spot_img
spot_img

ಪಾದಚಾರಿಗಳಿಗಿಲ್ಲ ಪುಟ್ ಪಾತ್: ಹಲವೆಡೆ ಕಾಮಗಾರಿ ಕಿರಿಕಿರಿ

Must Read

spot_img
   ಬೆಂಗಳೂರು : ಸದಾ ವಾಹನಗಳಿಂದ ಗಿಜಿಗುಡುವ ಉದ್ಯಾನ ನಗರಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪಾದಚಾರಿ ರಸ್ತೆ ಇಲ್ಲದೆ ಸಾರ್ವಜನಿಕರು ನಡು ರಸ್ತೆಯಲ್ಲೇ ಪರದಾಡುವಂತಾಗಿದೆ.
    ಪಾದಚಾರಿ ರಸ್ತೆಯಲ್ಲಿ ಬಿದ್ದಿರುವ ಮರ ಹಾಗೂ ಕೇಬಲ್ ಗಳಿಂದಾಗಿ ಓಡಾಡಲು ಜಾಗವಿಲ್ಲದೆ ಜಯನಗರದ 5ನೇ ಬ್ಲಾಕ್ ನ ರಾಘವೇಂದ್ರ ಸ್ವಾಮಿ ಗಳ ಮಠದ ಪಕ್ಕ ಹಾಗೂ ಆಸ್ಪತ್ರೆಗೆ ಸಮೀಪ ಇರುವ ಪಾದಚಾರಿ ಮಾರ್ಗದ ಚಿತ್ರಣ ಇದು, ಜನರು ರಸ್ತೆಯಲ್ಲೇ ನಡೆದಾಡುವಂತಾಗಿದೆ.
ಬನಶಂಕರಿಗೆ ಸಮೀಪ ದ ಜಯನಗರ ರಾಘವೇಂದ್ರ ಸ್ವಾಮಿಗಳ ಮಠ ದ ಪಕ್ಕ ಇರುವ ಬಲ ಭಾಗಕ್ಕೆ ತಿರುಗುವ ರಸ್ತೆ ಜೆ.ಪಿ ನಗರ ಕ್ಕೆ ಹೋಗುವ ಮಾರ್ಗದಲ್ಲಿ ಪಾದಚಾರಿ ರಸ್ತೆ ಇಲ್ಲದೆ ಜನರು ನುಗ್ಗಿ ಬರುವ ವಾಹನಗಳ ಮಧ್ಯೆಯೇ ಭೀತಿಯಿಂದ ರಸ್ತೆಗಿಳಿದು ಅಪಾಯ ತಂದುಕೊಳ್ಳುತ್ತಿದ್ದಾರೆ.
    ಪಾದಚಾರಿ ಮಾರ್ಗ ಒಡೆದು ಹಾಕಿ ಕೂಗಳತೆ ದೂರದಲ್ಲಿ ರಸ್ತೆಯ ಬದಿಯಲ್ಲಿ ಪಾನಿ ಪುರಿ ಅಂಗಡಿ ಅದರ ಮುಂಭಾಗದಲ್ಲಿ ಒಂದು ಮರದ ಹಲಗೆ ಅದರ ಮುಂಭಾಗದಲ್ಲಿ ಪ್ರಪಾತ, ನಗರದ ಹೃದಯ ಭಾಗದಲ್ಲಿರುವ ಪಾದಚಾರಿ ರಸ್ತೆಯನ್ನು ಅಗೆದಿರುವುದರಿಂದ ಸಾರ್ವಜನಿಕರು ಕಾಲಿಡಲಾಗದಂತಾಗಿದೆ. ಬಿಬಿಎಂಪಿ ವತಿಯಿಂದ ನಾನಾ ಕಾಮಗಾರಿಗಳ ನೆಪವೊಡ್ಡಿ ಪಾದಚಾರಿ ರಸ್ತೆ ಅಗೆಯಲಾಗಿದೆ.  ನಾನಾ ವಸ್ತುಗಳನ್ನು ಪಾದಚಾರಿ ರಸ್ತೆಯಲ್ಲಿಯೇ ಹರಡಿಕೊಂಡಿರುವುದು ಸಮಸ್ಯೆ ತಂದೊಡ್ಡಿದೆ ಹಾಗೂ
