spot_img
spot_img

ಪರಮಾತ್ಮನ ಸತ್ಯದ ಕಡೆ ನಡೆಯುವುದೆ ಮಹಾತ್ಮರ ಲಕ್ಷಣ

Must Read

spot_img
- Advertisement -

ರಾಜಕೀಯ ಭ್ರಷ್ಟಾಚಾರ ತಡೆಯಲು ಧಾರ್ಮಿಕ ಭ್ರಷ್ಟಾಚಾರ ನಿಲ್ಲಬೇಕು. ಪರಮಾತ್ಮನ ಸತ್ಯದ ಕಡೆ ನಡೆಯುವುದೆ ಮಹಾತ್ಮರ ಲಕ್ಷಣ. ರಾಜಕಾರಣಿಗಳ ವ್ಯವಹಾರ ಪಾರದರ್ಶಕವಾಗಿದ್ದಷ್ಟು ಧಾರ್ಮಿಕ ಕ್ಷೇತ್ರದ ವ್ಯವಹಾರ ಪಾರದರ್ಶಕವಾಗಿಲ್ಲ.

ಹೀಗಾಗಿ ದೇವರು ರಾಜಕಾರಣಿಗಳಿಗಿಂತ ಹೆಚ್ಚು ಕಷ್ಟ ನಷ್ಟ ಧಾರ್ಮಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಕೊಟ್ಟರೂ ಅದೊಂದು ದೇವರ ಪರೀಕ್ಷೆ ಎಂದು ಎನಿಸುತ್ತದೆ. ಭೌತಿಕ ಕಾನೂನಿನಿಂದ ಪರಿಹರಿಸಲಾಗದ ಎಷ್ಟೋ ಸಮಸ್ಯೆಗಳನ್ನು ಧಾರ್ಮಿಕ ಕಾರ್ಯದಿಂದ ಮಾಡುತ್ತಿದ್ದರೂ ವೈಜ್ಞಾನಿಕ ಚಿಂತಕರಿಗೆ ಇದರ ಒಳಗಿನ ಮರ್ಮ ತಿಳಿಯಲಾಗದೆ ಆಕಾಶ ನೋಡುತ್ತಾ ಹೋಗುತ್ತಾರೆ.

ಭೂಮಿಯನ್ನೇ ತಿಳಿಯದೆ ಭೂಮಿಯ ಮೇಲಿದ್ದು ರಾಜಕೀಯ ನಡೆಸುವಾಗ ಭೂಮಿಯ ಋಣ ತೀರಿಸಲು ಧರ್ಮದ ಜೊತೆಗೆ ಸತ್ಯವೂ ಇರಬೇಕು. ಇದನ್ನು ಅದ್ವೈತ ಎಂದರು.ಜೀವಾತ್ಮ ಪರಮಾತ್ಮನ ಸೇರುವಿಕೆ ಅಂದರೆ ಸತ್ಯವೆ ದೇವರು. ಧರ್ಮವೆ ದೇವರು. ಇಬ್ಬರನ್ನೂ ಒಂದಾಗಿ ಕಾಣೋದರಿಂದ ಸತ್ಯದ ಜೊತೆಗೆ ಧರ್ಮ ವೂ ಇರುತ್ತದೆ. ಆದರೆ, ಕಾಲಕ್ರಮೇಣ ಆದ ವೈಜ್ಞಾನಿಕ ಚಿಂತನೆಯು ಭೌತಿಕದಲ್ಲಿ ಸತ್ಯ ಹಾಗು ಧರ್ಮ ನೋಡುತ್ತಾ, ದೇವತೆಗಳನ್ನು ಬೆಳೆಸಿ ಗುಡಿ ಗೋಪುರ ಕಟ್ಟಿ ಎಷ್ಟು ಪೂಜೆ ಮಾಡಿದರೂ ಹಣದ ಕೊರತೆಯಿಂದ ಹಣಕ್ಕಾಗಿ ಭೌತಿಕ ವಿಜ್ಞಾನದ ಅವಲಂಬನೆ ಅನಿವಾರ್ಯ ಆಯಿತು.

