ಜಲಜೀವನ ಮಿಷನ್ ಯೋಜನೆಯ ತಾಂತ್ರಿಕ ಕಾರ್ಯಾಗಾರ

Must Read

ಬೆಳಗಾವಿ – ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಳಗಾವಿ ವಿಭಾಗ, ಇವರ ಆಶ್ರಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ವಿವಿಧ ಅನುಷ್ಠಾನ ಹಂತದಲ್ಲಿ ನ ತಾಂತ್ರಿಕ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರಿಗೆ ಎರಡು ದಿನದ ಕಾರ್ಯಾಗಾರ 23-02-2022 ರಂದು ಹೋಟೆಲ್ ಲಾರ್ಡ್ಸ್ ಬೆಳಗಾವಿ ( ಕೊಲ್ಲಾಪುರ ಸರ್ಕಲ್ ) ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್ ಎಚ್ ವಿ ಇವರು ಆಗಮಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಸರ್ಕಾರದ ಒಂದು ಮಹತ್ತರವಾದ ಯೋಜನೆಯಾಗಿದ್ದು, ಜನರಿಗೆ ಯೋಜನೆಯ ಲಾಭ ದೊರೆಯುವಂತಾಗಲು ನಾವೆಲ್ಲರೂ ಶ್ರಮಿಸಬೇಕು ಹಾಗೂ ಈ ಎರಡು ದಿನ ತರಬೇತಿಯಿಂದ ತಾಂತ್ರಿಕ ಸಿಬ್ಬಂದಿಗಳು ಹೆಚ್ಚಿನ ಕೌಶಲ್ಯವನ್ನು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡು ಯೋಜನೆಯ ಅನುಷ್ಠಾನಕ್ಕೆ ತೊಡಗಿಸಿಕೊಳ್ಳಬೇಕು ಮಾರ್ಚ್-22 ಒಳಗಾಗಿ ಎಲ್ಲಾ ಡಿಪಿಆರ್ ಗಳನ್ನು ಸಿದ್ಧಪಡಿಸಿ ಅನುಮೋದನೆ ಪಡೆಯಬೇಕೆಂದು ಸೂಚಿಸಿದರು.

ನಂತರ ತರಬೇತಿಯಲ್ಲಿ ಹಾಜರಾದ ಎಲ್ಲಾ ಅಧಿಕಾರಿಗಳು ಎರಡು ದಿನದ ತಮ್ಮ ಉತ್ತಮ ತರಬೇತಿ ಅನುಭವವನ್ನ ಹಂಚಿಕೊಂಡರು. ಸಮಾರಂಭದಲ್ಲಿ ಸಿಜಿ ಹುಲಿಮನಿ, ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಬೆಳಗಾವಿ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಮಸಗುಪ್ಪಿ, ನಿವೃತ್ತ ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಬೆಂಗಳೂರು ಅವರು ಮಾತನಾಡಿ, ಅಧಿಕಾರಿಗಳ ಸಂದೇಹ ಹಾಗು ಸಮಸ್ಯೆ ಗಳಿಗೆ ಪರಿಹಾರ ತಿಳಿಸಿದರು.

ಶಿವಾನಂದ ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬೆಳಗಾವಿ ಇವರು ಮಾತನಾಡಿ, ತರಬೇತಿಯಲ್ಲಿ ನಾವು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆವು, ಇಂಥಾ ತರಬೇತಿಗಳು ನಮ್ಮ ತಾಂತ್ರಿಕ ಸಿಬ್ಬಂದಿಗಳಿಗೆ ಸಹಕಾರಿ ಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಸಚಿನ್ ಉಸೂಳಕರ್, ಆದಿತ್ಯ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಬೆಳಗಾವಿ, ಎರಡು ದಿನ ಕಾರ್ಯಾಗಾರ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಬೆಳಗಾವಿ ಬೈಲಹೊಂಗಲ ಖಾನಾಪುರ್ ಸವದತ್ತಿ ರಾಮದುರ್ಗ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಜಲ ಜೀವನ ಮಿಷನ್ ಯೋಜನೆಯ ಗುತ್ತಿಗೆದಾರರು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ನೀಲಮ್ಮ ಕಮತೇ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಜಲಜೀವನ ಮಿಷನ್ ನೆರವೇರಿಸಿದರು, ಮಲ್ಲಪ್ಪ ಕುಂದರಗಿ ಕಾರ್ಯಕ್ರಮ ನಿರೂಪಿಸಿದರು ದೀಪಕ್ ಕೆ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group