ಪಾದಚಾರಿಗಳಿಗೆ ಕಿರಿ ಕಿರಿ ಮಾಡುತ್ತಿದೆ. ಹೋಟೆಲ್ ಮುಂಭಾಗ ಆಟೋಗಳು ಹಾಗು ದ್ವಿಚಕ್ರ ವಾಹನಗಳು ನಿಲ್ಲುವುದರಿಂದಲೂ ಪಾದಚಾರಿ ಗಳು ಓಡಾಡಲು ಕಿರಿಕಿರಿಯಾಗುತ್ತಿದೆ ಎಂದು ಪಾದಚಾರಿ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ನಗರದ ಹೃದಯ ಭಾಗದಲ್ಲಿರುವ ಜೆ. ಪಿ ನಗರದ ರಸ್ತೆಯಲ್ಲಿ ಪಾದಚಾರಿ ರಸ್ತೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣ ಆಗಿ ಸಾರ್ವಜನಿಕರು ಕಾಲಿಡಲಾಗದಂತಾಗಿದೆ.
 ನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಓಡಾಡುತ್ತಾರೆ.
 ಕೆಲವು ದಿನಗಳಿಂದ  ಪಾದಚಾರಿ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ರಸ್ತೆ ಮಧ್ಯೆಯೇ ಸಾಗುತ್ತಿದ್ದಾರೆ. ಇದು ನಿವಾರಣೆಯಾಗುವುದು ಯಾವಾಗ ಎಂಬುದು ನಾಗರಿಕರ ಪ್ರಶ್ನೆ
ಇಲ್ಲಿ ಬಿಬಿಎಂಪಿ ವತಿಯಿಂದ ಹಾಕಿರುವ ಬೋರ್ಡ್ ನಲ್ಲಿ ಮಾಜಿ ಶಾಸಕರ ಹೆಸರನ್ನು ಬದಲಾವಣೆ ಮಾಡದೆ ಅವರನ್ನೇ ಹಾಲಿ ಶಾಸಕರಾಗಿ ಮಾಡಲಾಗಿದೆ. ಬಿ. ಬಿ. ಎಂ. ಪಿ ಯ ಗೂಗಲ್ ಪುಟದಲ್ಲಿ ಹಾಕಿರುವ ನೋಡಲ್ ಅಧಿಕಾರಿಯವರಿಗೆ ಕರೆ ಮಾಡಿ ಮಾತನಾಡಿದರೆ  ಅವರೇ  ತುಮುಕೂರಿಗೆ ವರ್ಗಾವಣೆ ಆಗಿರುವುದಾಗಿ ಹೇಳುತ್ತಾರೆ ಆದರೆ ಬಿಬಿಎಂಪಿ ಇನ್ನೂ ಅವರ ಹೆಸರನ್ನೇ ಹೇಳುತ್ತಿದೆ ! ಹೀಗಾದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರಾರು ಎನ್ನುವಂತಾಗಿದೆ
ಒಟ್ಟಿನಲ್ಲಿ ಪಾದಚಾರಿಗಳ ಸಮಸ್ಯೆ ಗೆ ಬಿ. ಬಿ. ಎಂ
ಪಿ ಹಾಗೂ ರಾಜ್ಯ ಸರ್ಕಾರ ಹಾಗೂ ಕ್ಷೇತ್ರ ದ ಶಾಸಕರು ಬೇಗನೇ ಪರಿಹಾರ ನೀಡಬೇಕಾಗಿದೆ
ಚಿತ್ರ :ಮಾಹಿತಿ :
 ತೀರ್ಥಹಳ್ಳಿ ಅನಂತ ಕಲ್ಲಾಪುರ
- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group