ಅಂಬೇಡ್ಕರ್ ಹಾಕಿಕೊಟ್ಟ ಪಥದಲ್ಲಿ ಮುಂದವರೆಯಬೇಕು – ಶರಣಪ್ಪ ಬೂದಿಹಾಳ

Must Read

ಸಿಂದಗಿ; ಡಾ. ಅಂಬೇಡ್ಕರರವರು ದಲಿತ ಕುಟುಂಬದಲ್ಲಿ ಜನಿಸಿದ್ದರೂ ಸಹ ಅಸ್ಪೃಶ್ಯತೆಯನ್ನು ಮೆಟ್ಟಿನಿಂತು ಶೈಕ್ಷಣಿಕ ಉನ್ನತಿ ಪಡೆದರು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದು ಭಾರತೀಯ ದಲಿತ ಪ್ಯಾಂಥರ ತಾಲೂಕಾ ಅಧ್ಯಕ್ಷರು ಶರಣಪ್ಪ ವಾಯ್ ಬೂದಿಹಾಳ ಹೇಳಿದರು.

ಪಟ್ಟಣದ ಸೋಂಪುರ ರಸ್ತೆಯ ಡಾ. ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಂ ಕಾಲೋನಿಯಲ್ಲಿ ಭಾರತೀಯ ದಲಿತ ಪ್ಯಾಂಥರ ವತಿಯಿಂದ ಹಮ್ಮಿಕೊಂಡ ಭೀಮರಾವ ಅಂಬೇಡ್ಕರರವರ 65 ನೇ ಪರಿನಿರ್ಮಾಣ ದಿನವನ್ನು ಆಚರಿಸಿ ಮಾತನಾಡಿ, ಅಪರೂಪದ ಬುದ್ದಿವಂತಿಕೆಯ ತೋರಿಸಿದರು, ಕಡೆಯವರೆಗೂ ಅಸ್ಪೃಶ್ಯತೆ ಅವರನ್ನು ಬೆಂಬಿಡದೆ ಕಾಡಿತು, ಅಂಬೇಡ್ಕರ ರವರು ನಿಧನರಾಗುವ ಕೇವಲ 20 ದಿನ ಮೊದಲು ಬೌಧ್ದ ಧರ್ಮವನ್ನು ಅಧ್ಯಯನ ಮಾಡಿ ಬೌದ್ದ ಧರ್ಮವನ್ನು ಸ್ವೀಕರಿಸಿದರು. ಡಾ. ಅಂಬೇಡ್ಕರ ರವರು ಮೃತಪಟ್ಟ ದಿನ ಡಿಸೆಂಬರ 6 ರಂದು ಅವರ ಪರಿ ನಿರ್ಮಾಣ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ತಾಲೂಕ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ರತ್ನಾಕರ ಮಾತನಾಡಿ, ಡಾ.ಅಂಬೇಡ್ಕರರವರು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾಜದಲ್ಲಿ ವ್ಯಕ್ತಿಗತ ಗೌರವ ಸಿಗಬೇಕು ಮತ್ತು ಸಮಾಜದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು ಮೊದಲು ಶಿಕ್ಷಣ ನಂತರ ಸಂಘಟನೆ, ಹೋರಾಟ ಅನ್ನುವ ಶಿಕ್ಷಣದ ಮಾರ್ಗವನ್ನು ಹಾಕಿಕೊಟ್ಟಂಥ ಮಹಾನ್ ನಾಯಕ್, ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ ಅಂಬೇಡ್ಕರ ರವರು ತಮ್ಮ ಪ್ರಾಥಮಿಕ ಅಧ್ಯಯನ ಹಿಡಿದುಕೊಂಡು ಅವರ ನೆಚ್ಚಿನ ಗುರುಗಳಾದಂಥ ಸಂಬಾಜಿರಾವ ಅಂಬೇವಾಡಕರ ಹಾಗೂ ಶಾಹು ಮಹಾರಾಜರ ಅತ್ಯಂತ ಪ್ರೀತಿಯ ಶಿಷ್ಯರಾಗಿ ಅವರೆಲ್ಲ ಶಿಕ್ಷಣವನ್ನು ತಮ್ಮ ನೆಚ್ಚಿನ ಗುರುಗಳ ಮೇಲೆ ಹಾಕಿ ಅವರು ಕೊಟ್ಟಂಥ ತನು ಮನ ಧನ ಸಹಕಾರದಿಂದ ಅಂದು ಇಡೀ ವಿಶ್ವಕ್ಕೆ ಮಹಾನ್ ನಾಯಕನಾಗಲು ಅವಕಾಶವಾಯಿತು. ಇಂತಹ ಮಹಾನ್ ನಾಯಕ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೀರಾಮಾತಾ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಹೀರಾಮಾತಾ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಚಿನ ಪವಾರ ವಂದಿಸಿದರು.

ಕಾಜು ಬಂಕಲಗಿ ಆಶ್ರಯ ಕಮೀಟಿ ಸದಸ್ಯರು, ಅರ್ಜುನ ದೊಡಮನಿ, ಸುನೀಲ ಕುಚಬಾಳ, ಸುನೀಲ ನಾಗಾವಿ, ಸತೀಶ ರತ್ನಾಕರ, ಸಂಜನಾ ಕನ್ನೋಳ್ಳಿ, ಸುಧೀರ ಬಟವಾಲ ಸೇರಿದಂತೆ ಅನೇಕರು ಉಪಸ್ಥಿತರಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group