ಬೀದರ – ತೊಗರಿ ಕಣಜ ಎಂದು ಕರೆಯಲ್ಪಡುವ ಕಲಬುರಗಿ ಯಲ್ಲಿ ದೀಪಾವಳಿ ಹಬ್ಬದ ನಡುವೆ ಜನರನ್ನು ಭಯ ಹುಟ್ಟಿಸಿದ ಭೀಕರ ಯುವಕನ ಕೊಲೆಯೊಂದು ನಡೆದುಹೋಗಿದೆ.
ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ ಮಾಡಲಾಗಿದ್ದು ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ನಾಲ್ಕು ಜನರ ಗುಂಪೊಂದು ಬೈಕ್ ಮೇಲೆ ಬಂದು ವ್ಯಕ್ತಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೋಗಿದೆ.
ಅಭಿಷೇಕ್(25) ಎಂಬಾತ ಕೊಲೆಯಾದ ಯುವಕ. ಕಲಬುರಗಿ ನಗರ ಪೋಲೀಸ್ ಪೇದೆ ಚಂದ್ರಕಾಂತ ಎಬುವರ ಪುತ್ರ ಅಭಿಷೇಕ್.
ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಮತ್ತು ಅಶೋಕ ನಗರ ಪೋಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