ಮಾದಕ ವ್ಯಸನ ಮುಕ್ತ ಸಮಾಜದ ಅಗತ್ಯವಿದೆ – ಡಾ. ಪ್ರಶಾಂತ ಮಾವರಕರ

0
30

ಮೂಡಲಗಿ: ಇಂದು ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣದ ಅಗತ್ಯವಿದೆ ನಮ್ಮ ದೇಶದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮದ್ಯಪಾನ ದೂಮಪಾನ ಹಾಗೂ ಡ್ರಗ್ಸ್ ಮಾಪಿಯಾಗಳಿಗೆ ಅನೇಕ ಯುವಕ ಯುವತಿಯರು ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದು ಗಾಂಜಾ ಡ್ರಗ್ಸ್ ಹಾಗೂ ಅಪೀಮಗಳಿಗೆ ಅನೇಕ ಯುವಕ ಯುವತಿಯರು ಮೋಜು ಮಸ್ತಿಯ ರೂಪದಲ್ಲಿ ಅನೈತಿಕ ಚಟಗಳ ದಾಸರಾಗಿ ತಮ್ಮ ಆರೋಗ್ಯ ಕಳೆದುಕೊಳ್ಳುವುದು ಅಲ್ಲದೇ ಆರೋಗ್ಯಕರ ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ ಆರೋಗ್ಯಕರ ಸಮಾಜ ನಿರ್ಮಾಣವೇ ಇಂದಿನ ಸಮಾಜದ ಮೂಲ ಅಗತ್ಯವಾಗಿದೆ ಎಂದು ಮೂಡಲಗಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಪ್ರಶಾಂತ ಮಾವರಕರ ಹೇಳಿದರು.

ಮೂಡಲಗಿ ಸಮೀಪದ ಪಟಗುಂದಿಯ ಸರಕಾರಿ ಪ್ರಾಥಮಿಕ
ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ
ಆರನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿನ ಯುವಕರು ಮನರಂಜನೆ ಹಾಗೂ ಮೋಜುಮಸ್ತಿ ರೂಪದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಮಾದಕ ವ್ಯಸನಿಗಳಾಗುತ್ತಿದ್ದು ಮಾದಕ ವ್ಯಸನದಿಂದ ಹೊರಬಂದು ಆರೋಗ್ಯಕರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಾಯಕವಾಗುವಂತಹ ವಾತಾವರಣ ಶಿಕ್ಷಣ
ಸಂಸ್ಥೆಗಳಲ್ಲಿ ಮತ್ತು ಸಮಾಜದಲ್ಲಿ ಸೃಷ್ಟಿ ಮಾಡುವುದು
ಅವಶ್ಯಕವಿದೆ ಎಂದರು.

ಕರ್ನಾಟಕ ನೌಕರರ ಮೂಡಲಗಿ ತಾಲೂಕಾ ಘಟಕದ
ನಿರ್ದೇಶಕರಾದ ರಾಜು ಬ. ಕೊಳದೂರ ಮಾತನಾಡಿ ಇಂದು ಯುವ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನೇಕ ಕೌಶಲ್ಯ ಆಧಾರಿತ ತರಬೇತಿಗಳಿದ್ದು ಅವುಗಳ ಸಮಗ್ರ ಮಾಹಿತಿಯನ್ನು ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುತ್ತದೆ ಅದರ ಸದುಪಯೋಗ ತೆಗೆದುಕೊಂಡು ವಿದ್ಯಾರ್ಥಿಗಳು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಪಟಗುಂದಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ
ಶಿವಬಸು ಗುಡ್ಲಿ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ತಮ್ಮ ಕುಟುಂಬದ ಆರೋಗ್ಯ ಮತ್ತು ತಮ್ಮ ಜೀವನವನ್ನು ಆರೋಗ್ಯಯುತವಾಗಿ ರೂಪಿಸಿಕೊಳ್ಳುವುದು ಅವಶ್ಯಕವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟಗುಂದಿಯ
ಶಾಂತಿಸಾಗರ ಗುರುಕುಲದ ಅಧ್ಯಕ್ಷರಾದ ಪಾರೀಶ ಹುಕ್ಕೇರಿ ವಹಿಸಿಕೊಂಡು ಮಾತನಾಡಿ, ಮದ್ಯಪಾನ ದೂಮಪಾನ
ಮಾಡುವದರಿಂದ ನಮ್ಮ ಆರೋಗ್ಯ ಹಾಳಾಗುವದಲ್ಲದೇ ನಮ್ಮ ಸಾವು ನಾವುಗಳೇ ತಂದುಕೊಂಡಂತೆ ಆರೋಗ್ಯ ಮುಖ್ಯ ಎಂದವರು ದುಶ್ಚಟಗಳಿಂದ ದೂರ ಇರಬೇಕೆಂದರು.

ಕಾರ್ಯಕ್ರಮದಲ್ಲಿ ಪಟಗುಂದಿಯ ಹಿರಿಯರಾದ ರಾಮಪ್ಪಾ ಗಣಾಚಾರಿ, ಎಸ್.ಆಯ್. ನದಾಫ, ಕೆ.ಎಸ್.ಜಮಾದಾರ ಉಪನ್ಯಾಸಕರಾದ
ರಶ್ಮೀ ಕಳ್ಳಿಮನಿ ಚೈತ್ರಾ ಕೋತಿನತೋಟ, ಜಿ.ಎಚ್. ಕಡಪಟ್ಟಿ
ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ, ಬಿ.ಎಂ,ಕಬ್ಬೂರೆ ಮತ್ತಿತರರು ಹಾಜರಿದ್ದರು.

ಲಲಿತಾ ಪೂಜೇರಿ ನಿರೂಪಿಸಿದರು ಅನಿತಾ ರಾಯಪ್ಪನವರ ಸ್ವಾಗತಿಸಿದರು ನೀಲಮ್ಮ ಕರಿಗಾರ ವಂದಿಸಿದರು.

LEAVE A REPLY

Please enter your comment!
Please enter your name here