ಪರೀಕ್ಷೆ ಯಶಸ್ವಿಯಾಗಿ ಮುಗಿಯಲಿದೆ – ಡಿಡಿಪಿಐ ಮೆನ್ನಿಕೇರಿ

Must Read

ಮೂಡಲಗಿ: ದಿ.೧೯ ರಂದು ನಡೆದ ಪರೀಕ್ಷೆ ಎಲ್ಲ ರೀತಿಯಿಂದಲೂ ಯಶಸ್ವಿಯಾಗಿದ್ದು ಇವತ್ತಿನ ಪರೀಕ್ಷೆ ಕೂಡ ಯಶಸ್ವಿಯಾಗಲಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.

ಮೂಡಲಗಿ ತಾಲೂಕಿನ ಕಲ್ಲೋಳಿ, ನಾಗನೂರ ಹಾಗೂ ಮೂಡಲಗಿ ಪಟ್ಟಣದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಎಸ್. ಎಸ್. ಆರ್ ಶಾಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವಂತ ೮ ಶೈಕ್ಷಣಿಕ ವಲಯಗಳಲ್ಲಿ ೪೫೦೨೩ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಮೊದಲಿನ ಪರೀಕ್ಷೆಯು ಅತ್ಯುತ್ತಮವಾಗಿ ಮುಗಿದಿದೆ. ಅದೇ ರೀತಿಯಾಗಿ ಗುರುವಾರ ಎರಡನೇ ದಿನದ ಪರೀಕ್ಷೆ ಯಶಸ್ವಿಯಾಗಿ ನಡೆಯಲಿವೆ ಎಂದರು.

ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗಲು ಸ್ವಲ್ಪ ತೊಂದರೆ ಉಂಟಾಗಿದ್ದರೂ ಕೂಡ ಎಲ್ಲ ಮಕ್ಕಳು ನಿಗದಿತ ಸಮಯಕ್ಕೆ ಹಾಜರಾಗಿ ಹುರುಪಿನಿಂದ ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂದರು.

ಚಿಕ್ಕೋಡಿ ಶೈಕ್ಷಣಿಕ ವ್ಯಾಪ್ತಿಯಲ್ಲಿ ಬರುವ ೨೨೧ ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಪರೀಕ್ಷೆಯು ಹಾಗೂ ಇವತ್ತಿನ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಕೂಡ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಕೊಠಡಿಯನ್ನು ಕರೆಯಲಾಗಿದ್ದು, ಸುದೈವವಶಾತ್ ಯಾವುದೇ ಹಂತದ ಪ್ರಕಾರಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group