ಶಿಕ್ಷಕರು ಸಂಸ್ಕೃತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ

Must Read

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಾಗು ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಂಡು ಪ್ರತಿಭೆಯನ್ನು ಪ್ರೋತ್ಸಾಹಿಸಿ ಮಕ್ಕಳ ಭವಿಷ್ಯತ್ತು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು.

ಹಳ್ಳಿಗಳು ಸನಾತನ ಸಂಸ್ಕೃತಿಯ ತೊಟ್ಟಿಲುಗಳಾಗಿದ್ದು, ಅವರಾದಿಯಂಥ ಗ್ರಾಮದಲ್ಲಿ ಅಪರೂಪದ ಶಾಲೆಯಾಗಿ ಮಹಾಲಕ್ಷ್ಮೀ ಪ್ರಾಥಮಿಕ ಶಾಲೆ ಮಾಡುತ್ತಿರುವ ಸೇವೆ ಶ್ಲಾಘನೀಯ. ಈ ಶಾಲೆಯ ಮಕ್ಕಳ ಬಹುಮುಖ ಪ್ರತಿಭೆಯ ಹಿಂದೆ ಶಿಕ್ಷಕರ ಶ್ರಮ ಪ್ರಶಂಸನೀಯ ಎಂದರು.

ಸಮಾರಂಭದಲ್ಲಿ ಭಾಷಣ, ಪ್ರಬಂಧ, ದೇಶಭಕ್ತಿ ಗೀತೆ ಹಾಗೂ ಚದುರಂಗ ಸ್ಪರ್ಧೆಯ ವಿಜೇತರಿಗೆ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ಪಿ ಬಿ|| ಪಾಟೀಲ ಮತ್ತು ಶಿಕ್ಷಕ ವೃಂದವರು ಇದ್ದರು.

ಪ್ರದೀಪ ಜಕ್ಕನ್ನವರ ಸ್ವಾಗತಿಸಿದರು, ಬಾಳು ನಾಯಿಕ ನಿರೂಪಿಸಿದರು, ಬಿ.ಡಿ.ತೇರದಾಳ ವಂದಿಸಿದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group