ವಿಪತ್ತು ನಿರ್ವಹಣೆ ಯಲ್ಲಿ ಅಗ್ನಿ ಶಾಮಕ ದಳದ ಪಾತ್ರ ಬಹು ಮುಖ್ಯ : ಸಂಗಣ್ಣ ಹವಾಲ್ದಾರ.

Must Read

ಬಾಗಲಕೋಟೆ – ಬೆಂಕಿ, ಅಪಾಯಕಾರಿ ವಸ್ತುಗಳು, ಮತ್ತು ಇತರೆ ತುರ್ತು ಪರಿಸ್ಥಿಗಳಲ್ಲಿ ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸುವ ವೀರರನ್ನು ಹೊಂದಿರುವ ಸಂಸ್ಥೆ ಅಗ್ನಿಶಾಮಕದಳ ಸಂಸ್ಥೆಯಾಗಿದ್ದು ಇವರಿಂದ ಆಪತ್ಕಾಲದಲ್ಲಿ ಉಂಟಾಗುವ ಪ್ರಾಣಹಾನಿ,ಅಸ್ತಿ ಪಾಸ್ತಿ, ನಷ್ಟ ಕಡಿಮೆಯಾಗುತ್ತವೆ, ನಾವು ಕೂಡಾ ಇವರ ಸಲಹೆಗಳನ್ನು ತಿಳಿದುಕೊಂಡು ಆಗುವ ಅನಾಹುತಗಳನ್ನು ಆದಷ್ಟು ಪ್ರಯತ್ನಿಸಿ ತಪ್ಪಿಸಬೇಕು ಎಂದು ವಿಶ್ವ ಚೇತನ ಪಬ್ಲಿಕ್ ಸ್ಕೂಲ್ ಕಂದಗಲ್ಲನ ಸಂಸ್ಥೆಯ ಸಂಸ್ಥಾಪಕರು ಈ ಸಾಲಿನ ತಾಲೂಕ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಸಂಗಣ್ಣ ಹವಲ್ದಾರ ಹೇಳಿದರು.

ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದ ಗುರುಮಹಾಂತ ರಂಗಮಂದಿರ ಮತ್ತು ಶಾಲೆಯ ಆವರಣ ದಲ್ಲಿ ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡದ ಮುಂಜಾಗ್ರತಾ ಕ್ರಮದ ಉಪನ್ಯಾಸ ಮತ್ತು ಅಣಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಂಕಿ ಅವಘಡದ ಕುರಿತು ವಿಶೇಷ ಉಪನ್ಯಾಸವನ್ನು ಅಗ್ನಿ ಶಾಮಕ ದಳದ ಅಧಿಕಾರಿ ಜಗದೀಶ ಗಿರಡ್ಡಿ ಅವರು ಅಣುಕು ಪ್ರದರ್ಶನ ಮಾಡುವುದರ ಮುಖಾಂತರ ನೀಡಿದರು.

ಅಧಿಕಾರಿಗಳಾದ ಮಾರುತಿ ಜಾಧವ್ , ಖಾಜೇಸಾಬ ಗುಂತಗುಳಿ, ಮಲ್ಲೇಶ ಡಂಬಳ, ದಯಾನಂದ ಹಡಪದ, ಉಪಸ್ಥಿತರಿದ್ದರು. ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಭೋವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಮುಖ್ಯ ಗುರುಮಾತೆ ರೇಷ್ಮ ಗಾವಡಿ ಸೇರಿದಂತೆ ಗ್ರಾಮದ ವಿವಿಧ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗುರುಮಾತೆ ಕು.ಭವ್ಯಶ್ರೀ ಭಂಡಾರಿ, ಸ್ವಾಗತ ಭಾಷಣವನ್ನು ಗುರುಮಾತೆ ಶ್ವೇತಾ ತುಂಬದ . ವಂದನಾರ್ಪಣೆಯನ್ನು ಕು. ಪ್ರಸಾದ ನಾಯಕ ಮಾಡಿದರು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ಅಣಕು ಪ್ರದರ್ಶನವು ಆಕರ್ಷಣೀಯ ಮತ್ತು ಕುತೂಹಲಕಾರಿಯಾಗಿತ್ತು. ಶಾಲೆಯ ಎಲ್ಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕವೃಂದ, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group