ಅಂಜುಮನ್ ಕಮಿಟಿಯಿಂದ ಗ್ರಾ ಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ

Must Read

ಮೂಡಲಗಿ: ನೂತನವಾಗಿ ಎರಡನೇಯ ಅವಧಿಗೆ ಆಯ್ಕೆಯಾದ ಗ್ರಾ ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಂಜುಮನ ಇಸ್ಲಾಂ ಕಮಿಟಿಯಿಂದ ಕಮಿಟಿಯ ಕಚೇರಿಯಲ್ಲಿ ಸತ್ಕಾರ ಸಮಾರಂಭ ಜರುಗಿತು

ಈ ವೇಳೆ ಕಮಿಟಿ ಹಿರಿಯ ಸದಸ್ಯ ಲಾಲಸಾಬ ಸಿದ್ದಾಪೂರ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸತ್ಕರಿಸಿ ಮಾತನಾಡಿ, ತಾಲೂಕಿನ ತಿಗಡಿ ಗ್ರಾ ಪಂ ಗೆ ಉಪಾಧ್ಯಕ್ಷರಾಗಿ ರಫೀಕ ಮಲೀಕಸಾಬ ಲಾಡಖಾನ ಹಾಗೂ ಪಟಗುಂದಿಯ ಗ್ರಾ ಪಂ ಗೆ ಅಧ್ಯಕ್ಷರಾಗಿ ಜಾಹೇದಾಬಿ ಕರೀಮಸಾಬ ಪೀರಜಾದೆ ಆಯ್ಕೆಯಾಗಿದ್ದಾರೆ. ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮುತುವರ್ಜಿಯಿಂದ ತಾಲೂಕಿನ ಎರಡು ಗಾ ಪಂ ಗಳಲ್ಲಿ ಇಬ್ಬರು ಅಲ್ಪಸಂಖ್ಯಾತರಿಗೆ ಈ ಅವಕಾಶ ದೊರಕಿರುವುದು ಅವರಿಗೆ ನಮ್ಮ ಕೃತಜ್ಣತೆ ಸಲ್ಲಿಸುವುದರ ಜೊತೆಗೆ ನೂತನ ಅಧ್ಯಕ್ಷೆ,ಉಪಾಧ್ಯಕ್ಷರಿಗೆ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಮಲೀಕ ಹಣಶ್ಯಾಳ, ಸದಸ್ಯರಾದ ಇರ್ಶಾದ ಪೀರಜಾದೆ, ನೂರಾಹ್ಮದ ಮೋಮಿನ, ಇಸ್ಮಾಯಿಲ್ ಇನಾಮದಾರ, ಮಹ್ಮದಸಾಬ ಸೈಯ್ಯದ, ಇಕ್ಬಾಲ ಪೈಲವಾನ್, ಮೌಲಾನಾ ಅಬೂಬಕ್ಕರ ಪೈಲವಾನ್, ಶಕೀಲ ಬೇಪಾರಿ, ಅನ್ವರಬೇಗ ಜಮಾದಾರ, ಗಜಬರ ಗೋಕಾಕ, ಮಲೀಕ ಮೊಗಲ್ ನೂರಾಹ್ಮದ ಪೀರಜಾದೆ ಇದ್ದರು.

Latest News

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು...

More Articles Like This

error: Content is protected !!
Join WhatsApp Group