- Advertisement -

ಈಗ ವಿಜ್ಞಾನ ಯುಗ. ಇಲ್ಲಿ ಜ್ಞಾನವೇ ಬೇರೆ ವಿಜ್ಞಾನ ಬೇರೆ ಆಗಿದ್ದರೂ ವ್ಯವಹಾರದ ವಿಚಾರದಲ್ಲಿ ಎರಡೂ ಒಂದೇ ನಾಣ್ಯದ ಎರಡು ಮುಖ. ರಾಜಕೀಯ ಎರಡರಲ್ಲಿಯೂ ಇದೆ. ರಾಜಯೋಗದ ಕೊರತೆ ಇದೆ. ಮೊದಲ ಮುಖವಾದ ಸತ್ಯಜ್ಞಾನ ಬಿಟ್ಟು ಮಿಥ್ಯಜ್ಞಾನದಿಂದ ಪರಮಾತ್ಮ ದರ್ಶನ ಮಾಡೋದಕ್ಕೆ ಹರಸಾಹಸ ಪಡುವ ಹಾಗಾಗಿದೆ. ಸಾಧನೆ ಆಧ್ಯಾತ್ಮ ಎಂದಾಗ ಆದಿ ಆತ್ಮ.ನಿನ್ನ ಸತ್ಯ ಧರ್ಮ ಕ್ಕೆ ತಕ್ಕಂತೆ ನೀನು ನಡೆ. ಎಂದಾಯಿತು.

ಮಕ್ಕಳಿಗೆ ಕೊಡುವ ಶಿಕ್ಷಣದಲ್ಲಿ ವ್ಯತ್ಯಾಸವಾಗುತ್ತಾ ಪೋಷಕರ ಜ್ಞಾನ ಹಿಂದುಳಿಯುತ್ತಾ ಮಕ್ಕಳು ಮುಂದೆ ಹೋದಂತೆ ಪೋಷಕರೂ ಭೌತಿಕ ಪ್ರಗತಿ ಎಂದು ಹೆಸರು,ಹಣ,ಆಸ್ತಿ ಎಲ್ಲಾ ಮಕ್ಕಳ ಕಾಲದವರೆಗೆ ಮಾಡಿ ಹೋದರು.ಹಾಗಾದರೆ ರಾಜಕಾರಣಿಗಳು ಆಸ್ತಿ ಮಾಡಿದರೆ ತಪ್ಪು ಎಂದಾಗ ಧಾರ್ಮಿಕ ಜನತೆ ಮಾಡಿದರೆ ಸರಿ ಎನ್ನುವುದರಲ್ಲಿ ಸಮಾನತೆ ಎಲ್ಲಿದೆ? ಇಬ್ಬರಿಗೂ ಪರಮಾತ್ಮನೆ ಕೊಟ್ಟದ್ದು ಎಂದರೆ ಪರಮಾತ್ಮ ಒಬ್ಬರಿಗೆ ಶಿಕ್ಷೆ ನೀಡಿ ಇನ್ನೊಬ್ಬರನ್ನು ಉಳಿಸಿಕೊಳ್ಳುವುದರಿಂದ ಬೇಧಭಾವ ಯಾರಲ್ಲಿದೆ? ಪರಮಾತ್ಮನಲ್ಲಿ ಬೇಧಭಾವ ಇದೆಯೆ? ಅಥವಾ ಮಾನವನಲ್ಲಿದೆಯೆ? ಒಂದೇ ದೇಶ,ಭೂಮಿಯಲ್ಲಿ ಸ್ತ್ರೀ ಪುರುಷ, ಜ್ಞಾನ ವಿಜ್ಞಾನ ಭೂಮಿ ಆಕಾಶ, ದೇಶ ವಿದೇಶ, ಸತ್ಯ ಅಸತ್ಯ,ಧರ್ಮ ಅಧರ್ಮ ತನ್ನದೇ ಆದ ಮಾರ್ಗ ಹಿಡಿದುಕೊಂಡು ಮನಸ್ಸಿಗೆ ಬಂದಂತೆ ಸತ್ಯ ತಿರುಗಿಸಿಕೊಂಡು,ಧರ್ಮ ಒಡೆದುಕೊಂಡು ಜೀವನ ನಡೆಸುವುದರಲ್ಲಿ ಶಿಷ್ಟಾಚಾರ ಎಷ್ಟಿದೆ? ಭ್ರಷ್ಟಾಚಾರ ಎಷ್ಟಿದೆ ? ಕಣ್ಣಿಗೆ ಕಾಣೋದನ್ನು ಸುಳ್ಳು ಎಂದು ವಾದ ಮಾಡಲು ಅನ್ಯಾಯಾಧೀಶರು ಬೇಕು.

