- Advertisement -
ಸಿಂದಗಿ: ಪಟ್ಟಣದ ವಾರ್ಡ್ ನಂಬರ್ 21, 22, 23 ರಲ್ಲಿ ಹೆಣ್ಣುಮಕ್ಕಳು ಶೌಚಾಲಯ ಇಲ್ಲದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು ಅಲ್ಲಿಯ ಮಹಿಳೆಯರು ದಲಿತ ಸೇನೆಯ ಯುವ ಅಧ್ಯಕ್ಷ ದತ್ತು ನಾಲ್ಕುಮನ್ ರವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಕೇವಲ ಒಂದೇ ದಿನದಲ್ಲಿ ಹಲವು ದಿನಗಳಿಂದ ಬಂದಾಗಿದ್ದ ಶೌಚಾಲಯವನ್ನು ಪುರಸಭೆಯ ಸಿಬ್ಬಂದಿ ಕಡೆಯಿಂದ ಶುಚಿಗೊಳಿಸಿ ಅದನ್ನು ಪ್ರಾರಂಭಮಾಡಿ ಅಲ್ಲಿಯ ಮಹಿಳೆಯರಿಗೆ ಶೌಚಾಲಯ ಸಮಸ್ಯೆಯನ್ನು ಬಗೆಹರಿಸಿ ವಾರ್ಡ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಿಬೂಬ ಸಿಂದಗಿಕರ, ಪುರಸಭೆಯ ಆರೋಗ್ಯಾಧಿಕಾರಿ ನಬಿರಸೂಲ ಉಸ್ತಾದ ಇದ್ದರು.