ದಿ. 23 ರಿಂದ ಮೂರು ದಿನ ಸವದತ್ತಿ ರಾಘವೇಂದ್ರಮಠದಲ್ಲಿ ರಾಘವೇಂದ್ರ ಮಹಾಸ್ವಾಮಿಗಳ 169ನೇಯ ಆರಾಧನಾ ಮಹೋತ್ಸವ

Must Read

ಸವದತ್ತಿ – ಸವದತ್ತಿ ಪಟ್ಟಣದ ಸುಪ್ರಸಿದ್ದ ಹಾಗೂ ತನ್ನದೇ ಆದ ಇತಿಹಾಸ ಉಳ್ಳ ರಾಘವೇಂದ್ರ ಮಠದಲ್ಲಿ ಬರುವ ಅಗಸ್ಟ 23.24. ಹಾಗೂ 25.ತಾರೀಖಿನಂದು ಮೂರು ದಿನಗಳಕಾಲ ಗುರು ಸಾರ್ವಭೌಮರ 169ನೇಯ ಆರಾಧನಾ ಮಹೋತ್ಸವವನ್ನು ಆಚರಿಸಲಾಗುವುದು

ಪ್ರತಿದಿನ ಬೆಳಿಗ್ಗೆ 6-30 ಘಂಟೆಗೆ ಸುಪ್ರಭಾತ. ಬೆಳಿಗ್ಗೆ 7 ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ. ಕನಕಾಭಿಷೇಕ.ಮಹಾಪೂಜಾ ಪುಷ್ಪಾಲಂಕಾರ. ಮದ್ಯಾಹ್ನ 1-30ಕ್ಕೆ ಮಹಾನೈವೇದ್ಯ ಮಹಾಮಂಗಳಾರತಿ ಮಹಾಪ್ರಸಾದ. ಸಾಯಂಕಾಲ 6-30ಕ್ಕೆ ಭಜನೆ ಪಲ್ಲಕ್ಕಿ ಸೇವಾ .ತೊಟ್ಟಿಲು ಸೇವಾ .ಫಲಮಂತ್ರಾಕ್ಷತೆ ಈ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ ಎಂದು ದೇವಸ್ಥಾನದ ಪರ್ಯಾಯ ಅರ್ಚಕರಾದ ರಾಮಾಚಾರ್ಯ ಗು. ಕಟ್ಟಿ ಹಾಗೂ ಗುರಾಚಾರ್ಯ ರ. ಕಟ್ಟಿ ಹೇಳಿದರು

ನಂತರ ದೇವಸ್ಥಾನದ ಮುಖಂಡರಾದ ವೆಂಕಟೇಶ ವೈದ್ಯ ರವರು ಮಾತನಾಡಿ, ಬಹುದಿನಗಳಿಂದ ಮಾಡುತ್ತಾ ಬಂದಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಬಿಡಲು ಆಗುವುದಿಲ್ಲ. ಆದರೆ ಸರಕಾರದ ಕೋವಿಡ್ 19 ರ ಆದೇಶ ಯಾರೂ ಉಲ್ಲಂಘಿಸಬಾರದು ಆದ್ದರಿಂದ ಭಕ್ತರಿಗೆ ದರುಶನಕ್ಕೆ ಅವಕಾಶ ಇರುವುದಿಲ್ಲ ಮತ್ತು ಮಹಾಪ್ರಸಾದವೂ ಇರುವುದಿಲ್ಲ ಎಲ್ಲ ಭಕ್ತರು ಸಹಕರಿಸಬೇಕು ಎಂದು ವಿನಂತಿಸಿದ್ದಾರೆ .

Latest News

ಪ್ರಪಂಚಕ್ಕೆ ಯೋಗ ಪರಿಚಯಿಸಿದ್ದು ಭಾರತ- ತಹಶೀಲ್ದಾರ ಗುಡುಮೆ

ಮೂಡಲಗಿ:-ಯೋಗವು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ ತರುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.ಮೂಡಲಗಿ ಶಿಕ್ಷಣ ಸಂಸ್ಥೆಯ...

More Articles Like This

error: Content is protected !!
Join WhatsApp Group