ಶಾಲಾ ಪ್ರಾರಂಭೋತ್ಸವ ಜೊತೆಗೇ ಪಠ್ಯ ಪುಸ್ತಕ ವಿತರಣೆ

Must Read

ಯರಗಟ್ಟಿ: ೨೦೨೫ ೨೬ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆಯಿಂದ ಭರದಿಂದ ಸಿದ್ಧತೆಗಳೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದೆ.

ತಾಲೂಕಿನ ಎಲ್ಲಾ ಅನುದಾನ ರಹಿತ ಅನುದಾನ ಸಹಿತ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಭೆಯನ್ನು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕರೆದು ಶಾಲಾ ಮೈದಾನ, ಕುಡಿಯುವ ನೀರು, ಕ್ಷೀರ ಭಾಗ್ಯ, ಬಿಸಿ ಊಟ, ದಾಖಲಾತಿ ಆಂದೋಲನ, ಪಠ್ಯಪುಸ್ತಕ ವಿತರಣೆ, ಒಂದನೇ ತರಗತಿಗೆ ಪ್ರವೇಶ ಪ್ರಾರಂಭ ಇನ್ನಿತರ ಎಲ್ಲಾ ಶಾಲಾ ಚಟುವಟಿಕೆಗಳ ಪೂರ್ವ ಸಿದ್ಧತೆಯ ಕುರಿತು ಸಭೆಯಲ್ಲಿ ಮಾರ್ಗದರ್ಶನ ನೀಡಲಾಗಿರುತ್ತದೆ.

ಅದರಂತೆ ಈ ಬಾರಿ ತಾಲೂಕಿನಿಂದ ಕ್ಲಸ್ಟರ್ ಕೇಂದ್ರಕ್ಕೆ ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಈಗಾಗಲೇ ಎಲ್ಲ ಶಾಲೆಯ ಪ್ರಧಾನ ಗುರುಗಳನ್ನು ಕರೆದು ಪಠ್ಯಪುಸ್ತಕ ವಿತರಿಸುವ ಕಾರ್ಯಭರದಿಂದ ಸಾಗಿದೆ. ಅದರಂತೆ ಈಗಾಗಲೇ ಒಂದನೇ ತರಗತಿಯಿಂದ ೭ನೇ ತರಗತಿಯವರೆಗೆ ಸುಮಾರು ೬೦ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು ಇಂದು ಸಮೂಹ ಸಂಪನ್ಮೂಲ ಕೇಂದ್ರ ಯರಗಟ್ಟಿ ಪಟ್ಟಣದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಪಠ್ಯಪುಸ್ತಕ ವಿತರಿಸುವ ಕಾರ್ಯ ಪ್ರಾರಂಭವಾಗಿದೆಯೆಂದು ಸಿ ಆರ್ ಪಿ ಯ ಸಂಪನ್ಮೂಲ ವ್ಯಕ್ತಿ ವಸಂತ ಬಡಿಗೇರ ಹೇಳಿದರು.

ಶಾಲೆಯ ಪ್ರಧಾನ ಗುರುಗಳಾದ ಎಂ. ಎಂ. ಮಕ್ತುಮನವರ, ಪ. ಪಂ. ಸದಸ್ಯ ಹನುಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಎಸ್.ಡಿ. ಎಂ.ಸಿ ಉಪಾಧ್ಯಕ್ಷ ಸಕ್ಕುಬಾಯಿ ಕುಂಬಾರ, ಎಸ್.ಡಿ.ಎಂ.ಸಿ ಸದಸ್ಯರಾದ ಪ್ರಮೋದ ಬಡಿಗೇರ, ಶಿವಾನಂದ ಬಳಿಗಾರ, ಗದಿಗೆಪ್ಪ ಕಡಕೋಳ, ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಎಂ ಎಂ ಚೀಲದ, ಶಿಕ್ಷಕರಾದ ಎಸ್. ವ್ಹಿ, ಗಣಾಚಾರಿ, ಜೆ ವ್ಹಿ. ಬಡಕಪ್ಪನವರ, ಎನ್. ಎಫ್. ಕುರಿ, ಬಿ. ಬಿ. ನಿರ್ವಾಣಿ, ಆರ್. ಕೆ. ಹುಣಶಿಕಟ್ಟಿ, ಬಿ. ಆಯ್. ಹಲಗಲಿ, ಎಸ್. ಎಸ್. ಹೊಸಮನಿ, ಆರ್. ಬಿ. ಅಂಗಡಿ, ಪ. ಪಂ. ಕಂದಾಯ ನಿರೀಕ್ಷಕರಾದ ಡಿ. ವಾಯ್. ಬೂದಗಟ್ಟಿ, ಎ. ಎಂ. ಬೆಳವಿ, ಸೇರಿದಂತೆ ಮಕ್ಕಳು ಅನೇಕರು ಉಪಸ್ಥಿತರಿದ್ದರು. ಪಠ್ಯಪುಸ್ತಕಗಳ ವಿತರಣೆ ನಡೆಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group