Homeಸುದ್ದಿಗಳುಶಿವಾ ಫೌಂಡೇಶನ್ ಕಾರ್ಯ ಶ್ಲಾಘನೀಯ-ಮರ್ದಿ

ಶಿವಾ ಫೌಂಡೇಶನ್ ಕಾರ್ಯ ಶ್ಲಾಘನೀಯ-ಮರ್ದಿ

ಮೂಡಲಗಿ: ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಗೋಕಾಕದ ಶಿವಾ ಫೌಂಡೇಶನ್‌ ರವರು ನೋಟಬುಕ್ ಹಾಗೂ ಕಲಿಕೋಪಕರಣಗಳನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.

ಅವರು ಮೂಡಲಗಿ ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಿವಾ ಫೌಂಡೇಶನ್‌ ರವರು ಕೊಡಮಾಡಿದ ಕಲಿಕೋಪಕರಣಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಓದುತ್ತಿರುವರುವುದರಿಂದ ಇಂತಹ ದಾನಿಗಳ ಪಾತ್ರ ತುಂಬಾ ಅವಶ್ಯಕವಾಗಿದೆ ಎಂದರು.

ಶಿವಾ ಫೌಂಡೇಶನ್ ಕಾರ್ಯನಿರ್ವಾಹಕ ಶಾನೂರ ಹಿರೇಹೊಳಿ ಮಾತನಾಡಿ, ಬಡವರ ಹಾಗೂ ನಿರ್ಗತಿಕ ವಿದ್ಯಾರ್ಥಿಗಳು ಯಾರೂ ಕಲಿಕೆಯಿಂದ ವಿಮುಕ್ತರಾಗಬೇಕಿಲ್ಲ ಅಂತದ ವಿದ್ಯಾರ್ಥಿಗಳು ನಮ್ಮನ್ನು ಯಾವಾಗ ಬೇಕಾದರೂ ಸಂಪರ್ಕಿಸಬೇಕೆಂದು ಹೇಳಿದರು.

ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಮಾತನಾಡಿ ಸರ್ಕಾರಿ ಶಾಲೆಗಳು ಬೆಳೆಯಬೇಕಾದರೆ, ಸಮುದಾಯದ ಹಾಗೂ ಇಂತಹ ಸಂಘ ಸಂಸ್ಥೆಗಳ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದರು.

ಶಿವಾ ಪೌಂಡೇಶನದಿಂದ ಸುಮಾರು ೫೦ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಮು ಬಿಳಿಗೌಡ್ರ, ಶಿಕ್ಷಕರಾದ ಎಮ್.ಡಿ. ಗೋಮಾಡಿ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ ಮತ್ತಿತರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group