ಸಿಂದಗಿ: ಸರಕಾರದ ಹತ್ತು ಹಲವಾರು ಯೋಜನೆಗಳ ಬಗ್ಗೆ ಕೃಷಿ ಅಧಿಕಾರಿಗಳು ತಿಳಿಸಿ ರೈತ ಉತ್ಪಾದಕರ ಕಂಪನಿಯ ಕಾರ್ಯಚಟುವಟಿಕೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಬರಲಿರುವ ದಿನಗಳಲ್ಲಿ ಡ್ರೋನ್ ಮಿಷನ್ ಹಾಗೂ ಬಾಡಿಗೆ ಯಂತ್ರಗಳನ್ನು ಹಾಗೂ ಮಣ್ಣು ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಿ ಅದರ ಮುಖಾಂತರ ರೈತರ ಕ್ಷೇತ್ರಕ್ಕೆ ಬಲ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕೃಷಿಯ ಜಿಲ್ಲೆಯ ಅಧಿಕಾರಿ ರಾಜಶೇಖರ ವಿಲಿಯಮ್ ಹೇಳಿದರು.
ಪಟ್ಟಣದ ಎ ಪಿ ಎಂ ಸಿ ಯಾರ್ಡ್ ಬಗಲಿ ಕಾಂಪ್ಲೆಕ್ಸ ನಲ್ಲಿ ಶ್ರೀ ಚನ್ನವೀರ ಶಿವಾಚಾರ್ಯರ ರೈತ ಉತ್ಪಾದಕರ ಕಂಪನಿ ಇಂದು ಕೃಷಿ ಇಲಾಖೆ ಸಿಂದಗಿ ಇವರ ಸಹಯೋಗದಲ್ಲಿ ತೊಗರಿ ಮೆಕ್ಕೆಜೋಳ ಸಜ್ಜೆ ಸೂರೆಪಾನ ಬೀಜಗಳ ಪ್ರಥಮ ಬಾರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಫ್.ಪಿ.ಒ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಎಸ್ ಅಲ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಡಿಡಿ ರಾಘವೇಂದ್ರ ಪವಾರ, ಸಿಂದಗಿಯ ಕೃಷಿ ಅಧಿಕಾರಿ ಹೆಚ್ ಬಿ ಸಿಂಗ್ಯಾಗೋಳ ನಿರ್ದೇಶಕರಾದ ಸುಭಾಸ ಜಾಲವಾದಿ ಶರಣಪ್ಪ ನೀಗಡಿ ರಮೇಶ ಪೂಜಾರಿ ಶ್ರೀಶೈಲ ಎಳಮೇಲಿ ಸಿಇಒ ಅಮಿತ ಸಗರನಾಳ ಹಾಗೂ ಮಾದೇವ ಅಂಬಲಿ ಸಿದ್ಧರಾಮ ರಂಜಣಗಿ ಭೀಮಾಶಂಕರ ನೆಲ್ಲಗಿ ಸುಮಾರು ನೂರಾರು ರೈತರು ಸಭೆಯಲ್ಲಿ ಭಾಗಿಯಾಗಿದ್ದರು.