭಾ ಚುನಾವಣಾ ಆರ್‌ಒ ಲವೀಶ್ ಒರಡಿಯಾ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡಿದೆ ಎಂದು ಆರೋಪ ಕೇಳಿ ಬಂದಿದ್ದು ಜಿಲ್ಲಾ ಚುನಾವಣೆ ಅಧಿಕಾರಿ ನಡೆ ಮೇಲೆ ಅನುಮಾನ ವ್ಯಕ್ತವಾಗಿದೆ ಇನ್ನು ಮುಂದೆ ಅವರ ನಡೆ ಏನು ಎಂಬದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಲೇಖನ : ಆ ನಾಲ್ಕು ಜನ ಯಾರು ?

ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group