ಕಾಣದ ಸತ್ಯವನ್ನು ತೋರಿಸಲಾಗದಿದ್ದರೂ ಮನಸ್ಸಿಗೆ ಅರ್ಥ ಆಗುತ್ತಿದ್ದರೂ ತಮ್ಮ ಸ್ವಾರ್ಥ ದ ಜೀವನಕ್ಕೆ ಕಷ್ಟ ನಷ್ಟ ಬರಬಾರದೆನ್ನುವವರ ಜೀವನವನ್ನು ಆ ಪರಮಾತ್ಮ ಮೇಲಿದ್ದು ನೋಡುತ್ತಿರುವ ಸತ್ಯ ಜ್ಞಾನಿಗಳಿಗಿದ್ದರೆ ಮಾತ್ರ ಧಾರ್ಮಿಕ ಕ್ಷೇತ್ರ ಶುದ್ದವಾಗಲು ಸಾಧ್ಯ. ಇಲ್ಲಿ ಧರ್ಮ ಮಾನವನಿಗೆ ಅಗತ್ಯವಿದೆ.ಆದರೆ ಅದು ಮಾನವೀಯತೆ ಕಡೆಗೆ ನಡೆಸಿದರೆ ಮುಂದೆ ಸ್ವತಂತ್ರ ವಾಗಿ  ಮಹಾತ್ಮರಾಗಬಹುದು. ಒಟ್ಟಿನಲ್ಲಿ ನಮ್ಮ ಕಣ್ಣಿಗೆ ಕಂಡದ್ದು ಸತ್ಯವಲ್ಲ.ಕಾಣದಿರೋ ಶಕ್ತಿ ಸುಳ್ಳಲ್ಲ ಇದಕ್ಕೆ ಅನುಭವ,ಅನುಭಾವದ ಅಗತ್ಯವಿದೆ ಎಂದರು ಮಹಾತ್ಮರು.

- Advertisement -

ಸಧ್ಯದ ಸ್ಥಿತಿಯಲ್ಲಿ ದುಡ್ಡಿದ್ದವನೆ ದೊಡ್ಡಪ್ಪ. ಅಮೇರಿಕಾದಂತಹ ಪ್ರಗತಿಪರ ದೇಶವೆ ಭಾರತದ ಕಡೆ ನಿಂತು ಮುಂದಿನ ನಡೆಯ ಬಗ್ಗೆ ನೋಡುತ್ತಿದ್ದರೆ, ನಾವು ಹಿಂದೆ ನಿಂತು ರಾಜಕಾರಣಿಗಳ ಮುಂದೆ ಬೇಡುತ್ತಿದ್ದರೆ ನಮ್ಮ ಜ್ಞಾನದ ಗತಿ ಅಧೋಗತಿ. ಸರ್ಕಾರ ಸ್ಪಂದಿಸಿದಷ್ಟು ಧಾರ್ಮಿಕ ಜನತೆ ಸ್ಪಂದಿಸಿದ್ದರೆ ಧರ್ಮ ಉಳಿಯುತ್ತಿತ್ತು. ಇದು ಪ್ರಜಾಪ್ರಭುತ್ವದ ಪ್ರಜೆಗಳೇ ಅರ್ಥ ಮಾಡಿಕೊಂಡು ನಮ್ಮ ಮನೆ, ಮಠ, ಮಂದಿರ, ಶಾಲಾ ಕಾಲೇಜಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮೂಲ ಧನ ಯಾರದ್ದು? ಜ್ಞಾನ ಯಾರದ್ದು? ಹಿಂದಿನವರ ಬಂಡವಾಳವಾಗಿದ್ದರೆ ಅದನ್ನು ಸದ್ಬಳಕೆ ಮಾಡಿದರೆ ಇನ್ನಷ್ಟು  ಜ್ಞಾನಾಭಿವೃದ್ದಿ ಸಾಧ್ಯ.

