spot_img
spot_img

ಸಮಾಜಕ್ಕೋಸ್ಕರ ತಮ್ಮನ್ನು ಅರ್ಪಿಸಿಕೊಂಡವರು ಶ್ರೇಷ್ಠರು – ಸಂದೀಪ ಪಾಟೀಲ

Must Read

spot_img
- Advertisement -

ಸವದತ್ತಿ: “ಭಾರತದ ಸಂವಿಧಾನದ ಮುನ್ನುಡಿಯಲ್ಲಿ ‘ನಾವು’ ಎನ್ನುವ ಪದವಿದೆ. ಅಂದರೆ ಭಾರತದ ನಾವೆಲ್ಲರೂ ಎನ್ನುವ ಸಮಷ್ಠಿ ಪ್ರಜ್ಞೆಯ ನುಡಿ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯುತ್ತಿದೆ. ಇದನ್ನು ನಾವು ಜೀವನದಲ್ಲಿ ಅನುಸರಿಸುತ್ತಾ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಸವದತ್ತಿಯ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಸಂದೀಪ ಪಾಟೀಲ ನುಡಿದರು.

ಅವರು ಇಲ್ಲಿನ ಕೆ. ಎಲ್. ಇ. ಸಂಸ್ಥೆಯ ಎಸ್. ವಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯ, ತಾಲೂಕ ಕಾನೂನು ಸೇವಾ ಸಮಿತಿ ಮತ್ತು ಸವದತ್ತಿ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ‘ಭಾರತದ ಸ್ವಾತಂತ್ರ್ಯದ ೭೫ ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ’ ಹಾಗೂ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ ಪ್ಯಾನ್ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ತನಗಾಗಿ ಬದುಕಿದವರನ್ನು ಸಮಾಜ ನೆನಪಿಡುವುದಿಲ್ಲ, ಸಮಾಜಕ್ಕೋಸ್ಕರ ತಮ್ಮನ್ನು ಅರ್ಪಿಸಿಕೊಂಡವರನ್ನು ಸಮಾಜ ನೆನಪಿಡುತ್ತದೆ. ಅವರುಗಳಲ್ಲಿ ಬುದ್ಧ, ಗಾಂಧಿ, ಬಸವಣ್ಣ, ಪೈಗಂಬರ್, ಜೀಸಸ್ ಕ್ರಿಸ್ತ, ಶಾಸ್ತ್ರೀಜಿ ಮುಂತಾದವರು. ಹೀಗಾಗಿ ನಾವು ಕೂಡ ಸಮಾಜಕ್ಕೋಸ್ಕರ ಬದುಕನ್ನು ಮುಡಿಪಾಗಿಟ್ಟು ಸಾರ್ಥಕತೆಯನ್ನು ಹೊಂದಬೇಕು. ಸಾಮಾಜಿಕ ಜಾಲತಾಣಗಳನ್ನು ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬಳಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಅಪರಾಧಗಳು ಸಾಮಾಜಿಕ ಜಾಲತಾಣಗಳಿಂದ ಉಂಟಾಗುತ್ತಿವೆ. ಈ ಅಪರಾಧ ತಡೆಯಲು ಐ.ಟಿ.ಕಾಯ್ದೆ-೨೦೦೦ನ್ನು ಸರಕಾರವು ಜಾರಿಗೆ ತಂದಿದೆ ಎಂದರು.

- Advertisement -

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಜಿ. ಹರೀಶ್ ಮಾತನಾಡುತ್ತಾ, ನಮ್ಮ ದೇಶವು ೧೯೫೦ ಜನವರಿ ೨೬ರಂದು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿಕೊಂಡಿತು. ಈ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸುತ್ತಾ ಪ್ರತಿಯೊಬ್ಬ ನಾಗರಿಕ ಜವಾಬ್ದಾರಿಯುತ ಪ್ರಜೆಯಾಗಿ ಬಾಳುವಂಥ ಮಾರ್ಗದರ್ಶನಗಳನ್ನು ಸಂವಿಧಾನವು ನೀಡಿದೆ.

ಈ ಸಂವಿಧಾನ ರಚಿಸಿದ ಸಮಿತಿಯು ಅಮೇರಿಕ, ಐರಿಶ್, ಬ್ರಿಟೀಶ್ ದೇಶಗಳ ಸಂವಿಧಾನದ ಅನೇಕ ಒಳ್ಳೆಯ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಆದಾಗ್ಯೂ ನಮ್ಮ ದೇಶಕ್ಕೆ ಪೂರಕವಾಗಬಹುದಾದ ಮಹತ್ವ ಅನೇಕ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಮಾನತೆ, ಜಾತ್ಯತೀತ, ಪ್ರಜಾತಂತ್ರ ಮತ್ತು ಸಾರ್ವಭೌಮತೆಯನ್ನು ಸಾರುವ ಮಹತ್ವ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ. ಹೀಗಾಗಿ ಭಾರತೀಯ ಸಂವಿಧಾನವು ನಮ್ಮ ದೇಶಕ್ಕೆ ಪವಿತ್ರ ಗ್ರಂಥವೆನಿಸಿದೆ.

ನ್ಯಾಯವಾದಿಗಳಾದ ಎಂ.ಎ.ಯಲಿಗಾರ ವಿಶೇಷ ಉಪನ್ಯಾಸ ನೀಡಿದರು. ಪ್ರಾಚಾರ್ಯ ಮಾರುತಿ ಎ. ದೊಂಬರ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಕೆ.ರಾಮರೆಡ್ಡಿ ಸ್ವಾಗತಿಸಿದರು, ಎಂ.ಸಿ.ಹಾದಿಮನಿ ವಂದಿಸಿದರು, ಆಶಿಫ್ ಜಂಗ್ಲಿಸಾಬನವರ್ ನಿರೂಪಿಸಿದರು.

- Advertisement -

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೋಧಕ, ಬೋಧಕೇತರ ಸಿಬ್ಬಂದಿ, ನಾಗರಾಜ ಸೋಗಿ, ಬಸವರಾಜ ಪುಟ್ಟಿ, ಮಲ್ಲಿಕಾರ್ಜುನ ಬೀಳಗಿ, ಎಸ್.ಎಂ. ಸಂಗ್ರೇಶಕೊಪ್ಪ, ಜಾವೀದ ತಾಂಬೋಳಿ, ಎಂ.ಎಫ್.ಶಾಬರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group