ಒಲೆ ಹೊತ್ತಿಸುವ ದಿನಗಳು ಬರಲಿವೆ – ಸುನೀಲಗೌಡಾ ಪಾಟೀಲ

Must Read

ಸಿಂದಗಿ: ಕೇಂದ್ರ ಮತ್ತು ರಾಜ್ಯದಲ್ಲಿ (ಡಬಲ್ ಇಂಜಿನ್) ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆಯಿಂದ ಬಡವರಿಗೆ ಆಗುತ್ತಿರುವ ಹೊರೆಯಿಂದ ಮೊದಲಿನಂತೆ ಸಂಚಾರಕ್ಕೆ ಎತ್ತಿನ ಗಾಡಿ, ಸೈಕಲ್, ಕಟ್ಟಿಗೆ ಒಲೆ ಹೊತ್ತಿಸುವ ದಿನಗಳು ಬರಲಿವೆ ಎಂದು ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ ಹೇಳಿದರು.

ಕ್ಷೇತ್ರದ ರಾಮನಹಳ್ಳಿ ಗ್ರಾಮದಲ್ಲಿ ಉಪಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಚುನಾವಣೆಯ ಸಂದರ್ಭದಲ್ಲಿ ಮಂತ್ರಿಗಳು ಗ್ರಾಮಗಳಿಗೆ ಭೇಟಿ ನೀಡಿ, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸಮಸ್ಯೆ ನಮ್ಮದು ಎಂದು ನಾನಾ ಭರವಸೆಗಳನ್ನು ಕೊಟ್ಟು, ಮತವನ್ನು ಕೇಳುತ್ತಾರೆ. ಚುನಾವಣೆ ಮುಗಿದ ನಂತರ ಯಾರೂ ನಿಮ್ಮ ಸಂಪರ್ಕಕ್ಕೆ ಬರುವುದಿಲ್ಲ ಚುನಾವಣೆ ಆಗುವವರೆಗೆ ನಿಮ್ಮ ಗ್ರಾಮಗಳಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಜನತೆಯ ಸಮಸ್ಯೆಗಳು ನಮ್ಮ ಸಮಸ್ಯೆ ಎಂದವರು ಚುನಾವಣೆ ಮುಗಿದನಂತರ ನಿಮ್ಮ ಕಡೆಗೆ ತಿರುಗಿ ಸಹ ನೋಡುವುದಿಲ್ಲ. ಇಂತವರಿಗೆ ನಿಮ್ಮ ಮತ ಕೊಟ್ಟು, ನಂತರ ಸ್ವತಃ ನೀವೆ ಬೆಂಗಳೂರಿನ ಅವರ ಕಚೇರಿಗೆ ತೆರಳಿದರೆ ಅಲ್ಲಿ ನಿಮಗೆ ಯಾವುದೆ ಭರವಸೆ ಉಳಿಯುವುದಿಲ್ಲ. ಹಾಗೂ ನಿಮ್ಮ ಭೇಟಿಗೆ ಅವರ ಬಳಿ ಸಮಯವು ಇರುವುದಿಲ್ಲ. ಆದರೆ ನಾವು ವಿಜಯಪುರ ಜಿಲ್ಲೆಯವರು ನಮ್ಮ ಕಛೇರಿ ಇಲ್ಲಿಯೇ ಇರುವುದು. ನಾವು ಕಛೇರಿಯಲ್ಲಿ ಲಭ್ಯವಿರುತ್ತೇವೆ. ನಿಮ್ಮ ಸಮಸ್ಯೆಗಳು ಇದ್ದಲ್ಲಿ ಸಿಂದಗಿಯಲ್ಲಿರುವ ಅಶೋಕ ಮನಗೂಳಿ ಹಾಗೂ ವಿಜಯಪುರದ ನಮ್ಮ ಕಛೇರಿ ಭೇಟಿ ನೀಡಬಹುದು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಜನಪರ ಅನ್ನಭಾಗ್ಯ, ಕ್ಷೀರ ಭಾಗ್ಯ, ನೀರಾವರಿ ಸೇರಿದಂತೆ ಬಡವರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಮಾಜಿ ಎಪಿಎಂಸಿ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ, ಅಲಮೆಲ ಸಮಿತಿ ಅಧ್ಯಕ್ಷ ಅಯುಬ ದೇವರಮನಿ ಸೇರಿದಂತೆ ಹಲವರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group