spot_img
spot_img

ದಾಸೋಹ ಮಾಡಲು ಅಹಂಕಾರ ಇರಬಾರದು – ಡಾ. ಸಾವಿತ್ರಿ ಕಮಲಾಪೂರ

Must Read

- Advertisement -

ಲಿಂಗಾಯತ ಸಂಘಟನೆ ಡಾ. ಫ .ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 06- 10- 2024 ರಂದು ಸಾಮೂಹಿಕ ಪ್ರಾರ್ಥನೆ  ಹಾಗೂ ಶರಣೆ ಡಾ. ಸಾವಿತ್ರಿ ಕಮಲಾಪೂರ ಅವರಿಂದ ಉಪನ್ಯಾಸ ಜರುಗಿತು.

ಶರಣೆ ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿಕೊಟ್ಟರು. ಶರಣೆ ಜಿ ಬಿ ಜವಣಿ ,ವಿ ಕೆ ಪಾಟೀಲ, ಬಸವರಾಜ್ ಗುರನಗೌಡ, ಆನಂದ ಕರ್ಕಿ, ಶರಣೆ ರುದ್ರಮ್ಮ ಅಕ್ಕಣ್ಣವರ, ಸುನಿಲ್ ಸಾಣಿಕೊಪ್ಪ ಮಹಾದೇವಿ ಅರಳಿ ವಚನಗಳನ್ನು ಹೇಳಿದರು.

ಅಧ್ಯಕ್ಷತೆಯನ್ನು ಸಂಗಮೇಶ ಅರಳಿ ವಹಿಸಿದರೆ ಸುರೇಶ ನರಗುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಎಂ ವೈ ಮೆಣಸಿನಕಾಯಿ ಅವರು ಪರಿಚಯಿಸಿದರು.

- Advertisement -

ಡಾ. ಸಾವಿತ್ರಿ ಕಮಲಾಪೂರ ಮಾತನಾಡಿ, ಪುಣ್ಯಸ್ತ್ರೀ  ಕಾಳವ್ವೆಯ ಪತಿ ಉರಿಲಿಂಗಪೆದ್ದಿಯವರು ಒಂದು ಸಲ ಉರಿಲಿಂಗದೇವರ ಮನೆಗೇ ಕಣ್ಣು ಹಾಕಿ, ಅಲ್ಲಿ ಗುರು ಉರಿಲಿಂಗ ದೇವರು ಶಿಷ್ಯ ರಿಗೆ ಲಿಂಗ ದೀಕ್ಷೆಯನ್ನು ಕೊಡುವುದನ್ನು ನೋಡಿ ತನ್ನ ಮನಸ್ಸೂ ಪರಿವರ್ತನೆ ಆಗಿ, ಕಳ್ಳತನ ಮಾಡುವ ಕಾಯಕ ಬಿಟ್ಟು ಕೊನೆಗೆ, ಗುರುಗಳಿಂದ ಲಿಂಗದೀಕ್ಷೆ ಪಡೆಯಲು ಕಾಡಿ ಬೇಡಿ ಕೊನೆಗೆ ಗುರುಗಳಿಂದಲೇ ದೀಕ್ಷೆ ಪಡೆದು, ಅದೇ ಕೊರಳಿ ಮಠಕ್ಕೆ ಗುರು ಆದದ್ದು ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದು ಇಡುವಂತಹ ವಿಷಯ. ಈ ಉರಿಲಿಂಗ ಪೆದ್ದಿಯವರ ಪತ್ನಿಯಾದ ಕಾಳವ್ವೆಯು ಸಂಸ್ಕೃತ ಪಂಡಿತೆಯೂ ಆಗಿದ್ದಳು .
ಅವರ ಒಂದು ವಚನದಲ್ಲಿ ಜಾತಿ ನಿಂದನೆ ಮಾಡಿದರೆ ಕೋಟಿ ಜನ್ಮದಲ್ಲಿ ಹಂದಿಯಾಗಿ ಜನಿಸುತ್ತಾರೆ ಎಂದು ಉಲ್ಲೇಖವಿದೆ ಎಂದರು.

ಪುಣ್ಯಸ್ತ್ರೀ ಅಂದರೆ ಗರತಿ, ಸಾಧ್ವಿ, ಪತಿವ್ರತೆ. ಅರಿಷಡ್ವರ್ಗ ಶರಣರಾದವರಲ್ಲಿ ದಾಸೋಹ ಮಾಡಲು ಅಹಂಕಾರ ಇರಬಾರದು. ಅಣ್ಣ ಬಸವಣ್ಣನವರು ಕೊಟ್ಟು ನೋಡುತ್ತಾರೆ ಕಸಿದುಕೊಂಡು ನೋಡುತ್ತಾರೆ. ಪರಮಾತ್ಮ ಬೇರೆ ಎಲ್ಲಿಯೂ ಇಲ್ಲ .ಶುದ್ಧ ಮನವನ್ನು ಹೊಂದಿದ ಪ್ರತಿ ಶರಣರಲ್ಲಿ ಇರುವನು. ಶರಣರು ಅರಿಷಡ್ವರ್ಗ ಗಳನ್ನು ಗೆಲ್ಲಬೇಕು ,ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ಶರಣರು ನುಡಿದಂತೆ ನಡೆದರು. ಶರಣರಾದವರು ಲಿಂಗಧಾರಣೆಯನ್ನು ಮಾಡಿಕೊಂಡಿರಬೇಕು .ಯಾರು ಲಿಂಗವನ್ನು ಕಟ್ಟಿಕೊಳ್ಳುವುದಿಲ್ಲವೋ ,ಅವರು ಇದ್ದೂ ಸತ್ತಂತೆ ಎಂದರು.

ಶಂಕರ ಪಡೆನ್ನವರ ದಾಸೋಹ ಸೇವೆ ನೀಡಿದರು. ಶಾಂತಾ ಕುಂಗಿ, ಬಸವರಾಜ ಬಿಜ್ಜರಗಿ ,ಗದಿಗೆಪ್ಪ ತಿಗಡಿ ,ಗಂಗಪ್ಪ ಉಣಕಲ್ಲ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಬಾಳಗೌಡ ದೊಡ್ಡ ಬಂಗಿ, ವಿರೂಪಾಕ್ಷ ದೊಡ್ಡಮನಿ, ಶಿವಾನಂದ ತಲ್ಲೂರ ,ಶಿವಾನಂದ ನಾಯಕ ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group