ಆಜಾದಿ ಕಾ ಮಹೋತ್ಸವ ಪ್ರಯುಕ್ತ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

0
1120

ಬೀದರ – ಬೀದರ್ ಜಿಲ್ಲೆಯಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ( ಮನೆ ಮನೆಗೂ ತ್ರಿವರ್ಣ ಧ್ವಜ ) ಅಭಿಯಾನದಲ್ಲಿ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

ಬೀದರ್ ಜಿಲ್ಲೆಯಾದ್ಯಂತ ಭಾಲ್ಕಿ ಔರಾದ ಹುಮನಬಾದ ಬಸವಕಲ್ಯಾಣ ತಾಲೂಕಿನಲ್ಲಿ ಸ್ವತಂತ್ರ ಭಾರತದ 75 ನೇ ವರ್ಷಾಚರಣೆ ಮಹೋತ್ಸವ ಪ್ರಯುಕ್ತ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಚಾಲನೆ ನೀಡಿದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕಿಶೋರ್ ಬಾಬು ಮತ್ತು ಶಾಲೆಯ ಮಕ್ಕಳು ಈ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಅಧಿಕಾರಿ ಕಾರ್ಯಾಲಯದಿಂದ ಹೊರಟ ಸೈಕಲ್ ಸವಾರಿ ಬೀದರನ ಪ್ರಮುಖ ರಸ್ತೆ ಮುಖಾಂತರ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದಿಂದ ನೆಹರು ಸ್ಟೇಡಿಯಂ ತಲಪಿತು.

ಅಡಿಗೆ ಕೋಣೆ ಯಲ್ಲಿ ಗ್ಯಾಸ್ ಲಿಕ್

ಇದೇ ಸಂದರ್ಭದಲ್ಲಿ ನೆಹರೂ ಸ್ಟೇಡಿಯಂ ನ ಅಡಿಗೆ ಕೋಣೆಯಲ್ಲಿ ಸಾವಿರಾರು ಮಕ್ಕಳು ಉಪಾಹಾರ ಮತ್ತು ಬಾಳೆ ಹಣ್ಣು ಸ್ವೀಕರಿಸುವ ಸಂದರ್ಭದಲ್ಲಿ ಅಡಿಗೆ ಕೋಣೆ ಯಿಂದ ಗ್ಯಾಸ್ ಲೀಕ್ ಆಗಿದ್ದು ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತವೊಂದು ತಪ್ಪಿದೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬಂದು ಗ್ಯಾಸ್ ಸೋರಿಕೆ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಬಹುದು.

ಘರ್ ಘರ್ ತಿರಂಗ ಯಾತ್ರೆಯ ಸಂಭ್ರಮದಲ್ಲಿದ್ದವರಿಗೆ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆಯೆಂದೇ ಹೇಳಬೇಕು ಆದರೆ ಈ ಗ್ಯಾಸ್ ಸೋರಿಕೆಗೆ ಕಾರಣವೇನು, ಇದಕ್ಕೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು ಅದಕ್ಕೆ ಉತ್ತರ ಸಿಗಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