spot_img
spot_img

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗುತ್ತದೆ-ಗೌ. ಹಿರಿಯ ಸಿವ್ಹಿಲ್ ನ್ಯಾಯಾಧೀಶ ಆಯ್ ಪಿ ನಾಯಕ

Must Read

spot_img
- Advertisement -

ಸಿಂದಗಿ: ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೆ ತೂಗಬಲ್ಲದು ಮಹಿಳೆಗೆ ಸರಿಸಾಟಿಯೇ ಮಹಿಳೆ ಅದಕ್ಕೆ ಎಲ್ಲ ರಂಗದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾಳೆ. ಸಾಧಕ ನಾರಿ ಅಭಿವೃದ್ಧಿ ನಾರಿ ಕೋಟಿ ದೇವರ ಒಡತಿ ಸಾಧನೆ ಮಾಡಿರುವ ಮಹಿಳೆಯರನ್ನು ಕೊಂಡಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಿಂದಗಿ ನ್ಯಾಯಾಲಯದ ಗೌ. ಹಿರಿಯ ಸಿವ್ಹಿಲ್ ನ್ಯಾಯಧೀಶ ಆಯ್ ಪಿ ನಾಯಕ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಕಾಲಘಟ್ಟದಲ್ಲಿ ಬದಲಾವಣೆಯನ್ನು ಹೊಂದಬೇಕು ಅಂದರೆ ಅನೇಕ ಸ್ವಯಂ ಉದ್ಯೋಗ ಮಾಡುತ್ತ ಮಹಿಳೆ ಮುಂದೆ ಬರಬೇಕು. ಮಗಳು ಹಾಗೂ ಸೊಸೆ ಎಂಬ ಬೇದಭಾವ ಮಾಡದೆ ಇವರಿಬ್ಬರಿಗೂ ಒಂದೇ ದೃಷ್ಟಿಯಿಂದ ನೊಡಬೇಕು. ಯಾವುದೇ ಮಹಿಳೆ ಅಭಿವೃದ್ಧಿ ಹೊಂದುತ್ತ ಇದ್ದರೆ ಇದನ್ನು ನೋಡಿ ಉಳಿದ ಮಹಿಳೆಯರು ಸಂತೋಷ ಪಟ್ಟು ಪ್ರೋತ್ಸಾಹಿಸಬೇಕೆ ಹೊರತು ಅಸೂಯೆ ಪಡಬಾರದು. ಕಾಯಿಲೆಗೆ ಔಷಧಿ ಇದೆ ಆದರೆ ಅಸೂಯೆಗೆ ಔಷದಿ ಇಲ್ಲ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ ಮಾತನಾಡಿ, ಒಂದು ಮಗು ಭ್ರೂಣದಲ್ಲಿ ಇರವಾಗಲೆ ಅವನಿಗೆ/ಳಿಗೆ ಕಾಯ್ದೆ ಅನ್ವಯಿಸುತ್ತದೆ ಅಂದರೆ ತಾಯಿಯ ಗರ್ಭದಿಂದ ಹಿಡಿದು ಅವನು/ಳು ನಿಧನ ಹೊಂದುವರೆಗೂ ಈ ಕಾಯ್ದೆ ನಮಗೆ ಅನ್ವಯಿಸುತ್ತದೆ. ನಮ್ಮ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ. ಇದು ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸಿಕೊಡುತ್ತದೆ ಎಂದು ತಿಳಿಸಿದರು.

- Advertisement -

ನ್ಯಾಯಾಲಯದ ಅಪರ ಸರಕಾರಿ ವಕೀಲ ಬಿ ಜಿ ನೆಲ್ಲಗಿ ಮಾತನಾಡಿ, ಶರಣರ ಕಾಲದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಟ್ಟಿದೆ. ಅದೇ ರೀತಿ ಸಂವಿಧಾನದಲ್ಲಿ  ಮಹಿಳೆಯರಿಗೆ ಸಮಾನ ಸ್ಥಾನಮಾನ ಇದೆ. ಮಹಿಳೆಯರು ಶಿಕ್ಷಣ ಪಡೆದು ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದರಿಂದ ಅವರು ಆರ್ಥಿಕವಾಗಿ ಸಬಲರಾಗಿದ್ದಾರೆ ಮತ್ತು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಯಾವುದೇ ಹುದ್ದೆ ಸರಕಾರಿ ಹಾಗೂ ಅರೆ ಸರಕಾರಿ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಮಹಿಳೆಯರಿಗೆ ಮೀಸಲಾತಿ ಇದೆ ಎಂದು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸುವುದರ ಮೂಲಕ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕೊಡುವುದರ ಮೂಲಕ ಅವರಿಗೆ  ಸಮಾನತೆಯನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ, ಸರಕಾರಿ ವಕೀಲ ಆನಂದ ದೊಡಮನಿ, ವಕೀಲರಾದ ಶ್ರೀಮತಿ ಬಿ ಜಿ ಮಾನ್ವಿ ಮಾತನಾಡಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಸ್ಪೂರ್ತಿ ಒಕ್ಕೂಟದ ಉಪಾಧ್ಯಕ್ಷೆ ಶಶಿಕಲಾ ಅಂಗಡಿ ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಯ ಸ್ವ-ಸಹಾಯ ಸಂಘದ ಮಹಿಳೆಯರು ಭಾಗವಹಿಸಿದರು. ಸ್ವ-ಸಹಾಯ ಸಂಘದ ಸದಸ್ಯೆ ನೀಲಮ್ಮ ಬಡಿಗೇರ್ ವಾರ್ಷಿಕ ವರಧಿ ಮಂಡಿಸಿದರು. ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು,  ಬಸವರಾಜ ಬಿಸನಾಳ ಸ್ವಾಗತಿಸಿದರು. ರಾಜೀವ ಕುರಿಮನಿ ವಂದಿಸಿದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group