ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪಾತ್ರ ಮೇಲು ಕಾಣಬೇಕು

0
664
ಕನ್ನೋಳ್ಳಿ ಗ್ರಾಮದ ಶ್ರೀ ಸರಸ್ವತಿ ವಿದ್ಯಾ ನಿಕೇತನ ಪ್ರೌಢ ಶಾಲೆಯಲ್ಲಿ 2021-22ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು

ಸಿಂದಗಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಮನೆ ಮನವನ್ನು ಬೆಳಗುವ ನಂದಾ ದೀಪವಾಗುವಂತೆ ಶಿಕ್ಷಕರೊಂದಿಗೆ ಪಾಲಕರು ಉತ್ತಮ ವಿದ್ಯೆ ವಿನಯ ಸಂಸ್ಕಾರ ಸಂಸ್ಕೃತಿ ನೀಡಿ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳ್ಳಿ ಹೇಳಿದರು.

ತಾಲೂಕಿನ ಕನ್ನೋಳ್ಳಿ ಗ್ರಾಮದ ಹಿರೇಮಠದ ಶ್ರೀ ಸಿದ್ಧಲಿಂಗೇಶ್ವರ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸರಸ್ವತಿ ವಿದ್ಯಾನಿಕೇತನ ಪ್ರೌಢ ಶಾಲೆಯ 2021-22ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯೆ ಎಂಬುದು ನಾಲ್ಕಕ್ಷರ ಕಲಿತು ಚಿಕ್ಕ ಉದ್ಯೋಗ ಪಡೆದುಕೊಂಡರೆ ಸಾಲದು ಉನ್ನತ ವಿದ್ಯೆ ಪಡೆದು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದರು.

ಶಿಕ್ಷಣ ಇಲಾಖೆಯ ಬಿ.ಆರ್.ಪಿ ಎಸ್.ಕೆ.ಗುಗ್ಗರಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಸಂಸ್ಕಾರ ಪಡೆದುಕೊಂಡು ಉತ್ತಮ ನಾಗರಿಕನಾಗಬೇಕು ವಿದ್ಯೆಯಲ್ಲಿ ಛಲ ಇರಬೇಕು ಆ ಛಲ ಜೀವನದಲ್ಲಿ ಉತ್ತಮ ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದು ಸಲಹೆ ನೀಡಿದರು.

ವಿಜಯಪುರ ಜಿಲ್ಲಾ ಸ್ಕೌಡ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಿಕ ರಾಜಶೇಖರ ಖೇಡಗಿ ಮಾತನಾಡಿ, ಸೃಜನಶೀಲ ಶಿಕ್ಷಕರು ಶೈಕ್ಷಣಿಕ ದೂರದೃಷ್ಟಿ ಮತ್ತು ಮಕ್ಕಳ ಕಲಿಕಾ ಉತ್ಸವಕ್ಕೆ ಪ್ರೇರಣೆ ನೀಡಲು ಸ್ಕೌಟ್ ಮತ್ತು ಗೈಡ್ಸ್ ಮೂಲಕ ಹಾಗೂ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತಯಾರ ಮಾಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡಾ ಸಾಂಸ್ಕೃತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಈ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯಪಾಲರಿಂದ ಗೌರವ ಸನ್ಮಾನ ಜರುಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ, ಮಹೇಶ ಹಿರೇಮಠ, ಕಿರಣಕುಮಾರ ಹೂಗಾರ, ಸಂತೋಷ ಬಂದೆ,ಬಿ ಜಿ ಬಿರಾದಾರ, ಸಿದ್ದನಗೊಂಡಪ್ಪಗೌಡ ಎಸ್ ಪಾಟೀಲ, ಸಿದ್ದಣ್ಣ ಚೌಧರಿ,ಶಂಕರ ಬಗಲಿ, ಭಾಗಪ್ಪ ಶಿವಣಗಿ, ಬಾಸ್ಕಾರ ನಾಲ್ಕಮಾನ, ಚನ್ನಪ್ಪ ಯಂಕಂಚಿ, ಕೇಸುರಾಯ ಮಾಡಗಿ, ಶರಣಪ್ಪ ಮಾಗಣಗೇರಿ, ಬಾಬುಗೌಡ ಪಾಟೀಲ,ಸಿದ್ದಪ್ಪ ಟೆಂಗಳಿ, ಮುತ್ತಪ್ಪ ಹರಿಜನ, ದೈಹಿಕ ಶಿಕ್ಷಕ ಎಸ್.ಎಸ್.ಪೊಲೀಸ ಪಾಟೀಲ, ಶ್ವೇತಾ ಹಳ್ಳಿ. ಎಂ.ಎಲ್.ಮುಲ್ಲಾ, ಕೆ.ಎಸ್.ಚೌಧರಿ, ಅಬ್ದುಲ್ ಯರಗಲ್ ಗೌಸ್ ಅತ್ತಾರ,ಎ ಆರ್ ಮುಗಳಿ, ಎನ್.ಎಸ್.ಅಂಬಿಗೇರ, ಸರಸ್ವತಿ ಬಡಿಗೇರ, ಸುಜಾತ ಗೌಡ,ರೋಹಿಣಿ ಗೌಡ,ರಂಜನಾ ಗೌಡ ಭಾಗವಹಿಸಿದ್ದರು.

ಹಿರೇಮಠದ ಸರಸ್ವತಿ ವಿದ್ಯಾನಿಕೇತನ ಪ್ರೌಢ ಶಾಲೆಯ ಮುಖ್ಯಗುರು ಸಂಗಯ್ಯ ಗಚ್ಚಿನಮಠ ಸ್ವಾಗತಿಸಿದರು. ಅಂಬ್ರೀಶ ಒಂಟೆತ್ತಿನ ಕಾರ್ಯಕ್ರಮ ನಿರೂಪಿದರು ವಂದಿಸಿದರು.