ಕಾಂಗ್ರೆಸ್ ಪಕ್ಷದ ಅವನತಿಯಾಗುತ್ತಿದೆ – ವಿ. ಸೋಮಣ್ಣ

Must Read

ಸಿಂದಗಿ: ರಾಜ್ಯದಲ್ಲಿ ಉಪ ಚುನಾವಣೆಗಳು ಎಲ್ಲಿ ನಡೆದಿವೆಯೋ ಅಲ್ಲಿ ಮನೆಗಳನ್ನು ಹಾಕಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ಮುಂಜೂರಾಗಿರುವ ೫೦೦ ಮನೆಗಳನ್ನು ಅಲ್ಲದೆ ಪಂಚಾಯತಿವಾರು ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಪಟ್ಟಣದ ಬಿಜೆಪಿ ಅಭ್ಯರ್ಥಿಯ ಮನೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ.ಮನಗೂಳಿ ಅವರು ಕೊನೆ ಹಂತದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಅವರು ಇಷ್ಟು ಬೇಗ ನಿಧನರಾಗುತ್ತಾರೆ ಎಂಬುದು ಗೊತ್ತಿರಲಿಲ್ಲ ಆದರೂ ಇನ್ನೂ ಈ ಕ್ಷೇತ್ರ ಅಭಿವೃದ್ಧಿ ಯಾಗಬೇಕಿದೆ ಮುಂದಿನ 18 ತಿಂಗಳ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ಆಧರಿಸಿ ಅಭಿವೃದ್ಧಿ ಮಾಡಲಾಗುವುದು. ದೇಶದ ಹಿತ ದೃಷ್ಟಿಯಿಂದ ಚಾಣಕ್ಯ ವಿವಿ ತೆರೆಯಲಾಗಿದೆ. ವಿದೇಶದಲ್ಲಿ ಕಲಿಯೋದನ್ನು ನಮ್ಮ ಹುಡುಗರು ಇಲ್ಲಿ ಕಲಿಬೇಕು ಅಂತ ಮಾಡಲಾಗಿದೆ. ಚಾಣಕ್ಯ ವಿವಿ ಹಾಗೂ ಟಿಪ್ಪು ವಿ.ವಿ ಹೋಲಿಸಲಾಗದು. ಎರಡನ್ನು ಹೋಲಿಸಬೇಡಿ ಎಂದು ಮನವಿ ಮಾಡಿದ ಅವರು. ಸಿಎಂ ಇಬ್ರಾಹಿಂರಿಗೆ ಯಾವಾಗ ಯಾರನ್ನು ಒಲಿಸಿಕೊಳ್ಳಲು ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿದೆ. ಯಾರನ್ನು ಹೇಗೆ ಮೆಚ್ಚಿಸಬೇಕು ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಿರುವುದು ಸತ್ಯ ಇರಬಹುದು ನಾನು ಕೋಟೆಗೋಡೆ ಹೊರಗಡೆ ಇದ್ದೆ, ಇದೀಗ ಒಳಗೆ ಬಂದಿದ್ದೇನೆ. ಹೀಗಾಗಿ ಇದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಆದ್ರೇ, ಉಗ್ರಪ್ಪ ಹಾಗೂ ಸಲೀಂ ಅಹ್ಮದ್ ಅವರು ಈ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡಿಸಲಾಗುವುದು, ಅವಶ್ಯಕತೆ ಬಿದ್ದಾಗ ಸುಮೋಟೋ ಕೇಸ್ ದಾಖಲು ಮಾಡುತ್ತೇವೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನವರ ಮಧ್ಯೆ ಎರಡು ತಂಡವಾಗಿ ಯುದ್ಧ ಆರಂಭ ಆಗಿದೆ ಕಾಂಗ್ರೆಸ್ ನವರು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡ್ತಾರೆ. ಅವರ ಅವರ ಲೋಪ ದೋಷಗಳನ್ನು ಅವರೇ ಜನತೆ ಮುಂದೇ ಹೇಳ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ಅವನತಿ ಆಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾದ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಅಭ್ಯರ್ಥಿ ರಮೇಶ ಭೂಸನೂರ, ಅರುಣ ಶಹಾಪುರ, ಶಿವಾನಂದ ಪಾಟೀಲ ಸೋಮಜ್ಯಾಳ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಬಿ.ಎಚ್.ಬಿರಾದಾರ, ಶಿವರುದ್ರ ಬಾಗಲಕೋಟ, ಮಾದ್ಯಮ ಪ್ರತಿನಿಧಿ ಸುದರ್ಶನ ಜಿಂಗಾಣಿ, ಶಿವಕುಮಾರ ಬಿರಾದಾರ ಸೇರಿದಂತೆ ಹಲವರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group