ಎಸ್ ಎಸ್ ಎಲ್ ಸಿ ಪರೀಕ್ಷಾ ಸಾಧನೆಯ ಜೊತೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕು – ಅರುಣ ಶಹಾಪುರ

Must Read

ಸಿಂದಗಿ: ಪರೀಕ್ಷೆಯಲ್ಲಿ ಸಾಧಿಸಿರುವದು ಸಾಕಷ್ಟಿದ್ದರೂ ಕೂಡ ಮುಂದಿನ ನಿಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧಿಸಬೇಕಾಗಿರುವದು ಬಹಳಷ್ಟಿದೆ.ಹೀಗಾಗಿ ಉತ್ತರೋತ್ತರವಾಗಿ ನೀವು ಹೆಚ್ಚಿನದನ್ನು ಸಾಧಿಸಿರಿ,ನಾಡಿಗೆ ವಿನೂತನ ರೀತಿಯ ಕೊಡುಗೆ ನಿಮ್ಮಿಂದ ಮೂಡಿಬಂದು ಶೈಕ್ಷಣಿಕ ಕ್ಷೇತ್ರದ ಹೆಮ್ಮರವಾಗಿ ಈ ನಾಡು ರೂಪುಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಹೇಳಿದರು.

ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ ದೇವರಹಿಪ್ಪರಗಿಯ ವಿಕಾಸ ಆರ್ ಕುಲಕರ್ಣಿ, ಸಿಂದಗಿಯ ಪಲ್ಲವಿ ತಳವಾರ,ರಾಹುಲ ಕಡ್ಲಗೊಂಡ,ಚಡಚಣ ತಾಲ್ಲೂಕಿನ ಚೆಲುವಿ.ಸು.ಶಹಾ ಇವರನ್ನು ಸನ್ಮಾನಿಸಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಿಂದಗಿ ತಾಲ್ಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ, ಮಾತನಾಡಿ ತಮ್ಮಲ್ಲಿರುವ ಧನಾತ್ಮಕ ಶಕ್ತಿಯ ಉಪಯೋಗ ಮಾಡಿಕೊಂಡು ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡು ರಾಷ್ಟ್ರಕ್ಕೆ ತಮ್ಮದೆಯಾದ ಕೊಡುಗೆ ಸಲ್ಲಿಸಲು ಸೂಚಿಸಿದರು ಬರುವ ದಿನಗಳಲ್ಲಿ ತಾವು ಸಂಶೋಧನೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ರಾಜ್ಯಕ್ಕೆ ಬೇಕಾದ ಒಳ್ಳೆಯ ಸಂಪನ್ಮೂಲವನ್ನು ಒದಗಿಸಲು ಕಾರ್ಖಾನೆಯ ಮಾಲೀಕರಾಗಲು ಅವರು ಸಲಹೆ ನೀಡಿದರು.

ದೇವರಹಿಪ್ಪರಗಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲೀಕಾರ, ಸಿಂದಗಿ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎಚ್ ಬಿರಾದಾರ,ಸಿಂದಗಿ ತಾಲ್ಲೂಕಿನ ಪ್ರೌಢಶಾಲೆಯ ಶಿಕ್ಷಕರ ಸಂಘದ ಕಾರ್ಯದರ್ಶಿ ಅಗ್ನಿ ಸರ್, ಸಿಂದಗಿ ಆಕ್ಸ್‌ಫರ್ಡ್‌ ಶಾಲೆಯ ಅಧ್ಯಕ್ಷ ಪ್ರಕಾಶ ಚೌಧರಿ,ದೇವರಹಿಪ್ಪರಗಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಪಿ ಸಿ ತಳಕೇರಿ, ಕೊಂಡಗೂಳಿ ಕ್ಲಸ್ಟರನ ಸಮೂಹ ಸಂಪನ್ಮೂಲ ವ್ಯಕ್ತಿ ಬಿ. ಆರ್ ಕಟೆ, ಮೋರಟಗಿ ಸಮೂಹ ಸಮೂಹ ಸಂಪನ್ಮೂಲ ವ್ಯಕ್ತಿ ಬಿ ವಿ ತಾಳಿಕೋಟಿ ,ದೇವರಹಿಪ್ಪರಗಿ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪಿ ಬಿರಾದಾರ, ೬೨೫ ಕ್ಕೆ ೬೨೫ ಅಂಕಗಳನ್ನು ಪಡೆದ ವಿಕಾಸ ಕುಲಕರ್ಣಿಯ ತಂದೆ ಹಾಗೂ ಶಿಕ್ಷಕ ಆರ್ ಎಮ್ ಕುಲಕರ್ಣಿ,ಸುನೀಲ ಶಹಾ ಸೇರಿದಂತೆ ಅನೇಕ ಜನ ಪಾಲಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧನೆಗೈದ ಮಕ್ಕಳ ಪಾಲಕರನ್ನು ಕೂಡಾ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ್ ಅವರು ಸನ್ಮಾನಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group