ತೇಜಶ್ವಿನಿ ಎಲ್ಲರ ಪ್ರೀತಿ ಗಳಿಸಿ ಅಜಾತಶತ್ರುವಾಗಿ ಬೆಳೆದಿದ್ದರು – ಪುರುಷೋತ್ತಮಾನಂದಪುರಿ ಸ್ವಾಮೀಜಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಮೂಡಲಗಿ: ‘ಬೆಳಗಾವಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ತೇಜಶ್ವಿನಿ ನಾಯ್ಕವಾಡಿ ಅವರು ಶಿಕ್ಷಣ, ಸಮಾಜ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲ ಸಮಾಜದವರೊಂದಿಗೆ ಪ್ರೀತಿಗಳಿಸಿ ಅಜಾತಶತ್ರುವಾಗಿದ್ದರು’ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಕಂಕಣವಾಡಿ ಗ್ರಾಮದಲ್ಲಿ ಜನ ನಾಯಕಿ ತೇಜಶ್ವಿನಿ ನಾಯ್ಕವಾಡಿ ಅವರ ಅಕಾಲಿಕ ನಿಧನಕ್ಕೆ ಏರ್ಪಡಿಸಿದ್ದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು ಅರ್ಜುನ ನಾಯ್ಕವಾಡಿ ದಂಪತಿಗಳು ಆಧ್ಯಾತ್ಮಿಕದಲ್ಲಿ ಬಹಳಷ್ಟು ಒಲವು ಹೊಂದಿದ ದೈವಭಕ್ತರಾಗಿದ್ದರು ಎಂದರು.

ದೇವರು ತೇಜಶ್ವಿನಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರು ಪತಿ ಅರ್ಜುನ ನಾಯ್ಕವಾಡಿ ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ದು:ಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶ್ರೀಗಳು ಹೇಳಿದರು.

- Advertisement -

ಗೋಕಾಕದ ಶೂನ್ಯ ಸಂಪಾದನಾ ಮಠದ ಶ್ರೀಗಳು, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀಗಳು, ಬನಹಟ್ಟಿ ಬ್ರಹ್ಮಾನಂದ ಶ್ರೀಗಳು, ಮುನ್ಯಾಳದ ಬಾಬುರಾವ ಶ್ರೀಗಳು, ಹೊನವಾಡ ಮಹಾರಾಜರು, ಕಡಕಬಾವಿ ಶ್ರೀಗಳು, ಇಟ್ನಾಳದ ಸಿದ್ಧೇಶ್ವರ ಶ್ರೀಗಳು, ಕಂಕಣವಾಡಿ ಶ್ರೀಗಳು, ಮುಗಳಖೋಡದ ಶಾಖಾ ಮಠದ ನೀಲಮ್ಮತಾಯಿ, ಬೆಳಗಲಿ ಶ್ರೀಗಳು, ತುಕ್ಕಾನಟ್ಟಿ ಶ್ರೀಗಳು, ಮೂಡಲಗಿ ಶ್ರೀಗಳು, ಡೊಣವಾಡ ಶ್ರೀಗಳು, ನಂದಿಕುರಳಿ ಶ್ರೀಗಳು, ಬನಹಟ್ಟಿ ಶ್ರೀಗಳು, ರಬಕವಿ ಶ್ರೀಗಳು, ಕಪರಟ್ಟಿ ಶ್ರೀಗಳು, ಯಲ್ಪಾರಟ್ಟಿ ಶ್ರೀಗಳು ತೇಜಶ್ವಿನಿ ತಾಯಿ ಅವರ ಪುಣ್ಯಾರಾನೆಯಲ್ಲಿ ನುಡಿ ಸಲ್ಲಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಮತ್ತು ಪುತ್ರ ರಾಹುಲ ಅವರು ಮಾತನಾಡಿ, ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ತೊಡಗಿರುವಾಗ ತೇಜಶ್ವಿನಿ ಅಕ್ಕಳ ಪರಿಚಯವಾಗಿತ್ತು. ಎಲ್ಲರೊಂದಿಗೆ ಪ್ರೀತಿ ಗಳಿಸಿದ್ದ ಅವರ ಸ್ವಭಾವವು ನಮಗೆ ಪ್ರೇರಣೆಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೇಜಶ್ವಿನಿ ನಾಯ್ಕವಾಡಿ ದಂಪತಿಗಳು ನಿರಂತರವಾಗಿ ಶ್ರಮಿಸಿದ್ದಾರೆ. ತೇಜಶ್ವಿನಿ ಅಕ್ಕಳ ಅಕಾಲಿಕ ನಿಧನವು ನಮ್ಮ ಕುಟುಂಬಕ್ಕೂ ನೋವು ಆಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ತೇಜಶ್ವಿನಿ ಪತಿ ಅರ್ಜುನ ನಾಯ್ಕವಾಡಿ ಅವರು ಪತ್ನಿಗೆ ಅಶ್ರುತರ್ಪಣೆ ಸಲ್ಲಿಸಿದರು.

