ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ರಮೇಶ ಭೂಸನೂರವರು ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ತಳವಾರ ಪರಿವಾರ ಸಮಾಜ ಪ್ರಮುಖ ಪಾತ್ರ ವಹಿಸಿದೆಯೆಂದು ಹೇಳಿ ತಳವಾರ ಪರಿವಾರ ಸಮಾಜದ ಜಿಲ್ಲಾಧ್ಯಕ್ಷರಾದ ಶರಣಪ್ಪ ಕಣಮೇಶ್ವರ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಜೊತೆಗೆ ಎಲ್ಲಾ ಮಂತ್ರಿಮಂಡಲದ ಸಚಿವರಿಗೆ, ಶಾಸಕರಿಗೆ, ಎಂಎಲ್ಸಿ ಗಳಿಗೆ ಹಾಗೂ ತಳವಾರ ಸಮಾಜದ ಎಲ್ಲಾ ಮುಖಂಡರಿಗೆ, ತಳವಾರ ಸಮಾಜದ ಎಸ್‍ಟಿ ಸರ್ಟಿಫಿಕೇಟ್ ನೀಡುವ ನಿರ್ಣಯಕ್ಕೆ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ಸಮಾಜದ 30 ಸಾವಿರ ಮತದಾರರು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿಯಾಗಿ ಗೆಲುವಿನಲ್ಲಿ ಸಹಕರಿಸಿದ್ದಕ್ಕಾಗಿ ಸಮಾಜದ ಮತಬಾಂಧವರಿಗೆ ವಿಶೇಷವಾಗಿ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗುರು ತಳವಾರ, ಶ್ರೀಶೈಲ ಬುಯ್ಯಾರ, ಮಹಾಂತೇಶ ನಾಯ್ಕಡಿ, ಈರಣ್ಣ ಕುರಿ, ಭೀಮರಾಯ ಸುಣಗಾರ, ಚಂದ್ರಶೇಖರ ಕೋಟಾರಗಸ್ತಿ, ಸಂಗು ಬಿರಾದಾರ, ಶಿವು ಗುರಕಾರ, ವಿಠಲ ಯರಗಲ್, ರವಿ ವಾಲಿಕಾರ ಸೇರಿದಂತೆ ಉಪಸ್ಥಿತರಿದ್ದರು.