- Advertisement -
ಬೆಳಗಾವಿ – ಲಿಂಗಾಯತ ಸಂಘಟನೆ ಡಾ. ಪ.ಗು.ಹಳಕಟ್ಟಿ ಪ್ರಾರ್ಥನಾ ಭವನ ಮಹಾಂತೇಶ ನಗರದಲ್ಲಿ ದಿನಾಂಕ 28 ರಂದು ವಾರದ ಸತ್ಸಂಗ ಹಾಗೂ ಕ್ಯಾನ್ಸರ್ ಮತ್ತು ಮುನ್ನೆಚ್ಚರಿಕೆ ಕುರಿತು ಡಾll ಸಂತೋಷ ಪಾಟೀಲ ಅವರು ಉಪನ್ಯಾಸ ನೀಡಿದರು.
ನಮ್ಮ ಇಂದಿನ ಆಹಾರ ಪದ್ಧತಿ ಪಾಶ್ಚಿಮಾತ್ಯ ದೇಶಗಳನ್ನು ಅನುಸರಿಸುತ್ತಿದ್ದು ಪೂರ್ವಜರು ಬೆಳೆಯುತ್ತಿದ್ದ ಆಹಾರ ಸೇವಿಸಬೇಕು ಮನಸ್ಸಿನ ನಿಗ್ರಹಕ್ಕೆ ಪ್ರಾರ್ಥನೆ ಧ್ಯಾನ ಅವಶ್ಯ ಆಹಾರ ಹಿತ ಮಿತವಾಗಿರಬೇಕು ಎಂದರು.
ಅಧ್ಯಕ್ಷತೆಯನ್ನು ಈರಣ್ಣ ದೇಯನ್ನವರ ವಹಿಸಿದ್ದರು ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು ಡಾll ಸುಭಾಷ ಮಾರಿಹಾಲ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು.
- Advertisement -
ಸದಾಶಿವ ದೇವರಮನಿ ಮಾತನಾಡಿದರು ದಾಸೋಹ ಸೇವೆ ಶಂಕರ ಶೆಟ್ಟಿ ಸಲ್ಲಿಸಿದರು ಮಹಾತೇಂಶ ಮೆಣಸಿನಕಾಯಿ, ವಿ ಕೆ ಪಾಟೀಲ, ಆನಂದ ಕಕಿ೯, ಬಸವರಾಜ ವಿ ಬಿ, ದೊಡ್ಡಭoಗಿ ಪಾಲ್ಗೊಂಡಿದ್ದರು ಸಂಗಮೇಶ ಅರಳಿ ನಿರೂಪಿಸಿದರು.