ಮೂಡಲಗಿ – ರೈತರ, ಬಡಜನರ, ಹಿಂದುಳಿದವರ ಸಮಾಸ್ಯೆಗಳನ್ನು ಆಲಿಸುತ್ತ ಆರಂಭಗೊಂಡ ಭಾರತ ಜೋಡೋ ಪಾದಯಾತ್ರೆಯು ಇಂದು ಸಂಪನ್ನಗೊಂಡಿದೆ. ಇದಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಇಂದು ಅರಭಾಂವಿಯಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅರಭಾವಿಯಲ್ಲಿ ಜನತೆ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವಿ ತುಪ್ಪದ ಹೇಳಿದರು.
ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಅರವಿಂದ ದಳವಾಯಿ ಮಾತನಾಡಿ, ಎರಡು ರೀತಿಯಲ್ಲಿ ಜ.೩೦ ನೇ ತಾರೀಖು ಮಹತ್ವದ್ದು, ಒಂದು ಭಾರತ ಜೋಡೋ ಪಾದಯಾತ್ರೆಯ ಮುಕ್ತಾಯ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬಲಿದಾನದ ದಿನ ಇಂದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡೋ ಪಾದಯಾತ್ರೆಯು ಇಂದಿಗೆ ಸಂಪನ್ನಗೊಳ್ಳುತ್ತಿದೆ. ಎಲ್ಲರನ್ನು ಜೋಡಿಸುವ ಈ ಯಾತ್ರೆ ಯಶಸ್ವಿಯಾಗಿದೆ ಎಂದರು.
ಮತ್ತೊಬ್ಬ ಕಾಂಗ್ರೆಸ್ ನಾಯಕ ವಿ ಪಿ ನಾಯಕ ಮಾತನಾಡಿ, ನಮ್ಮದು ಡಬಲ್ ಎಂಜಿನ್ ಸರಕಾರ ಎಂದು ಹೇಳುವ ಬಿಜೆಪಿಯಿಂದ ಬೆಲೆಯೇರಿಕೆ, ನಿರುದ್ಯೋಗದಂಥ ಸಮಸ್ಯೆಗಳು ಉದ್ಭವವಾಗಿವೆ. ಧರ್ಮಗಳ ಮಧ್ಯೆ ದ್ವೇಷ ಬೆಳಸುವುದು, ಮುಗ್ಧ ಜನರ ಮನಸಿನಲ್ಲಿ ದ್ವೇಷ ಬೆಳಸುವುದು ಇವೇ ಕೆಲಸಗಳನ್ನು ಬಿಜೆಪಿ ಮಾಡುತ್ತಿದೆ. ಆದರೆ ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿಯವರು ಭಾರತ ಜೋಡೊ ಯಾತ್ರೆ ಆರಂಭಿಸಿದ್ದಾರೆ ಎಂದರು
ಹನುಮಂತ ಚಿಕ್ಕೇಗೌಡರೂ ಈ ಸಂದರ್ಭದಲ್ಲಿ ಮಾತನಾಡಿದರು.
ಮೂಡಲಗಿಯ ಕಲ್ಮೇಶ್ವರ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಬಿ.ಬಿ.ಹಂದಿಗುಂದ, ಪ್ರಕಾಶ ಅರಳಿ, ಸುರೇಶ ಮಗದುಮ್ಮ, ಸುಭಾಸ ಪೂಜೇರಿ, ಮಲಿಕ ಕಳ್ಳಿಮನಿ, ಮಹಾಲಿಂಗಯ್ಯಾ ನಂದಗಾವಿಮಠ, ಗುಂಡಪ್ಪ ಕಮತೆ, ಬಸಗೌಡಾ ಪಾಟೀಲ, ವೆಂಕನಗೌಡಾ ಪಾಟೀಲ ( ರೈತ ಮೋರ್ಚಾ ಅಧ್ಯಕ್ಷ), ಮಲಿಕ ಲಾಡಖಾನ( ಸೇವಾದಳ ಅಧ್ಯಕ್ಷ) ಮಹಾದೇವ ಸಮಗಾರ ( ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ), ಶೌಕತ್ ಮುಲ್ತಾನಿ, (ಕೌಜಲಗಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಕಾರ್ಯಾಧ್ಯಕ್ಷ) ಮುಂತಾದವರು ಭಾಗವಹಿಸಿದ್ದರು.