ಕಲಬುರ್ಗಿ – ಪತ್ರಕರ್ತ ಮಿತ್ರರನ್ನು ಒಂದೇ ಕಡೆ ನೋಡುವ ಭಾಗ್ಯ ಸಿಕ್ಕಿದೆ. ಮಾಧ್ಯಮ ರಂಗಕ್ಕೆ ವಿಶಿಷ್ಟ ಗೌರವ ಸ್ಥಾನಮಾನ ಗಳಿವೆ. ಪಾಶ್ಚಾತ್ಯ ದೇಶಗಳಿಂದ ಪತ್ರಿಕೋದ್ಯಮ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸ್ವಾತಂತ್ರ್ಯ ಹೋರಾಟ ರೂಪಿಸುವಲ್ಲಿ ಪತ್ರಿಕೆಗಳು, ಪತ್ರಕರ್ತರು ಸಾಹಸದ ಕೆಲಸ ಮಾಡಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಬುರ್ಗಿಯಲ್ಲಿ ನಡೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶಭಕ್ತಿ, ಸ್ವಾತಂತ್ರ್ಯ ದೊರಕಿಸಿ ಕೊಡುವ ತುಡಿತ, ಹಂಬಲ ಹಾಗೂ ಹಿಂದಿನ ತಲೆಮಾರಿನ ಪತ್ರಕರ್ತರು ಭದ್ರಬುನಾದಿ ಹಾಕಿಕೊಟ್ಟ ತತ್ವಾದರ್ಶಗಳು ಇಂದಿಗೂ ಚಾಲ್ತಿಯಲ್ಲಿವೆ. ಪತ್ರಿಕೋದ್ಯಮ ಅನೇಕ ಸಂಕಷ್ಟ ಗಳು, ಸವಾಲುಗಳ ಮಧ್ಯೆಯೂ ಸಿಡಿದೆದ್ದು ಹೊರಬಂದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಪತ್ರಕರ್ತರ ದಿಟ್ಟತನ ಹೋರಾಟ ಮೆಚ್ಚುವಂತಿದೆ. ಆದಾಗ್ಯೂ ಇಂದಿನ ಜಾಗತಿಕರಣ, ಖಾಸಗೀಕರಣ ಮತ್ತು ಉದಾರೀಕರಣ ಮಧ್ಯೆಯೂ ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ಕೆಲಸ ಮಾಡುತ್ತಿದ್ದಾರೆ ಎಂದರು.
ಸ್ಥಳೀಯ ಪತ್ರಿಕೆ ಗಳ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕಿದ್ದು, ಎಲ್ಲ ಸ್ತರದ ಪತ್ರಿಕೆಗಳ ಜೀವಂತ ಇರಬೇಕು. ಸ್ಥಳೀಯ ಪತ್ರಿಕೆಗಳ ಬಗ್ಗೆ ವಿಶೇಷ ಕಾಳಜಿವಹಿಸಿ, ಹೆಚ್ಚಿನ ಆದ್ಯತೆ ನೀಡಿ, ಜಾಹಿರಾತುಗಳಾಗಲಿ, ಬೇರೆ ಸವಲತ್ತುಗಳನ್ನು ನೀಡುವಲ್ಲಿ ಮುಂದಾಗುತ್ತೇನೆ ಎಂದರು.
ಹೆಲ್ತ್ ಕಾಡ್೯, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ ಇದೆ. ನಾವು, ನೀವೂ ಪ್ರೀತಿಯಿಂದ ವಿಶ್ವಾಸ, ಪತ್ರಿಕೋದ್ಯಮ ಮತ್ತು ರಾಜಕಾರಣಿ ಗಳ ನಡುವೆ ಅವಿನಾಭಾವ ಸಂಬಂಧ ಇದೆ. ಅದು ನಿರಂತರವಾಗಿ ಗೆಳೆತನ ಮುಂದುವರಿಸಿಕೊಂಡು ಹೋಗೋಣ. ತಮ್ಮಲ್ಲಿ ಒಗ್ಗಟ್ಟು ಸಾಧಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಗ್ರ ಅಭಿವೃದ್ಧಿ ಗೆ ಹೊಸ ಹೊಸ ಯೋಜನೆ, ಹೊಸ ಪ್ರಯೋಗ ಸಿದ್ದ ಮಾಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಒಂದು ವಾರದಲ್ಲಿ ಕೆಕೆಆರ್ಡಿಬಿ ಹಾಗೂ ವಿಶೇಷ ಕೋಶ ಚೈತನ್ಯ ತುಂಬಲಿದ್ದೇನೆ ಎಂದರು. ಈ ಭಾಗಕ್ಕೆ ನೀಡಲಾದ ಮೂರುಸಾವಿರ ಕೋಟಿ ರೂ. ನೀಡಲು ಬದ್ದ ಇರುವುದಾಗಿ ತಿಳಿಸಿದರು.