ಬೀದರ – ಗಡಿ ಬೀದರ್ ಜಿಲ್ಲೆಯ ಔರಾದ ತಾಲೂಕಿನಲ್ಲಿ ದನಗಳ ಮಾರಣಹೋಮ ನಡೆದಿರುವುದು ಘಟನೆ ವರದಿಯಾಗಿದೆ.
ಔರಾದ ತಾಲೂಕಿನ ಖುರೇಷಿ ಗಲ್ಲಿಯಲ್ಲಿ ಅಕ್ರಮವಾಗಿ ಜಾನುವಾರು ಕಡಿದು ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಈ ಘಟನೆ ಸಂಬಂಧ 6 ಜನರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನ ಮಾಡಿ ಹಾಗೂ ಇನ್ನೂ ಉಳಿದ ಮೂರು ಎತ್ತುಗಳನ್ನು ವಶಪಡಿಸಿಕೊಂಡು ಬಸವನ ವಾಡಿ ಔರದ ಗೋಶಾಲೆಗೆ ಬಿಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರಭು ಚವ್ಹಾಣ ಹೇಳುತ್ತಾರೆ ರಾಜ್ಯದಾದ್ಯಂತ ಗೋ ಮಾತಾ ಜೀವ ಉಳಿಸುವ ಕರ್ತವ್ಯ ನನ್ನದು ಎಂದು. ಟಿವಿ ವಾಹಿನಿಗಳ ಮುಂದೆ ಪೋಜ್ ಇಟ್ಟುಕೊಂಡು ಮಾತಾಡುವ ಸಚಿವರು ಈ ಘಟನೆಯ ಬಗ್ಗೆ ಏನೆನ್ನುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆ. ಸಚಿವರ ತವರೂರು ಕ್ಷೇತ್ರದಲ್ಲಿಯೇ ಗೋವು ಗಳ ಮಾರಣಹೋಮ ನಡೆದಿರುವುದು ಸಚಿವರ ಕಣ್ಣಿಗೆ ಕಾಣಿಸುತ್ತಿಲ ಎಂದು ಸಾರ್ವಜನಿಕರು ಸಚಿವ ಪ್ರಭು ಚವ್ಹಾಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಔರಾದ ಪೊಲೀಸ್ ದಾಳಿ ಮಾಡಿದ ಸಂದರ್ಭದಲ್ಲಿ ರವೀಂದ್ರನಾಥ ಸಿಪಿಐ, ಮಂಜನಗೌಡ ಪಾಟೀಲ ಪಿಎಸೈ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಬಿರಾದಾರ, ಸುನೀಲ್ ವಿನೋದ,ಹಾಗೂ ಪೊಲೀಸ್ ಸಿಬ್ಬಂದಿ ವಿಲಾಸ್ ಕೊಟ್ರೇಶ್ ನರಶ್ರೆಡ್ಡಿ ಅರುಣ ಜಗನ್ನಾಥ ಉಮರ್ ಪಟೇಲ್ ಇದ್ದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