ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿ ಇದೆಯೆಂದರೆ …!- ಹೊರಟ್ಟಿ ವ್ಯಂಗ್ಯ

Must Read

ಬೀದರ – ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿ ಇದೆಯೆಂದರೆ ನೀವೇ ವಿಚಾರ ಮಾಡಿ ಕನ್ನಡದ ಪರಿಸ್ಥಿತಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಶ್ಚರ್ಯ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕನ್ನಡ ನಾಮಪಲಕ ಕಡ್ಡಾಯ ಕರವೇ ಹೋರಾಟ ಮಾಡೋದು ನೂರರಷ್ಟು ಕರೆಕ್ಟ್ ಇದೆ. ಬೆಂಗಳೂರಿನಲ್ಲಿ ಬೇರೆ ರಾಜ್ಯದವರು ಬಂದು  ಕನ್ನಡ ನಾಮಫಲಕ ಹಾಕದೆ ಇಂಗ್ಲಿಷ್ ನಲ್ಲಿ ಹಾಕುತ್ತಾರೆ. ಅವರ ರಾಜ್ಯದಲ್ಲಿ ಅವರೇ ಬೇರೆ ಭಾಷೆಯಲ್ಲಿ ನಾಮ ಫಲಕಗಳನ್ನು ಹಾಕತ್ತಾರೆಯೇ ? ಕರ್ನಾಟಕದಲ್ಲಿ ಕನ್ನಡ ಇಲ್ಲಾ ಅಂದ್ರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದರು.

ನಗರದಲ್ಲಿ ಪತ್ರಕರ್ತರೊಡನೆ ಅವರು ಮಾತನಾಡಿದರು.

ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡೋದು ತಪ್ಪು ಎಂದ ಅವರು, ಸರ್ಕಾರವೇ ಕನ್ನಡ ಕಡ್ಡಾಯ ಮಾಡಿದರೆ ಕರವೇ ಯಾಕೆ ಹೋರಾಟ ಮಾಡುತ್ತದೆ. ಹೂಡಿಕೆದಾರರು ಇಂಗ್ಲಿಷ್ ಬೋಡ್೯ ನೋಡಿ ಬರುತ್ತಾರಾ. 60:40 ಅನುಪಾತ ಯಾಕೆ ಬೇಕು ನೂರಕ್ಕೆ ನೂರು ರಾಜ್ಯದಲ್ಲಿ ಕನ್ನಡ ಬೋಡ್೯ ಇರಬೇಕು ಎಂದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗಲು ರಾಜಕೀಯ ಮಾಡಬಾರದು ಎಂದ ಅವರು, ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ದೇವಸ್ಥಾನದಲ್ಲಿ ರಾಜಕೀಯ ಬರಬಾರದು. ದೇವರಿಗೆ ಜಾತಿ, ಧರ್ಮ ಅಂಥಾ ಬರಬಾರದು.ದೇವರು ಎಲ್ಲರಿಗೂ ಅಷ್ಟೇ, ಅವರವರ ನಂಬಿಕೆ ಮೇಲೆ ಇರುತ್ತಾನೆ.‌ ಬೇಕಾದರೆ ಹೋಗಬಹುದು ಬೇಡಾ ಅಂದರೆ ಬಿಡಬಹುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಠಕ್ಕರ್ ನೀಡಿದರು.


ವರದಿ : ನಂದಕುಮಾರ ಕರಂಜೆ, ಬೀದರ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group