ಅದಕ್ಕಾಗಿ ಶಿಕ್ಷಣದಲ್ಲಿ ಸತ್ಯ ಹಾಗು ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳು ಮಹಿಳೆಯರ ಜ್ಞಾನವನ್ನು ಬೆಳೆಸುವುದು ನಮ್ಮ ಧಾರ್ಮಿಕ ಕ್ಷೇತ್ರದವರ ಧರ್ಮ ಕರ್ಮ. ದೇವರಿಗೆ ಸ್ಥಾನ ಕೊಡುವಷ್ಟು ಮಾನವರು ದೊಡ್ಡವರೆ? ಸರ್ವಾಂತರ್ಯಾಮಿ ಆಗಿರುವ ಆ ಪರಮಾತ್ಮನ ಶಕ್ತಿಯನ್ನು ನಮ್ಮಲ್ಲಿ ಗುರುತಿಸಿಕೊಳ್ಳಲು ಆತ್ಮಜ್ಞಾನದ ಅಗತ್ಯವಿದೆ. ಭ್ರಷ್ಟಾಚಾರ ದ ಹಣದಲ್ಲಿ ಎಷ್ಟೇ ಪರಮಾತ್ಮನಿಗೆ ಮಾಡಿ ಬೇಡಿದರೂ ಸಾಲ ತೀರೋದಿಲ್ಲ. ಒಬ್ಬರಿಂದ ಒಬ್ಬರಿಗೆ ದಾಟುವ ಇದನ್ನು ತೀರಿಸಲು ಸತ್ಕರ್ಮ,ಸ್ವಧರ್ಮ, ಸತ್ಯ, ನ್ಯಾಯ, ಸ್ವಾವಲಂಬನೆ, ಸ್ವಾಭಿಮಾನ, ಸ್ವತಂತ್ರ ಜ್ಞಾನದ ಅಗತ್ಯವಿದೆ. ಪ್ರತಿಯೊಬ್ಬರೊಳಗಿರುವ ವಿಶೇಷವಾದ ಶಕ್ತಿ ಗುರುತಿಸಿ ಶಿಕ್ಷಣದಿಂದ ಬೆಳೆಸಿದರೆ ಆತ್ಮನಿರ್ಭರ ಭಾರತ ಸಾಧ್ಯ. ವಿದೇಶಿಗಳ ಶಿಕ್ಷಣ ಪಡೆದು ಅವರ ಹಿಂದೆ ನಡೆದರೆ ವಿದೇಶಿಗಳಿಗೇ ಶಕ್ತಿ.

ಯಾರಲ್ಲಿ ಶಕ್ತಿ ಇರುವುದೋ ಅವರೆ ಆಳೋದು. ನಮ್ಮ ಒಳಗಿನ ಶಕ್ತಿಯನ್ನು ನಾವೇ ಬೆಳೆಸಿದರೆ ನಮಗೆ ಲಾಭ. ಯಾರೋ ಬಂದು ಬೆಳೆಸುತ್ತಾರೆನ್ನುವುದೆ ಪರಾವಲಂಬನೆ. ಬದಲಾವಣೆ ನಮ್ಮಿಂದ ಆಗಬೇಕಿದೆ. ನಾವು ಮೊದಲು ಬದಲಾಗಬೇಕಿದೆ.ಪೋಷಕರು ಬದಲಾದರೆ ಮಕ್ಕಳು ಬದಲಾದಂತೆ.ಮೂಲ ಸ್ವಚ್ಚವಾದರೆ ರೆಂಬೆ ಕೊಂಬೆಗೆ ಶಕ್ತಿಯಿರುತ್ತದೆ.

