ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
ತಾಲೂಕಿನ ಬಳಗಾನೂರ ಮತ್ತು ಸುರುಗಿ ಹಳ್ಳಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಹಲವು ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಮತಯಾಚಿಸಿ ಮಾತನಾಡಿ, ಬಿಜೆಪಿ ಎಂದರೆ ಸುಳ್ಳು ಸುಳ್ಳು ಎಂದರೆ ಬಿಜೆಪಿ ಪತ್ರಿಕೆ ಮತ್ತು ಮಾಧ್ಯಮದ ಮುಖಾಂತರ ಈ ನಾಡಿನ ಜನತೆಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ವಿದೇಶದಲ್ಲಿರುವ ಕಪ್ಪು ಹಣ ತಂದು ಬಡವರ, ನಿರ್ಗತಿಕರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ದುಡ್ಡು ಜಮಾ ಮಾಡುತ್ತೇನೆ ರಾತ್ರಿ ಎದ್ದು ಚಪ್ಪಾಳೆ ಹಾಕಿದರೆ ದೀಪ ಹಚ್ಚಿದರೆ ಕರೋನ ರೋಗ ದೇಶದಿಂದ ತೊಲಗುತ್ತೆ ಎಂದು ದೇಶದ ಮಹಾ ಜನತೆಗೆ ಮರಳು ಮಾಡಿ ಅಧಿಕಾರ ನಡೆಸುತ್ತಿದ್ದಾರೆ ಬಿಜೆಪಿ ಸರಕಾರದ ಸುಳ್ಳು ಭರವಸೆಗಳು ಜನತೆಗೆ ಈಗ ಅರ್ಥ ಆಗುತ್ತಿದೆ ಮೋದಿಜಿ ಅವರಿಗೆ ತಕ್ಕ ಸಂದೇಶ ರವಾನಿಸಲಿದೆ ಈ ಉಪಚುನಾವಣೆ ಮುಂಬರುವ 2023 ರ ಚುನಾವಣೆಯ ದಿಕ್ಸೂಚಿ ಆಗಲಿದೆ ಈ ರಾಜ್ಯದ ಜನತೆಯ ನೆಮ್ಮದಿ ಜೀವನಕ್ಕಾಗಿ ಅಭಿವೃದ್ಧಿಗಾಗಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಲ ತುಂಬಬೇಕು ಎಂದು ಮನವಿ ಮಾಡಿದ ಅವರು, ಕೊರೋನಾ ಸಂಕಷ್ಟದಲ್ಲಿ ರೋಗಿಗಳಿಗೆ ಸ್ಪಂದಿಸದ ಬಿಜೆಪಿ ಸರಕಾರ ವ್ಯಾಕ್ಷಿನ್ ಇಲ್ಲದೆ ಔಷಧಿ ಇಲ್ಲದೆ ಬೆಡ್ ಇಲ್ಲದೆ ಅದೆಷ್ಟೋ ಬಡ ಕುಟುಂಬ ಹೊತ್ತು ದಿನ ಕೂಲಿ ಮಾಡಿ ಮಕ್ಕಳನ್ನು ಸಲುಹುವ ಯಜಮಾನನನ್ನು ಕಳೆದುಕೊಂಡ ಕುಟುಂಬಗಳು ಬೀದಿ ಪಾಲಾಗಿರುವ ಸನ್ನಿವೇಶಗಳು ಸಾಕಷ್ಟು ಉದಾರಣೆಗೆ ಉಂಟು ಕರೋನಾದಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಕೊಡುತ್ತೇನೆ ಎಂದು ಹೇಳಿದ ಸರಕಾರ ಮೃತಪಟ್ಟು ವರ್ಷ ಕಳೆಯುತ್ತ ಬಂದರೂ ಪರಿಹಾರ ಕೊಟ್ಟಿಲ್ಲ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಬಡ ಕುಟುಂಬಗಳು ಪಕ್ಕದ ನೆರೆ ರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ಖಂಡಿತ ಬರುತ್ತೆ ನಿಮಗೆಲ್ಲ ಎಚ್ಛತ್ತುಕೊಳ್ಳಲು ಒಂದು ಸುವರ್ಣ ಅವಕಾಶ ಬಂದಿದೆ ಉಪ ಚುನಾವಣೆಯಲ್ಲಿ ಅಶೋಕ್ ಮನಗೂಳಿ ಅವರಿಗೆ ಆಶೀರ್ವದಿಸಿ ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ವಿಜಯಪುರ ಜಿಲ್ಲೆ ಅಹಿಂದ ನಾಯಕ ಸೋಮನಾಥ ಕಳ್ಳಿಮನಿ, ಬಸವರಾಜ್ ತಳವಾರ, ಶಂಕರ್ ದೇವರಮನಿ, ಮಹಾತ್ಮಾ ಗಾಂಧಿ ಶುಗರ್ ಕಾರ್ಖಾನೆ ನಿರ್ದೇಶಕ ಬಾಬುರಾವ್ ತುಂಬಾ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.