ಗಣ್ಯರಾದ ಮೊರಬದ ಡಿ.ಎಸ್. ನಾಯ್ಕ, ಉಪ್ಪಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಧುಳಗೋಡ ಪಾಟೀಲ, ಶಶಿಕಾಂತ ದೇಸಾಯಿ, ಧಾರವಾಡದ ಲಕ್ಷ್ಮಣ ಉಪ್ಪಾರ, ಲಕ್ಷ್ಮೀಕಾಂತ ದೇಸಾಯಿ, ಕೆ.ಬಿ. ದೇಸಾಯಿ, ಅರ್ಜುನ ಬಳ್ಳಾರಿ, ನಿವೃತ್ತ ಪಿಎಸ್‍ಐ ಬಸವರಾಜ ಉಪ್ಪಾರ, ಜಿಪಂ ಸದಸ್ಯ ಚಿಕ್ಕರಡ್ಡಿ, ಅಥಣಿ ಬೂಟಾಳೆ, ತೇಜಶ್ವಿನಿ ಅವರ ತಂದೆ ಯಲ್ಲಪ್ಪ ಪೂಜೇರಿ, ತಾಯಿ ಶಾಂತವ್ವ ಪೂಜೇರಿ, ವಿಶ್ವನಾಥ ಹೊರಪೇಟೆ, ಜಯದೀಪ ದೇಸಾಯಿ, ಸಚಿನ, ಶ್ರೀರಾಜ ನಾಯ್ಕವಾಡಿ, ಜೋಶಿ ಬೆಳಗಾವಿ, ಅರ್ಜುನ ನಾಯ್ಕವಾಡಿ ಸಹೋದರರು, ಸಹೋದರಿಯರು, ಅಭಿಮಾನಿಗಳು ಭಾಗವಹಿಸಿದ್ದರು.

ಪರಿಚಯ: ತೇಜಶ್ವಿನಿ ನಾಯ್ಕವಾಡಿ ಅವರು ಹುಟ್ಟಿ ಬೆಳೆದಿದ್ದು ಮೂಡಲಗಿಯಲ್ಲಿ. ಬಿಎ ಪದವಿಧರೆಯಾಗಿರುವ ಅವರು ಸಮಾಜ ಮತ್ತು ಆಧ್ಯಾತ್ಮಿಕದಲ್ಲಿ ಆಸಕ್ತಿ ಹೊಂದಿದ್ದರು.

ಬೆಳಗಾವಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ರಾಜ್ಯ ಭೂಅಭಿವೃದ್ಧಿ ನಿಗಮದ ನಾಮನಿರ್ದೇಶಕ ಸದಸ್ಯರಾಗಿ ಕೊಪ್ಪಳ ಜಿಲ್ಲೆಯ ಉಸ್ತುವಾರಿಯಾಗಿದ್ದರು.

ಕೆಪಿಸಿಸಿ ಜಿಲ್ಲಾ ಸದಸ್ಯರಾಗಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಪತಿ ಅರ್ಜುನ ನಾಯ್ಕವಾಡಿ ಅವರೊಂದಿಗೆ ಶ್ರದ್ಧೆಯಿಂದ ಕಾರ್ಯಮಾಡಿದ್ದರು.

ಕಂಕಣವಾಡಿ ಗ್ರಾಮದ ಪಿಕೆಪಿಎಸ್ ಸೊಸೈಟಿಯ ಅಧ್ಯಕ್ಷರಾಗಿ ಸತತವಾಗಿ ಎರಡು ದಶಕಗಳ ಕಾಲ ಸೇವೆಗೈದಿದ್ದಾರೆ.

ನ್ಯಾಯಬೆಲೆ ಅಂಗಡಿ ಮೂಲಕ ಸಾರ್ವಜನಿಕರಿಗೆ ಪಡಿತರ ದೊರೆಯುವಲ್ಲಿ ಶ್ರಮಿಸಿದ್ದಾರೆ. ಅಕಾಲಿಕ ನಿಧನವು ಪಕ್ಷಕ್ಕೆ ಹಾಗೂ ಸಮಾಜಕ್ಕೆ ಅಪಾರ ನಷ್ಟವಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!