ಯಾವ ಪುರಾಣ, ಇತಿಹಾಸ ಓದಿ ತಿಳಿಯೋದರಿಂದ ನಮ್ಮಲ್ಲೇ ಅಡಗಿರುವ ಈ ಸಾಮಾನ್ಯ ಜ್ಞಾನ ಅರ್ಥ  ಆಗೋದಾಗಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ.ಕಾಲದ ಪ್ರಭಾವ. ಇದು ಯಾರೋ ಒಬ್ಬರ ತಪ್ಪಲ್ಲ. ಎಲ್ಲರ ತಪ್ಪು. ಅವರವರ ತಪ್ಪಿಗೆ ತಕ್ಕಂತೆ ಶಿಕ್ಷೆಯಿದೆ. ಅದನ್ನು ಕೆಲವರು ಹಣದಿಂದ ತಡೆಯಲು ಭ್ರಷ್ಟಾಚಾರ ದಲ್ಲಿ ಮುಳುಗುತ್ತಾರೆ.ಕೆಲವರು ಅನುಭವಿಸಿ ಸ್ವಚ್ಚವಾಗುತ್ತಾರೆ. ಹಲವರು ಇವರಿಬ್ಬರ ನಡುವೆ ನಿಂತು ತಮ್ಮ ಜೀವನ ನಡೆಸಲು ಸಹಕಾರ ನೀಡುತ್ತಾರೆ.ಅವರೆ ಮಧ್ಯವರ್ತಿಗಳು,ಮಾನವರು,ಮಹಿಳೆಯರು ,ಮಕ್ಕಳು.

ಏನೇ ಬಂದರೂ ಪಾಲು ಪಡೆಯೋ ಮಧ್ಯವರ್ತಿಗಳು ಭೂಮಿಯಲ್ಲಿ ಮಾತ್ರ ಇರೋದು. ಹೀಗಾಗಿ ಭೂಮಿ ಮಧ್ಯೆ ನಿಂತು ರಾಜಕೀಯ ಮಾಡೋದು. ಇದಕ್ಕೆ ಸಹಕಾರ ಕೊಡುವವರಿಗೆ ಸತ್ಯಜ್ಞಾನ ಇದ್ದರೆ ಮುಕ್ತಿ. ಇಲ್ಲವಾದರೆ ಅಧರ್ಮವೆ ಗತಿ.ಕೊರೊನ ಒಂದು ಪ್ರಕೃತಿ ವಿಕೋಪದ ರೂಪವಾಗಿತ್ತು. ಅದರಲ್ಲಿಯೂ ತಮ್ಮ ರಾಜಕೀಯ ಬುದ್ದಿ ತೋರಿಸುತ್ತಿರುವುದು ಮಾನವನ ಅಜ್ಞಾನವೆನ್ನಬಹುದು.ಬಡವರ ಜೀವ ಶ್ರೀಮಂತರ ಜೀವಕ್ಕಿಂತ ದೊಡ್ಡದು.

ಕಾರಣ, ಬಡವರಲ್ಲಿ ಜೀವಕ್ಕೆ ಬೆಲೆಕೊಡುವ ಜ್ಞಾನವಿರುತ್ತದೆ.ಆದರೆ ಶ್ರೀಮಂತ ರಲ್ಲಿ ಕೇವಲ ತಮ್ಮ ಜೀವಕ್ಕಾಗಿ ಪರರನ್ನು ಆಳುವ ರಾಜಕೀಯವಿರುತ್ತದೆ. ಭೂಮಿಗೆ ತಾನೂ ಬದುಕಿ ಇತರರನ್ನು ಬದುಕಿಸುವ ಜೀವಾತ್ಮರ ಅಗತ್ಯವಿದೆ. ಜೀವ ಭಯ ಇಲ್ಲದವರು ಮಹಾತ್ಮರಾದರೆ ಉತ್ತಮ ಬದಲಾವಣೆ. ಅಂದರೆ ಜೀವಾತ್ಮ ಪರಮಾತ್ಮನ ಸತ್ಯದ ಕಡೆ ನಡೆಯುವುದೆ ಮಹಾತ್ಮರ ಲಕ್ಷಣ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group