Homeಸುದ್ದಿಗಳುಕರ್ನಾಟಕ ಶಿಕ್ಷಕರ ಸಂಘ ಗಳ ಪರಿಷತ್ತಿನ ಪದಾಧಿಕಾರಿಗಳ ಸಭೆ: ಶಿಕ್ಷಕರ ಸಮಸ್ಯೆ ಗಳ ನಿವಾರಣೆ ಗೆ...

ಕರ್ನಾಟಕ ಶಿಕ್ಷಕರ ಸಂಘ ಗಳ ಪರಿಷತ್ತಿನ ಪದಾಧಿಕಾರಿಗಳ ಸಭೆ: ಶಿಕ್ಷಕರ ಸಮಸ್ಯೆ ಗಳ ನಿವಾರಣೆ ಗೆ ಮನವಿ

ಬೆಳಗಾವಿ :- ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು, ರಾಜ್ಯ ಘಟಕ ಧಾರವಾಡ ಇದರ ಕಾರ್ಯಕಾರಿಣಿ ಸದಸ್ಯರ ಪದಾಧಿಕಾರಿಗಳ, ಜಿಲ್ಲಾ ಅಧ್ಯಕ್ಷರ, ಸಭೆಯು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ ಅಧ್ಯಕ್ಷತೆಯಲಿ ಜರುಗಿತು.

ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು, ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಕಾಲೇಜು ವರೆಗೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಮಸ್ಯೆ ಗಳನ್ನು ಚರ್ಚಿಸಿ ಅವುಗಳ ಪರಿಹಾರಕ್ಕಾಗಿ ಶಾಲಾ ಶಿಕ್ಷಣ ಶಾಲಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ರಾಜ್ಯ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು,

ಬೆಳಗಾವಿ ನಗರದಲ್ಲಿ ಜುಲೈ ತಿಂಗಳಿನಲ್ಲಿ ಪ್ರತಿಭಾವಂತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಬೋಧನಾ ಕೌಶಲ್ಯ ವೃದ್ಧಿಸಲು ಶೈಕ್ಷಣಿಕ ಕಾರ್ಯಾಗಾರ ನಡೆಸಲು ತೀರ್ಮಾನ ಮಾಡಲಾಯಿತು,

ವಿವಿಧ ಕಾರಣ ಗಳಿಂದ ಖಾಲಿ ಯಾಗಿರುವ ರಾಜ್ಯ ಸಂಘದ ಕೋಶಾಧ್ಯಕ್ಷರಾಗಿ ಪ್ರೌಢ ಶಾಲೆಯ ಶಿಕ್ಷಕರಾದ ಡಾ. ಸೋಮಶೇಖರ ಹಲಸಗಿಯವರನ್ನು ಆಯ್ಕೆಮಾಡಿ ಅವರಿಗೆ ಆಯ್ಕೆ ಪ್ರಮಾಣ ಪತ್ರ ವಿತರಿಸಲಾಯಿತು.ರಾಜ್ಯ ಕೇಂದ್ರ ಪರಿಷತ್ ಸದಸ್ಯರನ್ನಾಗಿ ಕಾಲೇಜು ಉಪನ್ಯಾಸಕರಾದ ಡಾ, ನಾಗರಾಜ ಮರೆಣ್ಣವರ,ಜೊತೆಗೆ
ಸಭೆಯಲ್ಲಿ ಬೆಳಗಾವಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ರಾಗಿ ಪ್ರಾಥಮಿಕ ಶಾಲಾ ಹಿರಿಯ ಮುಖ್ಯೋಪಾಧ್ಯಾ ಯ ರಾದ ಬಸವರಾಜ ಫಕೀರಪ್ಪ ಸುಣಗಾರ ರವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯನ್ನಾಗಿ ಮಹಾಂತೇಶ ಹಿರೇಮಠ ರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್ ಎಸ್ ಹಿರೇ ಗೌಡರ ರವರು ಸ್ವಾಗತಿಸಿದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಬೆಂಗಳೂರಿನ ವಿಜಯಕುಮಾರ ಎ ತುರವೇಕರ,ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸುರೇಶ ಸಕ್ರೆನವರ,ವಿಭಾಗೀಯ ಸಂಚಾಲಕರಾದ ರುದ್ರಪ್ಪ ಬಡಿಗೇರ,ಮಹಿಳಾ ಪ್ರತಿನಿಧಿ ಶ್ರೀಮತಿ ದೊಡಮನಿ, ಪದಾಧಿಕಾರಿಗಳಾದ ಸತೀಶ ಮಿರಜಕರ, ಎನ್ ಎನ್ ಕಬ್ಬುರ,ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಸಭೆಯ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯ ಡಿ. ಡಿ. ಪಿ ಐ ರವರಿಗೆ, ಪ್ರೌಢ ಶಾಲಾ ಶಿಕ್ಷಕರ ಸಮಸ್ಯೆ ಗಳ ಕುರಿತು ವಿಭಾಗೀಯ ಪ್ರೌಢ ಶಿಕ್ಷಣ ಮಂಡಳಿಯ ಸಹನಿರ್ದೇಶಕರಿಗೆ, ಕಾಲೇಜು ಉಪನ್ಯಾಸಕರ ಸಮಸ್ಯೆಗಳ ಕುರಿತು ಮನವಿ ಅರ್ಪಿಸಿ ಪರಿಹಾರ ಕ್ಕಾಗಿ ಅಗ್ರಹಿಸಲಾಯಿತು

RELATED ARTICLES

Most Popular

error: Content is protected !!
Join WhatsApp Group