ಎದೆ ಮಟ್ಟ ನೀರಲ್ಲಿಯೇ ನಿಂತು ಧ್ವಜ ಹಾರಿಸಿದರು !

Must Read

ಭಾಗಲ್ ಪುರ (ಬಿಹಾರ ) – ದೇಶದೆಲ್ಲೆಡೆ ೭೫ ನೇ ಸ್ವಾತಂತ್ರ್ಯ ಸಂಭ್ರಮವಿದೆ. ಆದರೆ ಒಂದು ಕಡೆ ಕೊರೋನಾ ಮಹಾಮಾರಿ ಕಾಡುತ್ತಿದ್ದರೆ ಇನ್ನೊಂದು ಇತ್ತೀಚೆಗೆ ಸುರಿದ ಭಾರೀ ಮಳೆ, ಮಹಾಪೂರದ ಕಾಟ. ಇಂಥ ಸಂಕಟದಲ್ಲೂ ದೇಶದ ಯುವಕರು ಪ್ರವಾಹದಿಂದ ಉಂಟಾದ ಎದೆ ಮಟ್ಟ ನೀರಲ್ಲಿಯೇ ನಿಂತು ಧ್ವಜಾರೋಹಣ ಮಾಡಿದ ವೀಡಿಯೋ ಒಂದು ವೈರಲ್ ಆಗಿದೆ.

ಈ ವೀಡಿಯೋ ನೋಡಿದ ದೇಶದೊಳಗಿನ ದ್ರೋಹಿಗಳು ಒಂದು ಕ್ಷಣ ನಾಚಿ ನೀರಾಗಬೇಕು. ಇಲ್ಲಿಯ ಅನ್ನ ತಿಂದು ವೈರಿ ದೇಶಗಳಿಗೆ ಜಿಂದಾಬಾದ್ ಎನ್ನುವ ನರಿಗಳು ಈ ಯುವಕರ ದೇಶಪ್ರೇಮವನ್ನು ನೋಡಿ ಬುದ್ಧಿ ಕಲಿತರೆ ಅದೇ ಅವರು ಈ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆಯೆನ್ನಬಹುದು.

ಬಿಹಾರದ ಭಾಗಲ್ ಪುರ ಜಿಲ್ಲೆಯ ದಿಯಾರಾದ ಹಳ್ಳಿಯೊಂದರಲ್ಲಿ ಮಹಾಪೂರ ಬಂದು ಶಾಲೆ ಅರ್ಧ ಮುಳುಗಿದೆ. ಅಷ್ಟೇ ಯಾಕೆ ಇಡೀ ಗ್ರಾಮವೇ ಅರ್ಧ ಮುಳುಗಿಹೋಗಿದೆ. ಇಂಥದರಲ್ಲಿಯೇ ಸ್ವಾತಂತ್ರ್ಯ ದಿನ ಬಂದಿದ್ದು ಇಲ್ಲಿನ ವಿದ್ಯಾಲಯವೊಂದರಲ್ಲಿ ಸ್ಥಳೀಯ ಯುವಕರು ನೀರಿನಲ್ಲಿಯೇ ನಿಂತು ಧ್ವಜ ಹಾರಿಸಿದ್ದು ಅವರ ದೇಶಾಭಿಮಾನಕ್ಕೆ ಇಡೀ ದೇಶವೇ ಮೆಚ್ಚುಗೆ ಸೂಚಿಸುವಂತಾಗಿದೆ.

ಎದೆ ಮಟ್ಟದ ನೀರಲ್ಲಿ ನಿಂತು ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡುವ ಯುವಕರು ವಂದೇ ಮಾತರಂ ಘೋಷಣೆಯನ್ನೂ ಮೊಳಗಿಸಿರುವ ವೀಡಿಯೋ ವೈರಲ್ ಆಗಿದೆ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group