ಮೂಡಲಗಿ: ಪಟ್ಟಣದ ಲಕ್ಷ್ಮಿನಗರದ ಶಿಕ್ಷಕ ಚನ್ನಪ್ಪಾ ಹಂಜಿಯವರ ಪುತ್ರಿ ತೇಜಸ್ವಿನಿ ಪಿ ಎಸ್ ಐ ಪರೀಕ್ಷೆ ಪಾಸಾಗಿ ಸಾಧನೆ ಮಾಡಿದ್ದಾರೆ.
ತೇಜಸ್ವಿನಿ ಹಂಜಿ ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 28 ನೇ ರ‍್ಯಾಂಕ ಪಡೆದಿದ್ದು ಮೂಡಲಗಿ ಪಟ್ಟಣಕ್ಕೆ ಹಾಗೂ ತಾಲೂಕಿಗೆ ಕೀತಿ೯ ತಂದಿದ್ದಾಳೆ. ತೇಜಸ್ವಿನಿ ಹಂಜಿ ಅವರ ಸಾಧನೆ ಶಿಕ್ಷಕರ ಬಳಗದಲ್ಲಿ ಸಂತಸ ಮೂಡಿಸಿದೆ. ಮೂಡಲಗಿ ಗ್ರಾಮದಲ್ಲಿ ಕೂಡ ಹಷ೯ ತಂದಿದ್ದು ಗ್ರಾಮಸ್ಥರು ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.