ಕಾಂಗ್ರೆಸ್ ನಲ್ಲಿ ನಾಯಕತ್ವ ಇಲ್ಲ, ಪಕ್ಷಕ್ಕೆ ವಯಸ್ಸಾಗಿದೆ – ಸಿ ಎಂ ಬೊಮ್ಮಾಯಿ

Must Read

ಬೀದರ – ಕಾಂಗ್ರೆಸ್ ಪಕ್ಷ ವಯಸ್ಸಾದ ಪಕ್ಷ ಇಡೀ ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷ ವಿಸರ್ಜನೆ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರೆ ರಾಹುಲ್ ಗಾಂಧಿ ನಾಯಕತ್ವ ಒಪ್ಪಿಕೊಳ್ಳಲು ಅನುಮಾನಿಸುತ್ತಿದ್ದಾರೆ. ಆ ಪಕ್ಷಕ್ಕೆ ನಾಯಕತ್ವ ಇಲ್ಲ ಆದರೂ ನಾವು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಭ್ರಮೆಯಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.

ಬೀದರ್ ನಲ್ಲಿ ಸ್ಥಳೀಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ ಸಿ ಎಮ್ ಬಸವರಾಜ ಬೊಮ್ಮಾಯಿ ಘಾಳೆ ಪಂಕ್ಷನ ಹಾಲ್ ನಲ್ಲಿ ಗ್ರಾಮ ಪಂಚಾಯತ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಬೀದರ್ ಜಿಲ್ಲೆ ಅಂದರೆ ನಮ್ಮ ಕರ್ನಾಟಕ ರಾಜ್ಯದ ಕಿರೀಟ ಇದ್ದಂತೆ, ಬೀದರ್ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಆದರೆ ಮಾತ್ರ ಆ ಕಿರೀಟಕ್ಕೆ ಶೋಭೆ ಬರುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯ ಮಂತ್ರಿ ಬೊಮ್ಮಾಯಿ, ರೈತರು ಉಳಿದರೆ ದೇಶ ಉಳಿಯುತ್ತದೆ ಎಂದು ರವೀಂದ್ರ ಟಾಗೋರ್‌ ಹೇಳಿದರು.ದೇವರು ಕಾರ್ಯಕರ್ತರ ಮತ್ತು ರೈತರ ಶ್ರಮದಲ್ಲಿ ಇದ್ದಾನೆ. ಬೀದರನಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿಗೆ ಮಹತ್ವವನ್ನು ಕೊಟ್ಟಿದ್ದು ಗ್ರಾಮಗಳ ಅಭಿವೃದ್ಧಿಗಾಗಿ ಸುಮಾರು ಏಳು ಸಾವಿರ ಐದನೂರು ಗ್ರಾಪಂಚಾಯತಿಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.ಸ್ತ್ರೀ ಸ್ವಸಹಾಯ ಪ್ರತಿ ಒಂದು ಸಂಘಕ್ಕೆ ಒಂದು ಲಕ್ಷ ರೂಪಾಯಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದ ಹಣ ಬಲ ಇದೆ ಎಂದು ಹೇಳಿದ ಬೀದರನ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟ ಸಿ ಎಮ್, ನಮ್ಮಲ್ಲಿ ಜನ ಬಲ ಇದೆ ಎಂದು ಹೇಳಿದರು.

ಬೀದರ್ ಜಿಲ್ಲೆಯ ಕಾಂಗ್ರೆಸ್ ನಾಯಕರು ಶಾಸಕರು ಅಧಿಕಾರದಲ್ಲಿದ್ದಾಗ ಜನರ ಸಮಸ್ಯೆ ಸ್ಪಂದಿಸಬೇಕಿತ್ತು ಆದರೆ ಅವರು ಜನರ ಸಮಸ್ಯೆ ಸ್ಪಂದಿಸಿಲ್ಲ.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಗೆ ಮೂರು ಸಾವಿರ ಕೋಟಿ ರೂಪಾಯಿ ಕಾಮಗಾರಿಯ ಶಿಲಾನ್ಯಾಸ ಮಾಡಲಾಗಿದೆ ಅಲ್ಲದೆ ಕಲ್ಯಾಣ ಕರ್ನಾಟಕದಲ್ಲಿ ಐದು ಸಾವಿರ ಶಿಕ್ಷಕರ ಭರ್ತಿ ಮಾಡಲಾಗಿದೆ ಈಗಾಗಲೆ ಒಬ್ಬ ಶಾಶ್ವತ ಕಾರ್ಯದರ್ಶಿಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೋರ್ಡಗೆ ನೇಮಕ ಮಾಡಲಾಗಿದೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೆನೆ ಎಂದು ಬೊಮ್ಮಾಯಿ ಹೇಳಿದರು.

ಯಾರಿಗಾದರೂ ವಯಸ್ಸಾದರೆ ಕನ್ನಡಕ ಹಾಕಬೇಕು ಅಂದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬೇಕಾಗಿದೆ ನಮ್ಮ ಪಕ್ಷದ ನಾಯಕರಿಗೆ ಕನ್ನಡಕ ಬೇಕಾಗಿಲ್ಲ ಎಂದು ಕುಟುಕಿದರು.ಕುಟುಂಬದಲ್ಲಿ ಸಮಾನತೆ ಇರಬೇಕು ನಮ್ಮ ಸಮಾಜ ನಮ್ಮ ಜನತೆ ನಮ್ಮ ಕುಟುಂಬದ ಸದಸ್ಯರು ಎಂದು ಹೇಳಬೇಕು. ಕಾಂಗ್ರೆಸ್ ನವರು ಕುಟುಂಬ ರಾಜಕೀಯ ಮಾಡುತ್ತಾರೆ ನಿವು ಜಾಗ್ರತೆಯಿಂದ ಇರಬೇಕು ಎಂದು ಗ್ರಾಮ ಪಂಚಾಯತ ಸದಸ್ಯರಿಗೆ ಕಿವಿ ಮಾತು ಹೇಳಿದರುು.

ನೀವು ಕಾಂಗ್ರೆಸ್ ಪಕ್ಷದ ಹಣ ತೆಗೆದುಕೊಳುವುದಿಲ್ಲ ಎಂದು ನನಗೆ ಭರವಸೆ ನೀಡಿ, ಈ ಚುನಾವಣೆ ಮುಗಿದ ಮೇಲೆ ಮತ್ತೆ ನಾನು ನಿಮ್ಮ ಜಿಲ್ಲೆ ಗೆ ಬರುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಜನತೆಯ ಚಪ್ಪಾಳೆ ಗಿಟ್ಟಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group