spot_img
spot_img

ಕರ್ನಾಟಕದ ಪರಿಕಲ್ಪನೆ ಹುಟ್ಟಿದ್ದೇ ಉತ್ತರ ಕರ್ನಾಟಕದಿಂದ- ಮಲ್ಲಿಕಾರ್ಜುನ ಚೌಕಾಶಿ

Must Read

- Advertisement -

ಮೂಡಲಗಿ: ಕರ್ನಾಟಕ ಎನ್ನುವ ಪರಿಕಲ್ಪನೆ ಹುಟ್ಟಿದೇ ನಮ್ಮ ಉತ್ತರ ಕರ್ನಾಟಕದ ಜನರಲ್ಲಿ, ಕರ್ನಾಟಕ ಏಕೀಕರಣಕ್ಕಾಗಿ ಬ್ರಿಟಿಷರ ಕಾಲದಲ್ಲೇ ಹೋರಾಟಗಳು ಪ್ರಾರಂಭವಾಗಿದ್ದವು. ನಮ್ಮ ಉತ್ತರ ಕರ್ನಾಟಕದ ಆಲೂರು ವೆಂಕಟರಾಯರು ಹರಿದು ಹಂಚಿ ಹೋಗಿರುವ ಕನ್ನಡ ಮಾತನಾಡುವ ಜನರಿಗಾಗಿ ರಾಜ್ಯದ ರಚನೆಗೆ ಬೆಂಬಲವಾಗಿ ಕರ್ನಾಟಕ ಏಕೀಕರಣ ಚಳವಳಿ ಮಾಡುವ ಮೂಲಕ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಹೇಳಿದರು.

ಶನಿವಾರದಂದು ತಾಲೂಕಿನ ಯಾದವಾಡ ಗ್ರಾಮದ ಘಟ್ಟಿಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ, “ಯಾದವಾಡ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಎನ್ನವ ಹೆಸರಿನ ಸಂಸ್ಥೆಗಳು ಸ್ಥಾಪನೆಯಾಗಿದ್ದು ನಮ್ಮ ಉತ್ತರ ಕರ್ನಾಟಕದಲ್ಲಿ ಮೊದಲು. 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾತ್ತು. ನಂತರ ಕರ್ನಾಟಕ ಇತಿಹಾಸ ಮಂಡಲ, ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ, ಘಟಪ್ರಭಾದ ಕರ್ನಾಟಕ ಆರೋಗ್ಯಧಾಮ ಹೀಗೆ ಕರ್ನಾಟಕ ಒಗ್ಗೂಡಲು ಉತ್ತರ ಕರ್ನಾಟಕವೇ ಕಾರಣ ಎಂದರು.

ನಮ್ಮ ಉತ್ತರ ಕರ್ನಾಟಕಕ್ಕೆ ಇಷ್ಟೆಲ್ಲ ಇತಿಹಾಸ ಇದ್ದರು ಸರ್ಕಾರ ಮಾತ್ರ ಮಲತಾಯಿ ಧೋರಣೆ ಮಾಡುತ್ತಿದೆ. ಕಾವೇರಿ ಹೋರಾಟಕ್ಕೆ ಇರುವಂಥ ಕಿಚ್ಚು ನಮ್ಮ ಉತ್ತರ ಕರ್ನಾಟಕದ ನದಿಗಳ ಕುರಿತು, ನೀರು ಹಂಚಿಕೆ ಕುರಿತು ಎಲ್ಲಿಯೂ ಇರೋದಿಲ್ಲ. ನಮ್ಮ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆದರೂ ಕೂಡಾ ಉತ್ತರ ಕರ್ನಾಟಕದ ಅಭಿವೃದ್ಧಿ ಮಾತ್ರ ಇಲ್ಲ. ಇನ್ನೂ ಡಾ. ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಆದರೆ ಯಾವುದೂ ಆಗುತ್ತಿಲ್ಲ. ಯಾದವಾಡ ಗ್ರಾಮದಲ್ಲಿ ಸಿಮೆಂಟ್ ಕಾರ್ಖಾನೆಗಳು ಇದ್ದರೂ ಸಹ ಸ್ಥಳೀಯ ಯುವಕರಿಗೆ ಉದ್ಯೋಗ ಇಲ್ಲ. ಹಾಗಾಗಿ ಪ್ರತಿಯೊಬ್ಬ ಯುವಕನಿಗೂ ಕೂಡಾ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸಿಗುವಂತ ವ್ಯವಸ್ಥೆಯ ಸಲುವಾಗಿ ಯಾದವಾಡ ಯುವಕರ ಉದ್ಯೋಗ ಚಳವಳಿ ಪ್ರಾರಂಭವಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.

- Advertisement -

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಯಾದವಾಡದ ಚೌಕಿಮಠದ ಶಿವಯೋಗಿ ದೇವರು ಹಾಗೂ ಪತ್ರಿಮಠದ ಶಿವಾನಂದ ಮಹಾರಾಜರು ಮಾತನಾಡಿದರು.

        ನಮ್ಮ ಕರವೇ ಸಂಘಟನೆಯ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ ಮಾತನಾಡಿ, ಕಳೆದ 15 ವರ್ಷದಿಂದ ನಮ್ಮ ಕರವೇ ಸಂಘಟನೆಯಿಂದ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದೆ. ಈ ವರ್ಷ ಕೂಡಾ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪುರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಮಾರಂಭದಲ್ಲಿ ನಿವೃತ್ತ ಸೈನಿಕ ಶಶಿಕಾಂತ ಪೂಜೇರಿ, ಕ್ರೀಡಾ ಪಟು ಯಲ್ಲಾಲಿಂಗ ಯಾವಗಲ್ ಹಾಗೂ ಜಿಎನ್‍ಎಸ ಶಾಲೆಯ ಶಿಕ್ಷಕ ಎಸ್ ಎಸ್ ಬಳೂರಗಿ, ವಿದ್ಯಾರ್ಥಿಗಳಾದ ಬಸವರಾಜ ಕೌಜಲಗಿ, ಪವನ ಕೊಲ್ಹಾಪೂರ, ಪುಷ್ಪಾ ವೆಂಕಟಾಪೂರ, ಮಹೇಶ್ವರಿ ಮತ್ತು ಪೌರಕಾರ್ಮಿಕರನ್ನು ಸತ್ಕರಿಸಲಾಯಿತು.

- Advertisement -

ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ, ಹಣಮಂತ ಮಳ್ಳಿ, ಡಾ ಶಿವನಗೌಡ ಪಾಟೀಲ, ವಿನೋದ ಅಗರವಾಲ, ಮುತ್ತಪ್ಪ ಕುರಿ, ಮಂಜು ಮಸಗುಪ್ಪಿ, ವೀರಣ್ಣ ಕಲ್ಯಾಣಿ, ಆನಂದ ಕಂಕನೋಡಿ, ಮರೆಪ್ಪ ಮುಧೋಳ, ಶಿವಾನಂದ ತುಪಳಿ, ಹಣಮಂತ ಚಕ್ಕೆಗೌಡರ, ಇಲಾಹಿ ಅತ್ತಾರ, ಹಸನ ಮುಧೋಳ ಹಾಗೂ ಅನೇಕ ಗಣ್ಯರು ನಮ್ಮ ಕರವೇ ಸಂಘಟನೆಯ ಅಧ್ಯಕ್ಷ ಮೌನೇಶ ಪತ್ತಾರ, ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group