ಮದುವೆಯಾಗಲು ನಿರಾಕರಿಸಿದ ಪ್ರೇಮಿಯ ಮನೆ ಮತ್ತು ಆಟೋಗೆ ಬೆಂಕಿ ಹಚ್ಚಿದ ಪ್ರೇಯಸಿ

Must Read

ಬೀದರ – ಕೊಟ್ಟ ಮಾತಿನಂತೆ ಮದುವೆಯಾಗಲು ನಿರಾಕರಿಸಿದ ಪ್ರೇಮಿಯ ಮನೆ ಮೇಲೆ ದಾಳಿ ಮಾಡಿದ ಪ್ರೇಯಸಿ ಆತನ ಮನೆ ಹಾಗೂ ಆಟೋಗೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

ಹಾಗೆ ನೋಡಿದರೆ ಇವರೇನೂ ಹದಿಹರೆಯದ ಪ್ರೇಮಿಗಳಲ್ಲ. ಭೀಮರಾವ್ ಹಾಗೂ ಸುಮಾ ಎಂಬ ಈ ಇಬ್ಬರಿಗೂ ಮದುವೆಯಾಗಿ ಮಕ್ಕಳು ಕೂಡ ಇದ್ದಾರೆ !

ಭೀಮರಾವ್ ಆ ಮಹಿಳೆಯ ಕಡೆಯಿಂದ ನಾಲ್ಕು ಲಕ್ಷ ರೂಪಾಯಿ ತೆಗೆದುಕೊಂಡಿದ್ದಾನೆಂದು ಹೇಳುವ ಆಕೆ, ನನಗೆ ಹಣವನ್ನು ಕೊಡು ಇಲ್ಲ ಅಂದರೆ ಮದುವೆ ಮಾಡಿಕೊ ಎಂದು ಒತ್ತಡ ಭೀಮರಾವ ಮೇಲೆ ಹಾಕಿದ್ದಾಳೆನ್ನಲಾಗಿದೆ.

ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ ಕುಂಟುಬ ಸಮೇತವಾಗಿ ವಾಸವಾಗಿದ್ದನು.ಈ ವೇಳೆ ಸುಮಾ ಎಂಬ ಮಹಿಳೆ ಪರಿಚಯವಾಗಿ ಪ್ರೀತಿಯಾಗಿದೆ ನಂತರ ಮದುವೆಯಾಗುವಂತೆ ಸುಮಾ ಭೀಮರಾವ್ ಬೆನ್ನು ಬಿದ್ದಿದ್ದಾಳೆ… ಆಕೆಯ ಕಾಟ ತಾಳದೆ ಭೀಮರಾವ್ ತನ್ನ ತಾಯಿಯ ತವರು ಬಾಗ್ ಹಿಪ್ಪರಗಾ ಗ್ರಾಮದಲ್ಲಿ ವಾಸವಾಗಿದ್ದನು.

ಈ ವಿಷಯ ತಿಳಿದು ಮಹಿಳೆ ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳಬೇಕು ಇಲ್ಲವಾದ್ರೆ ತಾನು ನೀಡಿರುವ 4 ಲಕ್ಷ ನೀಡುವಂತೆ ಒತ್ತಾಯಸಿದ್ದಾಳೆ. ಇದಕ್ಕೆ ಒಪ್ಪದೆ ಇದ್ದಾಗ ಇಬ್ಬರ ಸಹಾಯದಿಂದ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಾಕಿದ್ದು ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group