ತೀರ್ಥಹಳ್ಳಿ: ಅನಂತ ಕಲ್ಲಾಪುರ ಅವರ ಹಾಡಿನ ಸಾಹಿತ್ಯ ಶ್ರೀ ರಾಮೇಶ್ವರನ ಹಾಗು ಜಾತ್ರೆಯ ವೈಭವ ವನ್ನು ಜನರ ಮನಕ್ಕೆ ಮುಟ್ಟಿಸುವಂತೆ ಇದೆ. ಹೀಗೆಯೇ ಅವರಿಂದ ಇನ್ನು ಹೆಚ್ಚಿನ ಭಕ್ತಿ ಗೀತೆಗಳು ಮೂಡಿ ಬರಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾರೈಸಿದರು.
ಇಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಜನವರಿ 3 ರಂದು ಮಧ್ಯಾಹ್ನ ೦೪ ಗಂಟೆಗೆ ಕವಿ – ಅನಂತ ಕಲ್ಲಾಪುರ ತೀರ್ಥಹಳ್ಳಿ ಇವರ ಸಾಹಿತ್ಯದಲ್ಲಿ ಮೂಡಿ ಬಂದಿರುವ, ಮಲೆನಾಡ ಕೋಗಿಲೆ ಗರ್ತಿಕೆರೆ ರಾಘಣ್ಣ ಇವರ ರಾಗ ಸಂಯೋಜನೆಯಲ್ಲಿ ರಾಘವೇಂದ್ರ ಡಿ.ಜಿ.ಮತ್ತು ತಂಡ ತೀರ್ಥಳ್ಳಿ ಇವರ ಗಾಯನದಲ್ಲಿ ಎಸ್.ಯು ಮ್ಯೂಸಿಕ್ ಕುಂದಾಪುರ ಇವರ ಸಂಗೀತ ಸಂಯೋಜನೆಯ ಶ್ರೀ ರಾಮೇಶ್ವರ ಉತ್ಸವ – ಉತ್ಸವ ಹಾಡಿನ ಧ್ವನಿಸುರುಳಿಯನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪು ಗುಡ್ಡೆ, ತೀರ್ಥಹಳ್ಳಿ ಭಾಜಪ ಅಧ್ಯಕ್ಷರಾದ ರಾಘವೇಂದ್ರ ನಾಯಕ್ , ರಂಗಾಯಣ ನಿರ್ದೇಶಕರು ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಸಂದೇಶ್ ಜವಳಿ , ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗಣೇಶ್ ಪ್ರಸಾದ್ ಮತ್ತು ತೀರ್ಥಳ್ಳಿ ಭಾಜಪ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಹಾಗು ಗಾಯಕ ರಾಘವೇಂದ್ರ ಡಿ.ಜಿ.ಮತ್ತು ತಂಡ ಉಪಸ್ಥಿತರಿದ್ದರು.